ಲೋಕದರ್ಶನ ವರದಿ
ಗದಗ 29: ಕವಿಗಳಿಗೆ ದಾಸರಾಗಿ, ದಾಸರಿಗೆ ಕವಿಗಳಾಗಿ, ಕನಕದಾಸರು ಕನ್ನಡ ಸಾರಸ್ವತ ಲೋಕದ ಶ್ರೇಷ್ಟ ದಾರ್ಶನಿಕ ಕವಿಗಳಾಗಿದ್ದಾರೆ ಎಂದು ಜಾನಪದ ವಿದ್ವಾಂಸರು ಹಾಗೂ ರಾಜ್ಯಮಟ್ಟದ ಕನಕಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಸಿದ್ದಣ್ಣ ಜಕಬಾಳ ಅಭಿಪ್ರಾಯಪಟ್ಟರು.
ಅವರು ಗದುಗಿನ ಬಸವೇಶ್ವರ ನಗರದಲ್ಲಿರುವ ಕಬ್ಬಿಗರ ಕೂಟದ ಸಾಹಿತ್ಯ ಭವನದಲ್ಲಿ 'ಸಂತ ಕನಕದಾಸರ ಜೀವನ ಮತ್ತು ಸಂದೇಶ' ಎಂಬ ವಿಷಯದ ಮೇಲೆ ಉಪನ್ಯಾಸವನ್ನು ನೀಡಿ ಮಾತನಾಡುತ್ತಾ ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೆ ಶೂದ್ರದಾಸರು. ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು,ಕವಿಗಳು ಹಾಗೂ ಮುಂಡಿಗೆಗಾರರಾಗಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸದ್ದಾರೆ. ಕನಕದಾಸರು ಮತ್ತು ಪುರದರದಾಸರನ್ನು ಕನರ್ಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲಿ ಬಂಧಿಸಲಾಗಿದೆ. ಕನಕದಾಸರು ಮೋಹನತರಂಗಿನಿ, ನಳಚರಿತ್ರೆ, ಹರಿಭಕ್ತಿಸಾರ, ನೃಸಿಂಹಸ್ತವ ಎಂಬ 5 ಶ್ರೇಷ್ಠ ಕೃತಿಗಳನ್ನು ರಚಿಸಿದ್ದಾರೆ. ಕನಕದಾಸರು 316 ಕೀರ್ತನೆಗಳನ್ನು ರಚಿಸಿದ್ದಾರೆ.
ಕನಕದಾಸರು ಅಂದಿನ ಸಮಾಜದಲ್ಲಿ ಬೇರೂರಿದ್ದ ಜಾತಿಯತೆಯನ್ನು ಕಿತ್ತೋಗೆಯಲು ಪ್ರಯತ್ನಿಸಿದ್ದಾರೆ. ಕನಕದಾಸರು ಹಲವಾರು ಮುಂಡಿಗೆಗಳನ್ನು ರಚಿಸಿದ್ದಾರೆ. ಸಮಾಜ ಸುಧಾರಕರಾಗಿ, ಕವಿಗಳಾಗಿ, ದಾಸರಾಗಿ, ಮುಂಡಿಗೆಗಾರಾಗಿ, ಶ್ರೇಷ್ಠ ಸಂತರಾಗಿ, ವಿಶ್ವಮಾನವರಾಗಿ, ದಾರ್ಶನಿಕರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮೈಲಾರಪ್ಪ ಮೆಣಸಗಿ ಮೆಮೋರಿಯಲ್ ಟ್ರಸ್ಟ್ನ ಕಾರ್ಯಾಧ್ಯಕ್ಷರಾದ ಜಯದೇವ ಮೆಣಸಗಿ ಮಾತನಾಡಿ, ಕನಕದಾಸರು ತಮ್ಮ ಕವನಗಳ ಮೂಲಕ ಸಮಾಜವನ್ನು ಸುಧಾರಿಸುತ್ತಾ ಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲವ ನೆಲೆಯನ್ನು ಬಲ್ಲೀರಾ ಎಂಬ ಮಾತನ್ನು ವಿಶ್ಲೇಷಣೆ ಮಾಡುತ್ತಾ, ಕನಕದಾಸರ ಶ್ರೇಷ್ಠತೆಯ ಕುರಿತು ಮಾತನಾಡಿರುತ್ತಾರೆ. ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಡಾ. ಶರಣು ಗೋಗೇರಿಯವರು ಅಧ್ಯಕ್ಷರಾದ ನಂತರ ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷರಾದ ಡಾ. ಶರಣು ಗೋಗೇರಿಯವರು ಮಾತನಾಡಿ, ಕನಕದಾಸರು ತಮ್ಮ ಸಾಹಿತ್ಯದಲ್ಲಿ ಸಮಾಜದಲ್ಲಿರುವ ಅಂಕು-ಡೊಂಕುಗಳನ್ನು ನಿವಾರಿಸಲು ನ್ಯಾಯನಿಷ್ಠುರಿಗಳಾಗಿ ವಿಷಯ ಪ್ರಸ್ತುತಪಡಿಸಿರುತ್ತಾರೆ. ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಎಳು ತಾಲ್ಲೂಕು ಘಟಕಗಳು ಪ್ರತಿವಾರ ಜಿಲ್ಲಾ ಕವಿಗೋಷ್ಠಿ, ಶಾಲಾ ಸಾಹಿತ್ಯ ಕಲರವ, ಮನೆಯಂಗಲದಲ್ಲಿ ಸಾಹಿತ್ಯ ಕಲರವ,ಕಾಲೇಜು ಸಾಹಿತ್ಯ ಕಲರವ ಮೊದಲಾದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಗದುಗಿನ ಯುವ ಕವಿ ಮತ್ತು ಕಲಾವಿದರಾದ ಕುಮಾರ ರಾಕೇಶ ಹಿರೇಮನಿ ಕವನ ವಾಚನ ಮಾಡಿದರು. ಲಕ್ಕುಂಡಿಯ ಖ್ಯಾತ ಜನಪದ ಕಲಾವಿದರಾದ ಶಿವು ಭಜಂತ್ರಿ ಮತ್ತು ತಂಡದವರಿಂದ ಜನಪದ ಸಂಗೀತ ಕಾರ್ಯಕ್ರಮ ನೆರವೇರಿತು.
ಪ್ರಾರಂಭದಲ್ಲಿ ಏಕನಾಥಸಾ ಹಾವನೂರ ಪ್ರಾಥರ್ಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದಶರ್ಿಗಳಾದ ಪ್ರಕಾಶ ಮಂಗಳೂರ ಸ್ವಾಗತಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದಶರ್ಿ ಅಶೋಕ ಹಾದಿ ನಿರೂಪಿಸಿದರು. ದತ್ತಪ್ರಸನ್ನ ಪಾಟೀಲ ವಂದಿಸಿದರು.
ಈ ಸಂದರ್ಭದಲ್ಲಿ ಅಂದಾನಪ್ಪ ವಿಭೂತಿ, ಪುಂಡಲೀಕ ಕಲ್ಲಿಗನೂರ, ಎಂ.ಆರ್. ಡೊಳ್ಳಿನ, ಡಾ. ಮಲ್ಲಣ್ಣ ರಾಟಿ, ಅ.ಓಂ. ಪಾಟೀಲ, ಜಯಶ್ರೀ ಶ್ರೀಗಿರಿ, ಸಿ.ಕೆ. ಕೇಸರಿ, ಸಿದ್ದುಸಾ ಪವಾರ, ಎಸ್.ಎಫ್. ಭಜಂತ್ರಿ, ಶಂಕರ ಗುರುಬಸಣ್ಣವರ, ಅಭಿಷೇಕ ಗುರುಬಸಣ್ಣವರ, ಜೆ.ಎ. ಪಾಟೀಲ, ರತ್ನಕ್ಕ ಪಾಟೀಲ, ಧರ್ಮಣ್ಣ ಬಡಿಗಣ್ಣವರ, ನಾಗಪ್ಪ ಅರಹುಣಸಿ, ಪ್ರ.ತೋ. ನಾರಾಯಣಪೂರ, ಎಸ್.ವಾಯ್. ಕಪ್ಪರದ, ಬಿ.ಆರ್. ಕಂಬಳಿ, ಡಿ.ಐ. ಮೇರವಾಡೆ, ರಾಜಶೇಖರ ಕರಡಿ, ಜಯಶ್ರೀ ಅಂಗಡಿ, ಅನುಸೂಯಾ ಮಿಟ್ಟಿ, ಮಂಜುಳಾ ವೆಂಕಟೇಶಯ್ಯ, ಎಚ್.ಎಸ್. ದಳವಾಯಿ, ಪಿ.ವಿ. ಇನಾಂದಾರ, ವಾಯ್.ಎಚ್. ಹಡಪದ, ಜೆ.ಎಚ್. ಸಿಕಂದರ್ ಮುಂತಾದವರು ಉಪಸ್ಥಿತರಿದ್ದರು