ರಾಣೇಬೆನ್ನೂರು05: ಹಾಸನ ಜಿಲ್ಲೆಯ ಬೇಲೂರು-ಹಳೇಬೀಡಿನಲ್ಲಿ ಕಳೆದ ಫೆ.1ರಿಂದ ನಡೆಯುತ್ತಿರುವ ಶ್ರೀ ತರಳಬಾಳು ಹುಣ್ಣಿಮೆ ಮಹೋತ್ಸವ ಧಾರ್ಮಿಕ ಸಮಾರಂಭದಲ್ಲಿ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಶಾಸಕ ಅರುಣಕುಮಾರ ಪೂಜಾರ ಮತ್ತು ಅಪಾರ ಭಕ್ತರು ಪಾಲ್ಗೊಂಡಿದ್ದರು.
ಶ್ರೀ ತರಳಬಾಳು ಜಗದ್ಗುರು ಶ್ರೀಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಭೇಟಿಮಾಡಿ ಆಶೀವರ್ಾದ ಪಡೆದ ಅರುಣಕುಮಾರ ಪೂಜಾರ ಮತ್ತು ತಾಲೂಕಿನ ಅನೇಕ ಗಣ್ಯರು ಮುಂದಿನ ವರ್ಷದ ತರಳಬಾಳು ಹುಣ್ಣಿಮೆ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ವಿವಿಧ ಸಮಾಜಗಳ ಗಣ್ಯರು, ಮುಖಂಡರು, ನಾಗರೀಕರು ಪಾಲ್ಗೊಂಡಿದ್ದರು.