ಮಹಾ ಮೈತ್ರಿ: ಪವಾರ್- ಸೋನಿಯಾ ಅಂತಿಮ ಮಾತುಕತೆ

ಮುಂಬೈ, ನ18 :       ಮಹಾರಾಷ್ಟ್ರದಲ್ಲಿ ಹೊಸ ಸರಕಾರ ರಚನೆ ಕುರಿತು  ಸೋಮವಾರ ಎನ್ಸಿಪಿ ನಾಯಕ ಶರದ್ ಪವಾರ್ ಹಾಗೂ   ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತುಕತೆ ನಡೆಯಲಿದ್ದು ಹೊಸ ಸರ್ಕಾರ ರಚನೆ ಕುರಿತು ಸ್ಪಷ್ಟ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ.    ರಾಜ್ಯದಲ್ಲಿ  ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಕುತೂಹಲಕ್ಕೆ ಅಂತಿಮವಾಗಿ ಇನ್ನೂ ತೆರೆಬಿದ್ದಿಲ್ಲ.. ಬಿಜೆಪಿ ಜೊತೆಗಿನ ಮೈತ್ರಿಗೆ ಗುಡ್ ಬೈ ಹೇಳಿರುವ   ಶಿವಸೇನೆ ಈ ಬಾರಿ ಕಾಂಗ್ರೆಸ್- ಎನ್ಸಿಪಿ ಜೊತೆ ಸೇರಿ ಸರ್ಕಾರ ರಚಿಸಲಿದೆ ಎಂದು ಹೇಳುತ್ತಿದ್ದರೂ ಇನ್ನು  ಯಾವುದೂ ಸರಿಯಾಗಿ ಅಂತಿಮ ಹಂತಕ್ಕೆ ಬಂದಿಲ್ಲ  ಎನ್ನಲಾಗಿದೆ.  ಇಂದು ಇಬ್ಬರೂ ನಾಯಕರ ನಡುವೆ ಅಂತಿಮ ಮಾತುಕತೆ ನಡೆಯಲಿದೆ. ಬಹುತೇಕ ಈ ಎರಡೂ ಪಕ್ಷಗಳು ಶಿವಸೇನೆಯೊಂದಿಗೆ ಕೈಜೋಡಿಸುವುದು ಹೆಚ್ಚು ಕಡಿಮೆ ಖಚಿತ ಎಂದು ಹೇಳಲಾಗಿದೆ.  ಈ ನಡುವೆ ಮುಂಬೈನ  ಮಾತನಾಡಿದ  ಎನ್ ಸಿಪಿ  ವಕ್ತಾರ ನವಾಬ್ ಮಲಿಕ್, ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಕೊನೆಯಾಗಿ,  ಪರ್ಯಾಯ ಸರ್ಕಾರ  ರಚನೆಯಾದಾಗಲೇ  ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ ಎಂದೂ  ಹೇಳಿದ್ದಾರೆ .