ಹಸಿದವರಿಗೆ ಅನ್ನ ನೀಡುವುದು ಮಹಾನ ಕಾರ್ಯ: ನ್ಯಾಯಾಧೀಶರಾದ ಎಸ್.ಜೆ.ಸಲಗರೆ

ಲೋಕದರ್ಶನ ವರದಿ

ಗದಗ 21: ಎಲ್ಲ ಸೇವೆಗಳಿಂತ ಹಸಿದವರಿಗೆ ಅನ್ನ ನೀಡುವುದು ಮಹಾನ ಸೇವೆಯಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ಎಸ್.ಜೆ.ಸಲಗರೆ ಅವರು ಹೇಳಿದರು. 

ನಗರದ ಹಳೇ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ರಾಮಕೃಷ್ಣ ಸೇವಾ ಪ್ರತಿಷ್ಠಾನದ ಅನ್ನಪೂಣರ್ೇಶ್ವರಿ ಪ್ರಸಾದ ನಿಲಯದ 5 ನೇ ವಾರ್ಷಿಕೋತ್ಸವ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸರಕಾರದ ಮಾಡದೇ ಇರುವ  ಸೇವೆಗಳನ್ನು ಸಾಮಾಜಿಕವಾಗಿ ಮಾಡುತ್ತ ಬಂದಿರುವ ಅನ್ನಪೂರ್ಣೀಶ್ವರಿ ಪ್ರಸಾದ ನಿಲಯದ ಸೇವೆ ಪ್ರಶಂಸನೀಯವಾಗಿದೆ. ಬರಿ 5 ರೂಗಳಿಗೆ ಹಸಿದು ಬಂದವದರಿಗೆ ಹೊಟ್ಟೆ ತುಂಬಾ ಊಟ ನೀಡುತ್ತಿರುವುದು ಪುಣ್ಯದ ಕಾರ್ಯವಾಗಿದೆ. ಸಂಘಟಿಕರ ಈ ಪ್ರಾಮಾಣಿಕ ಸೇವೆ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.

 ಹೊಸದಿಗಂತ ಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯ ವ್ಯವಸ್ಥಾಪಕರಾದ ವಿಠ್ಠಲದಾಸ ಕಾಮತ ಅವರು ಮಾತನಾಡಿ, ಕಸಿದು ತಿನ್ನುವರೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಹಸಿದು ಬಂದವರಿಗೆ ಬರಿ  5 ರೂ. ವಿದ್ಯಾಥರ್ೀನಿಯರಿಗೆ 2 ರೂ ಹಾಗೂ ವಿಕಲಚೇತನರಿಗೆ ಉಚಿತವಾಗಿ  ಊಟ ನೀಡುತ್ತಿರುವದು ನಿಜಕ್ಕೂ ಮೆಚ್ಚುವಂತಹ ಕಾರ್ಯವಾಗಿದೆ. ಇದು ನಿರಂತರವಾಗಿ ನಡೆಯಬೇಕು ಇದಕ್ಕೆ ಎಲ್ಲರೂ ಪ್ರೊತ್ಸಾಹ ನೀಡುವ ಮೂಲಕ ದೇಶಾದ್ಯಂತ ಈ ಪ್ರಸಾದ ನಿಲಯ ಪ್ರೇರಣೆಯಾಗಬೇಕು ಎಂದು ಹೇಳಿದ ಅವರು  ಹಿಂದೆ ಮನೆಯ ಒಳಗೆ ತಾಯಿ ಇರುತ್ತಿದ್ದಳು ಹೊರಗೆ ನಾಯಿ ಇರುತ್ತಿತ್ತು ಆದರೆ, ಇಂದಿನ ದಿನಗಳಲ್ಲಿ ನಾಯಿ ಒಳಗೆ ಇರುತ್ತದೆ ತಾಯಿಯನ್ನು ಹೊರಗೆ ಇಟ್ಟಿರುವುದು ನಮ್ಮ ಸಂಸ್ಕೃತಿಯಲ್ಲ ಪ್ರತಿಯೊಬ್ಬರು ತಾಯಿ ಹಾಗೂ ತಾಯ್ನಾಡನ್ನು ಕಾಪಾಡಬೇಕು ಎಂದು ಹೇಳಿದರು.  

  ಡಿಡಿಪಿಐ ಎನ್.ಎಚ್.ನಾಗೂರ ಅವರು ಮಾತನಾಡಿ, ಅರಿವು ಇಲ್ಲದಿದ್ದರೆ ನಡೆಯುವದು ಆದರೆ, ಹಸಿವನ್ನು ನೀಗಿಸಲು  ಆಹಾರ ಬೇಕೇ ಬೇಕು. ಅದರಲ್ಲಿ ವಿದ್ಯಾಥರ್ಿನಿಯರಿಗೆ 2 ರೂಗಳಿಗೆ ಹೊಟ್ಟೆ ತುಂಬಾ ಊಟ ನೀಡುವ ಮೂಲಕ ವಿದ್ಯಾಥರ್ೀನಿಯರ ಶಿಕ್ಷಣಕ್ಕೆ  ಪ್ರೊತ್ಸಾಹಿಸುತ್ತಿರುವುದು ಪ್ರಶಂಸನೀಯವಾಗಿದೆ ಎಂದು ಹೇಳಿದರು.  

ಡಾ. ಅಜಯ ಚೈತನ್ಯ ರಾಜು ಅವರು ಮಾತನಾಡಿ, ದೇವರನ್ನು ಪ್ರಾರ್ಥಿಸುವ ಹಸಿದ ಕೈಗಳಿಗೆ  ಇಂತಹ ಪ್ರಸಾದ ನಿಲಯದ ಮೂಲಕ ದೇವರು ಅವರ ಆಸೆಯನ್ನು ಈಡೇರಿಸುತ್ತಾನೆ ಎಂದು ಹೇಳಿದರು. 

ಸಾಮಾಜಿಕ ಸೇವೆ ಮಾಡುತ್ತಿರುವ ವೈದ್ಯ ದಂಪತಿಗಳಾದ ಡಾ.ಪಿ.ಕೆ. ನೂರಾನಿ ಹಾಗೂ ಡಾ.ಸಾಧಿಕಾ ನೂರಾನಿ ಮತ್ತು ಡಾ.ಅಜಯ ಚೈತನ್ಯ ರಾಜು ಹಾಗೂ ಡಾ.ಸವಿತಾ ಅಜಯ ರಾಜು ದಂಪತಿಗಳು, ಡಿಡಿಪಿಐ ಎನ್.ಎಚ್.ನಾಗೂರ,  ಡಿಎಚ್ಒ ಡಾ.ಸತೀಶ ಬಸರಿಗಿಡದ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಂ.ಎಚ್.ಸವದತ್ತಿ, ಇಕೋ ಕ್ಲಬ್ನಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದ ಗೊಜನೂರು ಸರ್ಕಾರಿ ಪ್ರೌಡಶಾಲೆಯ ವಿದ್ಯಾರ್ಥಿಗಳಾದ ಸುದೀಪ ಬನ್ನಿಮಟ್ಟಿ, ಸುಧಾ ಯರಗುದ್ದಿ, ಶಿಕ್ಷಕಿ ಸವಿತಾ ಯಾಳಗಿ, ಪ್ರಧಾನ ಶಿಕ್ಷಕ ರವಿ ಬೆಂಚಳ್ಳಿ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಕುರ್ತಕೋಟಿಯ ಅಂಬೇಡ್ಕರ ಕಲಾತಂಡದಿಂದ ಬೇಟಿ ಬಚಾವೀ ಭೇಟಿ ಪಡಾವೂ ಕುರಿತು ಜಾಗೃತಿ ಮೂಡಿಸಲಾಯಿತು. 

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಸಿಇಒ  ಡಾ.ಕೆ.ಆನಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ.ಎಚ್.ಎಚ್.ಕುಕನೂರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶೈಲಾ ಕುರಹಟ್ಟಿ, ಅಂಚೆ ಇಲಾಖೆಯ ಅಧಿಕಾರಿಗಳಾದ ರಶೀದಸಾಹೇಬ, ಸುಭಾಸ ಮೋಟೆಮ್ಮನವರ, ಶೇಖಣ್ಣ ಮುನವಳ್ಳಿ, ಶೇಖಣ್ಣ ಕವಳಿಕಾಯಿ,ಬಾಲಚಂದ್ರ ಕೋಟಿ, ಜಿ.ಪಿ.ಗೂಳಗೌಡ್ರ, ಜಯಣ್ಣ ಶೆಟ್ಟರ, ಡಾ.ನಿಂಬಣ್ಣವರ, ಗಂಗಣ್ಣ ಕೋಟಿ, ತುಕರಾಮ ಬೇಂದ್ರೆ, ಪ್ರಕಾಶ ಅಸುಂಡಿ,  ವಿ.ಕೆ.ಕರೇಗೌಡ್ರ, ಮೌಲಾನ ಮುಧೋಳ, ರಾಜು ಶೆಲ್ಲಿಕೇರಿ, ಹುಬ್ಬಳ್ಳಿಯ ಶಿವಕುಮಾರ ಕಡಿ, ಮಹೇಶ ಕೋರಿ, ಈರಣ್ಣ ಮಂದಾಲಿ ಸೇರಿದಂತೆ ಮುಂತಾದವರು    ಉಪಸ್ಥಿತರಿದ್ದರು. ಪ್ರಸಾದ ನಿಲಯ ಅಧ್ಯಕ್ಷ ಎಸ್.ಎಸ್.ಕಳಸಾಪೂರ ಅಧ್ಯಕ್ಷತೆ ವಹಿಸಿದ್ದರು.  ಪದಾಧಿಕಾರಿಗಳಾದ ಮಂಜುನಾಥ ಭಗವತಿ ಸ್ವಾಗತಿಸಿದರು. ಮಂಜುನಾಥ ಬಮ್ಮನಕಟ್ಟಿ ಕಾರ್ಯಕ್ರಮ ನಿರೂಪಿಸಿದರು.  ವೆಂಕಟೇಶ ಇಮರಾಪೂರ ವಂದಿಸಿದರು.