ಲೋಕದರ್ಶನ ವರದಿ
ಗದಗ 17: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಕರೆಯುವ ಕಪ್ಪತಗುಡ್ಡದ ಪರಿಸರದಲ್ಲಿರುವ ಜಿಲ್ಲೆಯ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಜಲಾಶಂಕರ ಪುಣ್ಯಕ್ಷೇತ್ರವನ್ನು ಸರಕಾರ ಇನುಷ್ಟು ಅಭಿವೃದ್ಧಿ ಪಡಿಸಬೇಕಾಗಿದೆ. ಈ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಸಮುದಾಯ ಭವನ, ನಾಗರಿಕ ಸೌಲಭ್ಯಗಳನ್ನು ಅಳವಡಿಸಿ, ಅಭಿವೃದ್ಧಿಪಡೆಸಿದರೆ ಇನ್ನೂ ಹೆಚ್ಚು ಪ್ರವಾಸಿಗರು ಇಲ್ಲಿ ಪುಣ್ಯಕ್ಷೇತ್ರ ಹಾಗೂ ಪರಿಸರದ ಆನಂದವನ್ನು ಅನುಭವಿಸಬಬುದು ಎಂದು ಕರ್ನಾಟಕ ತಾಂಡಾ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪರಮೇಶ ಲಮಾಣಿ ಹೇಳಿದರು.
ಅವರು ನಾಗಾವಿ ಹತ್ತಿರವಿರುವ ಪುಣ್ಯಕ್ಷೇತ್ರ ಜಲಾಶಂಕರ ದೇವಸ್ಥಾನದಲ್ಲಿ ನಡೆದ ಮಕರ ಸಂಕ್ರಮಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಶುರಾಮ ರಾಠೋಡ, ಧನಸಿಂಗ್ ಲಮಾಣಿ, ಗಣೇಶ ಲಮಾಣಿ, ಸೋಮಪ್ಪ ಲಮಾಣಿ, ಬಾಲಾಜಿ ಪೂಜಾರ, ಹನಮಂತ ನಾಯಕ, ಧರ್ಮಪ್ಪ ರಾಠೋಡ, ವಿಠಲ ಲಮಾಣಿ, ಪಾಂಡಪ್ಪ ಬೇವಿನಕಟ್ಟಿ, ಮೋತಿಲಾಲ ನಾಯಕ, ಹಾಮಜಪ್ಪ ಬಡಿಗೇರ, ಠಾಕಪ್ಪ ಲಮಾಣಿ ಹನುಮಂತ ಪೂಜಾರ, ಸತ್ಯನಾರಾಯಣ ಘೋಡಕೆ, ದೀಪು ಘೋಡಕೆ, ಸಂತೋಷ ರಾಠೋಡ ಉಪಸ್ಥಿತರಿದ್ದರು.