ಸಿದ್ದರಾಮೇಶ್ವರ ಶ್ರೇಷ್ಠ ಕರ್ಮಯೋಗಿ

 ಗುಳೇದಗುಡ್ಡ16:ಪಟ್ಟಣದ ನೆಹರೂ ಇಂಟನ್ಯರ್ಾಷನಲ್ ಪಬ್ಲಿಕ್ ಶಾಲೆಯಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಿಸಲಾಯಿತು. 

      ಶಾಲೆಯ ಪ್ರಾಚಾರ್ಯ  ಇ. ಸಾಯಿಕೃಷ್ಣ  ಮಾತನಾಡಿ, ಸೊನ್ನಲಿಗೆ ಸಿದ್ದರಾಮರು ಕಾಯಕಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದರು. ಭಾರತ ವಿಶಿಷ್ಟ ದೇಶ, ಇಂತಹ ದೇಶದಲ್ಲಿಯ ಶರಣರು 12 ನೇ ಶತಮಾನದಲ್ಲಿಯೇ ಕೊಟ್ಟಂತಹ ವಚನ ಸಾಹಿತ್ಯ ಪ್ರಪಂಚದಲ್ಲಿಯೇ ಶ್ರೇಷ್ಠವೆನಿಸಿದೆ. ಕಾಯಕವೇ ಕೈಲಾಸ ಎಂದು ಶರಣರು ಪ್ರತಿಪಾದಿಸಿದ್ದರು ಎಂದರು. ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗ ಮತ್ತು ಮಕ್ಕಳು ಉಪಸ್ಥಿತರಿದ್ದರು.