ಲೋಕದರ್ಶನ ವರದಿ
ಕಾಗವಾಡ 15: ದಾಸ ಪರಂಪರೆಯ ಶ್ರೇಷ್ಠ ಸಂತ ಭಕ್ತ ಕನಕದಾಸರು ಸರಳ ಜೀವನದಿಂದ ಭಗವಂತನನ್ನೇತನ್ನೆಡೆಗೆ ಕರುಣಿಸಿಕೊಂಡು ಸಮಾಜದಲ್ಲಿನ ಮೇಲು-ಕೀಳು ಎಂಬ ಭಾವನೆಗಳನ್ನು ನಯವಾಗಿ ತಿರಸ್ಕರಿಸಿ ಸಮಾನತೆಯ ಬೀಜವನ್ನು ಈ ನೆಲದಲ್ಲಿ ಭಿತ್ತಿದ ಮಹಾಮಾನವತಾವಾದಿ ಶ್ರೀ ಕನಕದಾಸರು ಎಂದು ಪ್ರಾಚಾರ್ಯರಾದ ಡಾ.ಎಸ್.ಓ. ಹಲಸಗಿ ಹೇಳಿದರು.
ಶುಕ್ರವಾರರಂದು ಶಿವಾನಂದ ಮಹಾವಿದ್ಯಾಲಯದಲ್ಲಿ ನಡೆದ ಕನಕದಾಸರ ಜಯಂತಿ ಆಚರಣೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು. ಕನಕದಾಸ ವಿಜಯನಗರ ಅರಸರಕಾಲದಲ್ಲಿ ದಂಡನಾಯಕರಾಗಿದ್ದರೂ ಅಧಿಕಾರವನ್ನು ಅವರೆಂದೂತಲೆಗೆ ಏರಿಸಿಕೊಳ್ಳಲಿಲ್ಲ. ವೈರಾಗ್ಯ ಮೂತರ್ಿಯಾಗಿ ಈ ನಾಡಿಗೆ 12ನೇ ಶತಮಾನದ ಶರಣರತರುವಾಯ ಸಮಾನತೆಯನ್ನು ಹಾಗೂ ಸಮಾಜೋ-ಧಾಮರ್ಿಕ ಆಂದೋಲನಗಳನ್ನು ಮುಂದುವರಿಸಿದ ಕೀತರ್ಿ ಕನಕದಾಸರಿಗೆ ಸಲ್ಲುತ್ತದೆಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಹಾವಿದ್ಯಾಲಯದ ಇಂಗ್ಲೀಷ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಜೆ.ಕೆ.ಪಾಟೀಲ ಕನಕದಾಸರ ಜೀವನ - ಸಾಧನೆಗಳ ಕುರಿತಾಗಿ ಮಾತನಾಡಿ ಕನಕದಾಸರು ತಮ್ಮ ಭಕ್ತಿ-ಭಾವದಿಂದ ಸಾಕ್ಷತ್ ಶ್ರೀ ಕೃಷ್ಣನನ್ನೇತಮ್ಮೆಡೆಗೆ ತಿರುಗಿಸಿಕೊಂಡು 'ಕನಕನ ಕಿಂಡಿ'ಯೆಂದೇ ಇಂದಿಗೂ ನೆನಪುಳಿಯುವಂತೆ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪದವಿ ಮಹಾವಿದ್ಯಾಲಯದ ಉಪ-ಪ್ರಾಚಾರ್ಯ, ಪ್ರೊ.ಎಸ್.ಎಸ್.ಬಾಗನೆ, ವಿದ್ಯಾಥರ್ಿಕಲ್ಯಾಣಾಧಿಕಾರಿ ಪ್ರೊ. ಬಿ.ಎ.ಪಾಟೀಲ ಸಿಬ್ಬಂದಿ ಕಾರ್ಯದಶರ್ಿ ಡಾ.ಎಸ್.ಎ.ಕಕರ್ಿಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಪಿ.ಬಿ.ನಂದಾಳೆ ಸೇರಿದಂತೆಇತರರು ಉಪಸ್ಥಿತರಿದ್ದರು. ಪ್ರೊ.ಎ.ಎಂ.ಜಕ್ಕಣ್ಣವರ ನಿರೂಪಿಸಿ, ವಂದಿಸಿದರು.