ಸರಕಾರ ಸಂತ್ರಸ್ತರಿಗೆ ನೀಡಿದ ಭರವಸೆ ಈಡೇರಿಸಬೇಕು

ಲೋಕದರ್ಶನ ವರದಿ

ಅಥಣಿ 13: ಪ್ರವಾಹ ಪರಿಸ್ಥಿತಿಯಲ್ಲಿ ತಮ್ಮತನವನ್ನು ಕಳೆದುಕೊಂಡ ಸಂತ್ರಸ್ಥರಿಗೆ ಸರಕಾರದ ಪರಿಹಾರ ಧನದ ಮೊತ್ತ ಇಲ್ಲಿಯವರೆಗೂ ತಲುಪಿಲ್ಲ ಹೀಗಾಗಿ ಪ್ರವಾಹ ಪಿಡೀತ ಸಂತ್ರಸ್ಥರು ಸಂಕಷ್ಟದಲ್ಲಿಯೇ ಜೀವನ ಕಳೆಯುತ್ತಿದ್ದು, ತಕ್ಷಣ ರಾಜ್ಯ ಸರಕಾರ ಪ್ರವಾಹ ಸಂದರ್ಭದಲ್ಲಿ ಸಂತ್ರಸ್ಥರಿಗೆ ನೀಡಿದ ಭರವಸೆಯನ್ನು ಈಡೇರಿಸಬೇಕು ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಆಗ್ರಹಿಸಿದ್ದಾರೆ. ಅವರು ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. 

      ಪ್ರವಾಹದ ಸಂದರ್ಭದಲ್ಲಿ ಅಥಣಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪನವರು ಪ್ರವಾಹದಿಂದ ಪೂರ್ಣ ಪ್ರಮಾಣದಲ್ಲಿ ಹಾಳಾದ ಮನೆಗಳ ನಿರ್ಮಾಣಕ್ಕೆ 5 ಲಕ್ಷ, ಭಾಗಶಃ ಹಾಳಾದ ಮನೆಗಳ ದುರಸ್ಥಿಗೆ 1 ಲಕ್ಷ ರೂ.ಗಳನ್ನು ಪರಿಹಾರ ರೂಪದಲ್ಲಿ ನೀಡಲಾಗುವುದು ಎಂದು ಭರವಸೆ ನೀಡಿದ್ದರು ಆದರೆ ಇಲ್ಲಿಯವರೆಗೂ ಯಾವುದೇ ಪರಿಹಾರ ಬಂದಿಲ್ಲ. ಸಂಬಂಧ ಪಟ್ಟ ಅಧಿಕಾರಿಗಖಳನ್ನು ವಿಚಾರಿಸಿದಾಗ ಸವರ್ೆ ಕಾರ್ಯ ಇನ್ನು ನಡದಿದೆ ಸರ್ವೆ ಮುಗಿದ ತಕ್ಷಣ ಪರಿಹಾರ ಬರುತ್ತದೆ ಎಂದು ಹಾರಿಕೆ ಉತ್ತರ ನೀಡುತ್ತಾರೆ ಎಂದ ಅವರು ಮನೆಗಳ ನಿಮರ್ಾಣದ ಕಾರ್ಯ ಮುಗಿಯುವವರೆಗೂ ಸಂತ್ರಸ್ಥರು ಬಾಡಿಗೆ ಮನೆಯಲ್ಲಿದ್ದಲ್ಲಿ ಬಾಡಿಗೆಯನ್ನು ಕೂಡ ಸರಕಾರವೇ ಕೊಡಲಿದೆ ಎಂದು ಕೂಡ ಹೇಳಿದ್ದರು ಆದರೆ ಇಲ್ಲಿಯವರೆಗೂ ಬಾಡಿಗೆಯನ್ನೂ ಕೂಡ ಕೊಟ್ಟಿಲ್ಲ ಇದರಿಂದ ಸಂತ್ತಸ್ಥರ ಕುಟುಂಬಗಳು ಆರ್ಥಿಕ ಸಂಕಷ್ಟ ಅನುಭವಿಸುತ್ತಿವೆ ಎಂದರು. 

     ಪ್ರವಾಹದ ಸಂದರ್ಭದಲ್ಲಿ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಪ್ರಮುಖ ವಾಣಿಜ್ಯ ಬೆಳೆ ಕಬ್ಬು, ತೋಟಗಾರಿಕೆ ಬೆಳೆ ದ್ರಾಕ್ಷಿ ಸೇರಿದಂತೆ ಗೋವಿನಜೋಳ, ಜೋಳ, ಸಜ್ಜೆ ಸೇರಿದಂತೆ ಅನೇಕ ಬೆಳೆಗಳು ಪ್ರವಾಹದಿಂದ ನಾಶವಾಗಿ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿವೆ.  

ಎನ್.ಡಿ.ಆರ್.ಎಫ್ ನಿಯಮಗಳಂತೆ ಪರಿಹಾರ ವಿತರಿಸುತ್ತೇವೆ ಎಂದು ರಾಜ್ಯ ಸರಕಾರ ಹೇಳಿತ್ತು ಆದರೆ ಪ್ರಾರಂಭದಲ್ಲಿ ಕೆಲವೇ ಕೆಲವು ರೈತರಿಗೆ ಮಾತ್ರ ಬೆಳೆ ಪರಿಹಾರ ಕೊಡಲಾಯಿತು ಮುಂದೆ ಇಲ್ಲಿಯವರೆಗೂ ಯಾವುದೇ ಪರಿಹಾರ ಬಂದಿಲ್ಲ ಎಂದು ಆರೋಪಿಸಿದ ಅವರು ಒಂದು ತಿಂಗಳ ಅವಧಿಯಲ್ಲಿ ಪ್ರವಾಹ ಸಂತ್ರಸ್ಥರಿಗೆ ಪರಿಹಾರ ಒದಗಿಸದೇ ಹೋದಲ್ಲಿ ಅಥಣಿ ಕಾಂಗ್ರೆಸ್ ಘಟಕದಿಂದ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.  

     ಸುದ್ದಿಗೋಷ್ಟಿಯಲ್ಲಿ ಎಸ್.ಕೆ.ಬುಟಾಳಿ, ಸಿದ್ಧಾರ್ಥ ಸಿಂಗೆ, ಬಿ.ಕೆ.ಬುಟಾಳಿ, ಅನೀಲ ಸುಣಧೋಳಿ, ಸತ್ಯಪ್ಪ ಬಾಗೆನ್ನವರ, ಸುರೇಶ ಬುಕಿಟಗಾರ, ರಮೇಶ ಸಿಂದಗಿ, ರಾವಸಾಹೇಬ ಜಕನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.