ತ್ರಿವೇಣಿ ಸಂಗಮದ ಮಹಾನುಭಾವಿ ಕವಿ ಸರ್ವಜ್ಞ

ಹಾವೇರಿ 13: ಸ್ವಭಾವ ಸಹಜ ಪ್ರತಿಭಾಶಕ್ತಿ, ಸಂಪಾದಿತ ಅಪಾರ ಜ್ಞಾನ ಮತ್ತು ಲೋಕಾನುಭವಗಳೆಂಬ ತ್ರಿವೇಣಿ ಸಂಗಮದ ಕಾವ್ಯಗಂಗೆಯನ್ನು ಲೋಕಕಲ್ಯಾಣಕ್ಕಾಗಿ ಪ್ರವಹಿಸಿದ ಮಹಾನುಭಾವಿ ಕವಿ ಸರ್ವಜ್ಞ ಎಂದು ಡಾ.ಎಸ್.ಪಿ ಗೌಡರ್ ಹೇಳಿದರು.     ನಗರದ ಕೆ.ಎಲ್.ಇ ಸಂಸ್ಥೆಯ ಗುದ್ಲೇಪ್ಪ ಹಳ್ಳಿಕೆರಿ ಮಹಾವಿದ್ಯಾಲಯ, ಕನ್ನಡ ವಿಭಾಗವು ಆಯೋಜಿಸಿದ 'ಅನುಭಾವಿ ಸರ್ವಜ್ಞ' ವಿಷಯಾಧಾರಿತ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಿರೇಕೆರೂರು ಸರಕಾರಿ ಪ್ರಥಮ ದಜರ್ೆ ಕಾಲೇಜು ಪ್ರಾಚಾರ್ಯರಾದ ಡಾ.ಎಸ್.ಪಿ ಗೌಡರ್ ಸರ್ವಜ್ಞ ಮೂತರ್ಿಗೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತ ಹುಟ್ಟಿನಿಂದಲೆ ದೈವಭಕ್ತನಾಗಿದ್ದ ಸರ್ವಜ್ಞ ಬೆಳೆದು ದೊಡ್ಡವನಾಗಿ ಊರೂರು ಅಲೆಯುತ್ತ ಸಂಧಿಸಿದ ಹಿರಿಯ ಚೇತನಗಳಿಂದ ಆಧ್ಯಾತ್ಮಜ್ಞಾನ ಸಂಗ್ರಹಿಸಿ ಜೊತೆಜೊತೆಗೆ ಲೋಕಾನುಭವ ಪಡೆಯುತ್ತ ಗೋಚರವಾದ ನಿತ್ಯಸತ್ಯವನ್ನು ಜಾನಪದ ಛಂದಸ್ಸಾದ ತ್ರಿಪದಿಯಲ್ಲಿ ಜನಸಾಮಾನ್ಯರಿಗೂ ತಿಳಿಯುವಂತೆ- ಜಾರಿಣಿಯಿಂದ ಬ್ರಹ್ಮಜ್ಞಾನಿಯವರೆಗೂ ಮತ್ತು ರಾಜನೀತಿಯಿಂದ ರಸವಾದದವರೆಗೂ ಕುಲಬೇಧವಿಲ್ಲದೆ ತಿಳಿಸಿದನು. ಈತನ ಜಂಗಮ ವಿಶ್ವಕೋಶವನ್ನು ಜನ ಸರ್ವಜ್ಞನೆಂದು ಕರೆದರು. ಸರ್ವಜ್ಞನ ಅನುಭಾವಿ ವಚನಗಳು ಇಂದಿಗೂ ಪ್ರಸ್ತುತವೆಂದು ಹೇಳಿದರು.

     ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯ ಡಾ.ಎಮ್.ಎಸ್ ಯರಗೊಪ್ ಮಾತನಾಡುತ್ತ ಇದೊಂದು ಅಪರೂಪದ ಕಾರ್ಯಕ್ರಮವಾಗಿದ್ದು, ಹನ್ನೆರಡನೆ ಶತಮಾನದ ವಚನಕಾರರ ವಚನಗಳಿಂದ ಪ್ರಭಾವಿತನಾದ ಸರ್ವಜ್ಞನ ಕುರಿತು ಅನೇಕ ಜಿಜ್ಞಾಸೆಗಳಿವೆ. ಅರ್ಪಣಾ ಭಾವ ಮತ್ತು ದೇಶಿಯ ಸೊಗಡಿನಿಂದ ಕೂಡಿದ ಈತನ ವಚನಗಳು ಸಾರ್ವಕಾಲಿಕ ಸತ್ಯವನ್ನು ಹೇಳುತ್ತವೆ. ಪ್ರತಿಯೊಬ್ಬರೂ ಸರ್ವಜ್ಞನ ವಚನಗಳನ್ನು ಕಾರ್ಯರೂಪಕ್ಕೆ ತರಬೇಕೆಂದು ಕಿವಿಮಾತು ಹೇಳಿದರು. 

     ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ವಿದ್ಯಾಥರ್ಿ-ವಿದ್ಯಾಥರ್ಿನಿಯರು ಹಾಜರಿದ್ದ ಕಾರ್ಯಕ್ರಮದ ಆರಂಭದಲ್ಲಿ ಸಹನಾ ಪ್ರಾಥರ್ಿಸಿದರು. ವಿಭಾಗದ ಮುಖ್ಯಸ್ಥರಾದ ಡಾ.ಜಗದೀಶ ಎಫ್ ಹೊಸಮನಿ ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ.ಎಸ್.ಆರ್ ನಾಯಕ್ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಶ್ರೀದೇವಿ ದೊಡ್ಡಮನಿ ವಂದಿಸಿದರು. ಪ್ರೊ. ಶಮಂತ ಕುಮಾರ ಕೆ.ಎಸ್ ಕಾರ್ಯಕ್ರಮ ನಿರೂಪಿಸಿದರು.