ಉತ್ತಮ ಜಿಎಸ್ಟಿ ಸಂಗ್ರಹದ ಕ್ರಮಗಳ ಸುಧಾರಣೆಗೆ ಸಕರ್ಾರ ಮುಂದು

ನವದೆಹಲಿ,  ಆಗಸ್ಟ್ 11      -ಪ್ರಗತಿಗೆ ಇಂಬು ನೀಡುವ ನಿಟ್ಟಿನಲ್ಲಿ ಆದಾಯ ಸಂಗ್ರಹ ಅಡೆ-ತಡೆಗಳಿಂದ ಮುಕ್ತವಾಗುವಂತೆ ಉತ್ತಮ ಜಿಎಸ್ಟಿ ಸಂಗ್ರಹಕ್ಕೆ ಕ್ರಮಗಳನ್ನು ಸುಧಾರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.  

ಅಧಿಕೃತ ಮೂಲಗಳಂತೆ, ತೆರಿಗೆ ಪ್ರಕ್ರಿಯೆಗಳನ್ನು ಸರಳ ಮತ್ತು ಅಂದಾಜಿಸಲು ಸಾಧ್ಯವಾಗವಂತೆ ಮಾಡಿ ಸಂಗ್ರಹದಲ್ಲಿ ಕಾರ್ಯಕ್ಷಮತೆಗೆ ಒತ್ತು ನೀಡಲಾಗುವುದು.   

ಉದ್ಯಮ ಸುಲಭಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಆರ್ಥಿಕತೆಗೆ ಎದುರಾಗಿರುವ ಅಡೆ-ತಡೆಗಳನ್ನು ನಿವಾರಿಸುವತ್ತು ಕಾರ್ಯೋನ್ಮುಖವಾಗಿದೆ. ಈ ನಿಟ್ಟಿನಲ್ಲಿ ವೇಗದ ಪ್ರಗತಿಗಾಗಿ ಹಣದ ಸುಲಭ ಲಭ್ಯತೆಯಾಗುವಂತೆ ಖಚಿತಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. 

ತೆರಿಗೆಗಳು ಮೊದಲಿಗಿಂತಲೂ ಈಗಾಗಲೇ ಕಡಿಮೆಯಾಗಿವೆ ಎಂದು ಸರ್ಕಾರ ಭಾವಿಸಿರುವುದರಿಂದ   ಹೊಸ ಕಾರ್ಯತಂತ್ರದಲ್ಲಿ ಜಿಎಸ್ಟಿ ದರಗಳು ಒಳಗೊಳ್ಳುವುದಿಲ್ಲ.  

ಹಣಕಾಸು ಸಚಿವ  ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕರ್ಗಳು ಮತ್ತು ವಿದೇಶಿ ಮತ್ತು ದೇಶೀಯ ಹೂಡಿಕೆದಾರರು ಹಾಗೂ ನವೋದ್ಯಮಗಳು ಸೇರಿದಂತೆ ವಿಭಿನ್ನ ಪಾಲುದಾರರೊಂದಿಗೆ ಸಂವಾದ ನಡೆಸಿದ್ದರು. ಇದರ ಆಧಾರ ಮೇಲೆ ಸಚಿವಾಲಯ ಸುಧಾರಣ ಕ್ರಮಕ್ಕೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.