ಮುಗಳಖೋಡ: ಜಗತ್ತಿಗೆ ಮಾನವತಾವಾದದ ಸಂದೇಶವನ್ನು ನೀಡಿದ ಮಹಾನ್ ಸಂತ ಭಕ್ತ ಕನಕದಾಸರು. ಇವರುನ್ನು ಯಾವುದೇ ಜಾತಿಗೆ ಸೀಮಿತಗೊಳಸದೇ ವಿಶಾಲ ಹೃದಯದಿಂದ ನೋಡಿ ಅವರ ತತ್ವಾದರ್ಶಗಳನ್ನು ಬೇಳಿಕೊಳ್ಳಬೇಕೆಂದು, ವಿಶ್ವಕ್ಕೆ ತನ್ನ ಸಾಹಿತ್ಯದ ಮೂಲಕ ಬೆಳಕನ್ನು ಚೆಲ್ಲಿದ ಮಹಾನ್ ವ್ಯಕ್ತಿ ಕನಕದಾಸರು ಎಂದು ಡಾ.ಸಿ.ಬಿ.ಕುಲಿಗೋಡ ಪದವಿ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಪ್ರಕಾಶ ಚ ಕಂಬಾರ ಅವರು ವಿದ್ಯಾರ್ಥಿಗಳಿಗೆ ತಮ್ಮ ಅನುಭಾವ ಮಾತುಗಳನ್ನು ಹೇಳಿದರು.
ಅವರು ಪಟ್ಟಣದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಶುಕ್ರವಾರ ದಿ 15ರಂದು ಬೆಳಗ್ಗೆ 10 ಗಂಟೆಗೆ ಆಯೋಜಿಸಿದ ವಿಶ್ವಮಾನವ, ಸಂತಶ್ರೇಷ್ಠ ಭಕ್ತ ಕನಕದಾಸರ 532ನೇ ಜಯಂತಿಯ ಮುಖ್ಯ ಅಥಿತಿ ಸ್ಥಾನವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮುಖ್ಯೋಪಾಧ್ಯಾಯರಾದ ಎಸ್.ಎಸ್.ಮಧಾಳೆ ಅವರು ಮಾತನಾಡಿ ಕನದದಾಸರು ಕೇವಲ ಒಂದೇ ಜಾತಿಗೆ ಸೀಮಿತವಲ್ಲ, ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮಹಾನ್ ವ್ಯಕ್ತಿ ಈ ಕನಕದಾಸರು. ಅವರ ಕಿರ್ತನೆಗಳು ಇಂದಿಗೂ ಕೂಡಾ ಪ್ರಸ್ತುತವಾಗಿ ಎಂದು ಹೇಳಿದರು.
ನಂತರದಲ್ಲಿ ಜೆ.ಬಿ.ಮೇಕನಮರಡಿ, ಆರ್.ಜಿ.ಹುಬ್ಬಳ್ಳಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಹೈಸ್ಕೂಲ್ ಮತ್ತು ಕಾಲೇಜು ವಿಭಾಗದ ಮಕ್ಕಳಿಂದ ಕನಕದಾಸರ ಕುರಿತು ಬಾಷಣಗಳು ಜರುಗಿದವು.
ಕಾರ್ಯಕ್ರಮದಲ್ಲಿ ಬ.ನೀ.ಕುಲಿಗೋಡ ಪ್ರೌಢಶಾಲೆ, ಪದವಿ-ಪೂರ್ವ, ಡಾ.ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದ ಎಲ್ಲ ಮುಖ್ಯಸ್ಥರು ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಜೆ.ಆರ್.ಮೊಗವೀರ ನಿರೂಪಿಸಿದರು, ಆರ್.ಎಸ್.ಶೇಗುಣಸಿ ಸ್ವಾಗತಿಸಿದರು, ಎಸ್.ಎಸ್.ತಮದಡ್ಡಿ ವಂದಿಸಿದರು.