ಬೆಂಗಳೂರು,ನ 24: ಮುಖ್ಯಮಂತ್ರಿಗಳು ಪ್ರಾಣ ಕೊಡಬೇಕಾಗಿರೋದು ಈ ರಾಜ್ಯದ ಜನರ ಸಮಸ್ಯೆಗಳಿಗಾಗಿ ಆದರೆ ಇವರ ಬಾಯಲ್ಲಿ ಅನರ್ಹರ ಆಮಿಷಕ್ಕೆ ಒಳಗಾಗಿರುವ ಶಾಸಕರಿಗಾಗಿ ಪ್ರಾಣ ಕೊಡುತ್ತೇನೆ ಎಂದು ಹೇಳಿದ್ದಾರೆ.ಇಂತಹ ಮುಖ್ಯಮಂತ್ರಿ ನಿಮಗೇ ಬೇಕಾ? ಎಂದು ಮತದಾರರಿಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಯಶವಂತಪುರದ ಜೆಡಿಎಸ್ ಅಭ್ಯಥರ್ಿ ಜವರಾಯಿಗೌಡರ ಪರ ಪ್ರಚಾರದ ವೇಳೆ ಮಾತನಾಡಿದ ಅವರು,ನಾನು ಎಂದಿಗೂ ಜಾತಿಯ ಹೆಸರಲ್ಲಿ ರಾಜಕಾರಣ ಮಾಡಿಲ್ಲ.ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬಡ ಜನರು ಭೇಟಿ ಮಾಡುವು ದಕ್ಕೆ ಸಾಧ್ಯಗಾವುದಿಲ್ಲ.ಈ ಭಾಗದ ಮಾಜಿ ಶಾಸಕರು ಹಿಂದಿ ನ ಸಕರ್ಾರ ಹಣವನ್ನೇ ನೀಡಿಲ್ಲ ಎಂದು ಹೇಳಿದ್ದಾರೆ.ನಾನು ಅವರಿಗೆ ಸವಾಲು ಹಾಕುತ್ತೇನೆ.ಈ ಬಗ್ಗೆ ಬಹಿರಂಗ ಚಚರ್ೆಗೆ ಸಿದ್ದನಿದ್ದೇನೆ.ನೂರಾರು ಕೋಟಿ ಈ ಕ್ಷೇತ್ರಕ್ಕೆ ಅನುದಾನ ಕೊಟ್ಟಿದ್ದೇನೆ.ಈ ಅಭ್ಯಥರ್ಿ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಬಿಜೆಪಿ ಅಭ್ಯಥರ್ಿ ಎಸ್ ಟಿ ಸೋಮಶೇಖರ್ ವಿರುದ್ಧ ಕುಮಾರಸ್ವಾಮಿ ತಿರುಗೇಟು ನೀಡಿದರು.
ಬಿಜೆಪಿ ಸರ್ಕಾರ ವನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂದು 17 ಶಾಸಕರಿಗೆ ಆಮಿಷ ಒಡ್ಡಿ ನಮ್ಮ ಸರ್ಕಾರ ಪತನಗೊಳಿಸಿದರು. ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಚುನಾವಣಾ ಪ್ರಚಾರ ದ ವೇಳೆ ಅಭಿವೃದ್ಧಿ ಬಗ್ಗೆ ಮಾತನಾಡಿದ್ದು,ಅನರ್ಹರಿಗಾಗಿ ಪ್ರಾಣ ಕೊಡುತ್ತೇನೆ ಎಂದು ಹೇಳುತ್ತಿದ್ಧಾರೆ.ಗೋಕಾಕ್ ನಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸಮುದಾಯ ಏನಾದ ರೂ ಆಗಲಿ,ಬೇರೆಯವರು ಗೆಲ್ಲಲಿ ಎಂದು ಹೇಳುತ್ತಾರೆ.ಇವರು ಎಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ ಎನ್ನುವುದನ್ನು ನೀವೇ ನೋಡಿ ಎಂದು ಲೇವಡಿ ಮಾಡಿದರು.
ಈ ಪಾಪದ ಸರ್ಕಾರ ವನ್ನು ಮುಂದುವರೆಸಬೇಕಾ? ಅಥವಾ ಅನರ್ಹರಿಗೆ ಶಿಕ್ಷೆ ಕೊಟ್ಟು ಪ್ರಜಾಪ್ರಭುತ್ವ ಉಳಿಸಬೇಕಾ...? ಎನ್ನುವುದನ್ನು ನೀವು ತೀಮರ್ಾನ ಮಾಡಿ.ಡಿಸೆಂಬರ್ 9ರ ನಂತರ ಹೊಸ ರಾಜಕೀಯ ಧ್ರುವೀಕರಣಕ್ಕೆ ಸಹಕಾರ ಕೊಡಿ ಎನ್ನುವ ಮೂಲಕ ಸರ್ಕಾರ ಪತನದ ಮುನ್ಸೂಚನೆ ನೀಡಿದರು.
ಯಶವಂತಪುರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನಮ್ಮ ಕಾರ್ಯಕರ್ತರಿಗೆ ತೊಂದರೆ ನೀಡುತ್ತಿದ್ದಾರೆಂಬ ಮಾಹಿತಿ ಇದೆ.ಆ ಪೊಲೀಸ್ ಅಧಿಕಾರಿಗೆ ಎಚ್ಚರಿಕೆ ನೀಡುತ್ತಿದ್ದೇನೆ.ನಿಮ್ಮ ನಡವಳಿಕೆ ಬದಲಿಸಿಕೊಳ್ಳಿ. ಯಾರೋ ಒಬ್ಬನ ಗುಲಾಮನಾಗಿ ಕೆಲಸ ಮಾಡಿದರೆ ಸರಿ ಇರುವುದಿಲ್ಲ.ನಾನು ಇಂದು ಅಧಿಕಾರದಲ್ಲಿ ಇಲ್ಲದೇ ಇರಬಹುದು.ಆದರೆ ನಾನು ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ಚುನಾವಣೆ ಆಗುವವರೆಗೂ ಆ ಅಧಿಕಾರಿಯನ್ನು ಬೇರೆ ಕಡೆ ಎತ್ತಂಗಡಿ ಮಾಡಿಸಲು ಬದ್ದನಿದ್ದೇನೆ.ನೀವು ಸಕರ್ಾರದಿಂದ ಸಂಬಳ ಪಡೆಯುವುದು.ಯಾವನೋ ಒಬ್ಬ ವ್ಯಕ್ತಿಯಿಂದ ಅಲ್ಲ ಎಂದು ಮಾಜಿ ಸಿಎಂ ಕುಮಾರ ಸ್ವಾಮಿ ಪೊಲೀಸ್ ಅಧಿಕಾರಿಗೆ ಎಚ್ಚರಿಕೆ ನೀಡಿದರು.
ಹೊಸಕೋಟೆ ಪಕ್ಷೇತರ ಅಭ್ಯಥರ್ಿ ಶರತ್ ಬಚ್ಚೇಗೌಡ ಈಗಾಗಲೇ ಅಲ್ಲಿನ ಜನರ ಹೃದಯ ಗೆದ್ದಿದ್ದಾರೆ. ಅವರು ಅಲ್ಲಿ ಗೆದ್ದೇ ಗೆಲ್ಲುತ್ತಾರೆ.ಸದ್ಯಕ್ಕೆ ನನ್ನ ಅವಶ್ಯಕತೆ ಅವರಿಗೆ ಬೇಡ ಎನ್ನಿಸುತ್ತಿದೆ.ಒಂದು ವೇಳೆ ಬೆಂಬಲ ಬೇಕು ಎಂದರೆ ಪ್ರಚಾರಕ್ಕೆ ಹೋಗುತ್ತೇನೆ.ಹೊಸಪೇಟೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದೇನೆ.ಯಶವಂತಪುರ ಒಂದೇ ಅಲ್ಲ,14 ಕ್ಷೇತ್ರಗಳಲ್ಲೂ ಪ್ರಚಾರ ಮಾಡಬೇಕು ಎಂದು ನಿಧರ್ಾರ ಮಾಡಿದ್ದೇನೆ.ಅದರಂತೆ 14 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸುವಲ್ಲಿ ಯಶಸ್ವಿ ಆಗಿದ್ದೇವೆ.ಆದರೆ ಯಡಿಯೂರಪ್ಪ ಧಾಮರ್ಿಕ ಸಂಸ್ಥೆಗಳನ್ನು ಉಪಯೋಗಪಡಿಸಿಕೊಂಡು ನಮ್ಮ ಅಭ್ಯಥರ್ಿಗಳ ನಾಮಪತ್ರ ವಾಪಸ್ ಪಡೆದಿದ್ಧಾರೆ.ಈಗ 12 ಅಭ್ಯಥರ್ಿಗಳು ಕಣದಲ್ಲಿ ಇದ್ದಾರೆ.ಹೀಗಾಗಿ ಇಷ್ಟು ಅಭ್ಯಥರ್ಿಗಳನ್ನು ಗೆಲ್ಲಿಸುವ ಸವಾಲು ನನ್ನ ಮೇಲೆ ಇದೆ ಎಂದು ಅವರು ಹೇಳಿದರು.
ನಾನು ಸಕರ್ಾರ ಕಾಪಾಡುತ್ತೇನೆ ಎಂದು ಹೇಳಿದ್ದೇನೆ ಆದರೆ ಯಾವ ಸಕರ್ಾರ ಎಂದು ಹೇಳಿಲ್ಲ.ಒಟ್ಟಾರೆ ಸಕರ್ಾರ ಕಾಪಾಡುತ್ತೇನೆ.ಯಾವ ಸಕರ್ಾರ ಎನ್ನುವುದನ್ನು ಡಿಸೆಂಬರ್ 9ರ ಬಳಿಕ ತೀಮರ್ಾನ ಮಾಡುತ್ತೇನೆ .ಸಾರ್ವತ್ರಿಕ ಚುನಾವಣೆಗೆ ಹೋಗುವುದಕ್ಕೆ ಸಾಧ್ಯವಿಲ್ಲ.ಮೂರುವರೇ ವರ್ಷಗಳ ಕಾಲ ಸಕರ್ಾರ ಬೇಕು.ಜನರು ಕಷ್ಟದಲ್ಲಿ ಇದ್ದಾರೆ.ನಾವು ಚುನಾವಣೆ ನಡೆಸಿಕೊಂಡು ಹೋದರೆ ಜನರು ಕಷ್ಟ ಕೇಳುವುದು ಯಾರು...? ನಾನು ಬಿಜೆಪಿ ಸಕರ್ಾರ ಉಳಿಸುತ್ತೇನೆ ಎಂದು ಹೇಳಿಲ್ಲ ನನ್ನ ಮಾತಿನ ಅರ್ಥ ರಾಜಕೀಯದಲ್ಲಿ ಅತ್ಯಂತ ಸೂಕ್ಷ್ಮವಾಗಿ ಗ್ರಹಿಸುವವರು ಯಾರು ಇದ್ದಾರೆ ಅವರಿಗೆ ನನ್ನ ಮಾತಿನ ಅರ್ಥವಾಗುತ್ತೆದೆ ಎಂದು ಪರೋಕ್ಷವಾಗಿ ಬಿಜೆಪಿ ಸಕರ್ಾರ ರಕ್ಷಿಸುತ್ತೇನೆ ಎಂದು ಹೇಳಿದರು.
ಅಶೋಕ್ ನವಂತವರಿಗೆ ಪಾಪ ಏನೂ ಗೊತ್ತಾಗಲ್ಲ.ಆರ್ ಅಶೋಕ್ ಇನ್ನೂ ಪಾಠ ಕಲಿಯೋದು ಇದೆ. ನಾವು ಕಷ್ಟ ಪಟ್ಡು ಶ್ರಮಪಟ್ಟು ಮೇಲೆ ಬಂದಿದ್ದೇವೆ.ಈ ಹಿಂದೆ ಆಪರೇಷನ್ ಕಮಲಕ್ಕೆ ಜಗ್ಗೇಶ್ ರಾಜೀ ನಾಮೆ ಕೊಡಿಸಿದರು.ಆಪರೇಷನ್ ಕಮಲ ಬಿಜೆಪಿ ನಾಯಕರಿಗೆ ರಕ್ತಗತವಾಗಿ ಬಂದಿದೆ.ಜಗ್ಗೇಶ್ ಮತ್ತೆ ಶೋಭಾ ಕರಂದ್ಲಾಜೆ ಅನರ್ಹ ಶಾಸಕನ ಬಗ್ಗೆ ಏನು ಚಚರ್ೆ ಮಾಡಿದ್ದಾರೆ ಎನ್ನುವುದು ತಮಗೆ ಗೊತ್ತಿದೆ. ಇದೇ ಸೋಮಶೇಖರ್, ಶೋಭಾ ಮತ್ತೆ ಅಶೋಕ್ ಬಗ್ಗೆ ಏನೇನು ಪದ ಬಳಕೆ ಮಾಡಿದರು ಎನ್ನುವುದು ಗೊತ್ತಾದರೆ ನಾನು ಇಷ್ಟೊಂದು ಕಷ್ಟಪಡುವ ಅಗತ್ಯನೇ ಇಲ್ಲ.ಚುನಾವಣಾ ಫಲಿತಾಂಶ ನಂತರ ಏನು ಆಗುತ್ತದೋ ಎನ್ನುವ ಬೆಳವಣಿಗೆಗೆ ಈಗಾಲೇ ಉತ್ತರ ಕೊಡಲು ಆಗುವುದಿಲ್ಲ ಎಂದರು.
ಕೂಸ ಹುಟ್ಟುವ ಮುನ್ನಾ ಕುಲಾಯಿ ಒಲೆಸಿದರು ಎನ್ನುವಂತೆ ಈಗ ಆ ಬಗ್ಗೆ ನಾನು ಚಚರ್ೆ ಮಾಡಲ್ಲ. 15 ಕ್ಕೆ 15 ಗೆದ್ದೇ ಗೆಲ್ಲು ತ್ತೇವೆ ಎಂದು ಯಡಿಯೂರಪ್ಪ ಹೇಳುತ್ತಾರೆ.ಒಂದು ವೇಳೆ ಆ ರೀತಿ ಆದರೆ ಸಮ ಸ್ಯೆನೇ ಇರುವುದಿಲ್ಲ.ಗೆದ್ದವರೆಲ್ಲರನ್ನು ಮಂತ್ರಿ ಮಾಡುತ್ತೇನೆ ಎನ್ನುತ್ತಾರೆ ಅವರು ಮಂತ್ರಿ ಆಗುವುದ ರಿಂದ ಅವರ ಪಕ್ಷದಲ್ಲಿರುವ 105 ಶಾಸಕರಿಂದ ಎಲ್ಲಿ ಅಪಘಾತ ಆಗುತ್ತದೋ.ಅವರಲ್ಲಿ ಸಾಕಷ್ಟು ಸಮಸ್ಯೆಗಳು ಇವೆ.ಡಿಸೆಂಬ ರ್ 9 ರ ಬಳಿಕ ನೋಡೋಣ ಇದಕ್ಕೆ ಎಲ್ಲಾ ಯಾವ ರೀತಿ ಪರಿಹಾರ ಕಂಡು ಹಿಡಿಯಬೇಕು ಎಂದು ಹೇಳುವ ಮೂಲಕ ಹೊಸ ವರಸೆ ಆರಂಭಿಸಿದರು.