ಲಾಕ್ ಡೌನ್‌ ಇಡೀ ರಾಜ್ಯಕ್ಕೆ ವಿಸ್ತರಿಸಲು ಸರ್ಕಾರ ಚಿಂತನೆ

ಬೆಂಗಳೂರು,‌ ಮಾ‌. 23, ಕೊರೋನಾ ಸೋಂಕು ಕಂಡುಬಂದ 9 ಜಿಲ್ಲೆಗಳಲ್ಲಿ ಜಾರಿಗೊಳಿಸಿರುವ 'ಲಾಕ್‌ಡೌನ್' ತೀರ್ಮಾನಕ್ಕೆ ಜನರು ಅಸಡ್ಡೆ ತೋರಿದ ಹಿನ್ನೆಲೆಯಲ್ಲಿ  ಈ ಆದೇಶ ಇಡೀ ರಾಜ್ಯಕ್ಕೆ ವಿಸ್ತರಣೆಗೆ ರಾಜ್ಯ ಸರ್ಕಾರ  ಚಿಂತನೆ  ನಡೆಸಿದೆ. ರಾಜ್ಯ ಸರ್ಕಾರದ ಮಹತ್ವದ ತುರ್ತು ಸಭೆ ನಡೆಸಿದ  ಬಳಿಕ‌ ಮುಖ್ಯಮಂತ್ರಿ ಯಡಿಯೂರಪ್ಪ ಮಾಹಿತಿ ನೀಡಿದರು.ನಿನ್ನೆ 9 ಜಿಲ್ಲೆಗಳಲ್ಲಿ  ಲಾಕ್ ಡೌನ್ ಆದೇಶಿಸಲಾಗಿತ್ತು. ಆದರೆ ಈ ಬಗ್ಗೆ ಜನರಿಂದ ಸರಿಯಾದ  ಪ್ರತಿಕ್ರಿಯೆ ಹಾಗೂ ಜನರು ಎಚ್ಚೆತ್ತುಕೊಳ್ಳದ ಕಾರಣ ರಾಜ್ಯಾದ್ಯಂತ ಲಾಕ್ ಡೌನ್  ವಿಸ್ತರಣೆಗೆ ಮುಂದಾಗಿದೆ.ಈ ಬಗ್ಗೆ ಇಂದು ಸಂಜೆ ಮತ್ತೊಂದು ಸಭೆ ಬಳಿಕ ಇಡೀ  ರಾಜ್ಯಕ್ಕೆ ಲಾಕ್‌ಡೌನ್ ವಿಸ್ತರಣೆ ಬಗ್ಗೆ ಚರ್ಚೆ ನಡೆಸುತ್ತೇವೆ. ಈಗಾಗಲೇ ಜನರ ಓಡಾಟ  ಹೆಚ್ಚಾಗಿದೆ. ಇದು ನಮ್ಮ ಗಮನಕ್ಕೆ ಬಂದಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಹಾಗಾಗಿ  ಸಂಜೆ ರಾಜ್ಯವೇ ಲಾಕ್ ಡೌನ್ ಮಾಡಿವ ಬಗ್ಗೆ ಸಭೆ ಸೇರಿ ತೀರ್ಮಾನ ಕೈಗೊಳ್ಳುತ್ತೇವೆ  ಎಂದರು.