ಲೋಕದರ್ಶನ ವರದಿ
ಬಾಗಲಕೋಟೆ 16: ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ವಷರ್ಾಚರಣೆ ಅಂಗವಾಗಿ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಮ್ಮಿಕೊಂಡ ಗಾಂಧಿ-150 ಸ್ತಬ್ದಚಿತ್ರ ಅಭಿಯಾನಕ್ಕೆ ಬಾದಾಮಿಯ ಗಡಿಭಾಗದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಬಾದಾಮಿಯ ಕಾಳಿದಾಸ ಕಾಲೇಜು ಮೈದಾನಕ್ಕೆ ಆಗಮಿಸಿದ ಸ್ತಬ್ದಚಿತ್ರಕ್ಕೆ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ, ಜಿ.ಪಂ ಉಪಕಾರ್ಯದಶರ್ಿ ಅಮರೇಶ ನಾಯಕ, ಉಪವಿಭಾಗಾಧಿಕಾರಿ ಎಚ್.ಜಯ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ತಹಶೀಲ್ದಾರ, ತಾ.ಪಂ ಕಾರ್ಯನಿವರ್ಾಹಕ ಅಧಿಕಾರಿಗಳು ಗಾಂಧಿ ಪ್ರತಿಮೆಗೆ ನೂಲಿನ ಹಾರ ಹಾಕಿ ಪುಷ್ಟ ಅಪರ್ಿಸಿದರು. ಗಾಂಧಿ ಕುರಿತಾದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಶಿಬಿರಕ್ಕೆ ಚಾಲನೆ ನೀಡಲಾಯಿತು.
ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ ಅವರು
ಗಾಂಧೀಜಿಯವರು ಶಾಂತಿ, ಸತ್ಯ ಮತ್ತು ಅಹಿಂಸೆಯ ಅಸ್ತ್ರವನ್ನು ಬಳಸುವ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಪ್ರಪಂಚಕ್ಕೆ ಮಹಾತ್ಮರಾದವರು. ತಮ್ಮ ಗುರಿಯನ್ನು ತಲುಪಲು ಸತ್ಯಾಗ್ರಹವನ್ನು ಒಂದು ಅಸ್ತ್ರವನ್ನಾಗಿ ಬಳಸಿಕೊಂಡಿದ್ದರು. ಈ ಅಸ್ತ್ರವನ್ನು ಅವರ ತಾಯಿಯಿಂದ ಕಲಿತಿದ್ದು. ಗಾಂಧೀಜಿಯವರ ತಂದೆ, ಅವರ ತಾಯಿಯನ್ನು ಬೇದಾಗ ಊಟವನ್ನು ಬಿಡುವ ಮೂಲಕ ಅವರ ಆಗ್ರಹವನ್ನು ತೋರಿಸುತ್ತಿದ್ದರು. ಅವರ ಆಗ್ರಹವೇ ಗಾಂಧೀಜಿಯವರಿಗೆ ಸತ್ಯಾಗ್ರಹಕ್ಕೆ ಕಿಡಿಯಾಗಿ ಪರಿಣಮಿಸಿತ್ತು ಎಂದರು.
ತಾಯಿ ಪುಥಳಿಬಾಯಿಯ ಸತ್ಯ ಮತ್ತು ಅಹಿಂಸೆಯ ಚಿಕ್ಕ ಕಿಡಿಯನ್ನು ಅಸ್ತ್ರವನ್ನಾಗಿಸಿ ಬಳಸಿ ಬ್ರಿಟಿಷರ ವಿರುದ್ದ ಉಪವಾಸ ಸತ್ಯಾಗ್ರಹ ಮಾಡಿ ದೇಶಕ್ಕೆ ಸ್ವಾತಂತ್ರ್ಯಗಳಿಸಿಕೊಟ್ಟಿದ್ದು, ಅವರ ವ್ಯಕ್ತಿತ್ವವನ್ನು ಹೆಚ್ಚಿಸಿದೆ. ಗಾಂಧೀಜಿಯವರ ವಿಚಾರಧಾರೆಗಳ ಬಗ್ಗೆ ಇಂದಿನ ಯುವ ಜನತೆ ಅರಿಯುವುದು ಅಗತ್ಯವಾಗಿದೆ. ಅವರ ಜೀವನ ಚರಿತ್ರೆಯ ಪುಸ್ತಕಗಳನ್ನು ಓದಿ ಅರ್ಥ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆ ಎಂದರು. ಈ ಅಭಿಯಾನ ವಿವಿಧ ತಾಲೂಕುಗಳಿಗೆ ಸಂಚರಿಸಿ ಮುಂದುವರೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ ಉಪಕಾರ್ಯದಶರ್ಿ ಅಮರೇಶ ನಾಯಕ, ಉಪವಿಭಾಗಾಧಿಕಾರಿ ಎಚ್.ಜಯ, ಕೃಷಿ ಇಲಾಖೆಯ ಉಪನಿದರ್ೇಶಕ ಕೊಂಗವಾಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿದರ್ೇಶಕ ಬಸವರಾಜ ಶಿರೂರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕಿ ಎಂ.ಆರ್.ಕಾಮಾಕ್ಷಿ, ಜಿಲ್ಲಾ ವಾತರ್ಾಧಿಕಾರಿ ಮಂಜುನಾಥ ಸುಳ್ಳೊಳ್ಳಿ, ತಹಶೀಲ್ದಾರ, ತಾ.ಪಂ ಕಾರ್ಯನಿವರ್ಾಹಕ ಅಧಿಕಾರಿಗಳು ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸ್ತಬ್ದಚಿತ್ರ ಮೆರವಣಿಗೆ ಕಾಳಿದಾಸ ಕಾಲೇಜು ಮೈದಾನದಿಂದ ಪ್ರಾರಂಭವಾಗಿ ರಾಮದುರ್ಗ ಕ್ರಾಸ್ ಮಾರ್ಗವಾಗಿ ಪ್ರವಾಸೋದ್ಯಮ ಇಲಾಖೆಯ ಪರಿವೀಕ್ಷಣಾ ಮಂದಿರಕ್ಕೆ ಮುಕ್ತಾಯವಾಯಿತು. ಮೆರವಣಿಗೆಯಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳು ವಿವಿಧ ಜಾನಪದ ಕಲಾವಿದರು, ಶಾಲಾ-ಕಾಲೇಜು ವಿದ್ಯಾಥರ್ಿಗಳು, ಅಂಗನವಾಡಿ ಕಾರ್ಯಕತರ್ೆಯರು ಪಾಲ್ಗೊಂಡಿದ್ದರು.