ಬದುಕಿಗೆ ಗುರಿ ಅಗತ್ಯ: ಡಾ.ಅಳ್ಳಗಿ

ಲೋಕದರ್ಶನವರದಿ

ಗುಳೇದಗುಡ್ಡ08: ಇಂದಿನ ಸ್ಪಧರ್ಾತ್ಮಕ ಜಗತ್ತಿನಲ್ಲಿ ಗುರಿ ಎಂಬುದು ಎಲ್ಲರ ಜೀವನದಲ್ಲಿ ಅಗತ್ಯವಾಗಿದೆ ಎಂದು  ಬಾಗಲಕೋಟೆಯ ಇನಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ್ ಸ್ಟಡಿಜ್ ದ  ನಿರ್ದೇ ಕ  ಡಾ. ಆರ್.ಜಿ.ಅಳ್ಳಗಿ ಹೇಳಿದರು.

    ಅವರು ಸ್ಥಳೀಯ ಪಿಇ ಟ್ರಸ್ಟಿನ ರಾಠಿ ಮತ್ತು ಕಾವಡೆ ಆಂಗ್ಲ ಮಾಧ್ಯಮ ಶಾಲೆ ಮತ್ತು ಗಂಗಮ್ಮ ಅಂಗಡಿ ಪೂರ್ವ ಪ್ರಾಥಮಿಕ ಶಾಲೆ ಇವುಗಳ ವಾಷರ್ಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಂದು ಗುರಿ ಇಟ್ಟುಕೊಳ್ಳಬೇಕು.  ಆ ಗುರಿ ತಲುಪಲು ಉತ್ತಮ ಮಾರ್ಗ ಕಂಡುಕೊಳ್ಳಬೇಕು. ತನ್ನ ಗುರಿಯ ಮಾರ್ಗದಲ್ಲಿ ಹಲವಾರು ಕಷ್ಟಗಳು ಎದುರಾದರೂ ಎದೆಗುಂದದೇ ಮುನ್ನುಗ್ಗ ಬೇಕು. ಅಂದಾಗ ಗುರಿ ತಲುಪಲು ಸಾಧ್ಯವಾಗುತ್ತದೆ. ನಾವು ನಮ್ಮ ಗುರಿ ಮುಟ್ಟಲು  ಕಷ್ಟಕ್ಕೆ ಹಿಂಜರಿದರೆ ಸಾಧನೆ ಸಾಧ್ಯವಾಗುವುದಿಲ್ಲ ಎಂದರು.

  ಟ್ರಸ್ಟಿನ ಚೇರಮನ್  ಕಮಲಕಿಶೋರಜಿ ಭಂಡಾರಿ ಅಧ್ಯಕ್ಷತೆವಹಿಸಿದ್ದರು. ಸಂಸ್ಥೆಯ ಗೌರವ ಕಾರ್ಯದಶರ್ಿ ರವೀಂದ್ರ ಪಟ್ಟಣಶೆಟ್ಟಿ, ಶಾಲೆಯ ಚೇರಮನ್ ಅಶೋಕ ಹೆಗಡಿ, ಪೂರ್ವ ಪ್ರಾಥಮಿಕ ಶಾಲೆಯ ಚೇರಮನ್  ಎ.ಡಿ.ಕೊಪ್ಪಳ ಉಪಸ್ಥಿತರಿದ್ದರು. ಶಾಲಾ ಸಮಿತಿ ಸದಸ್ಯ ರಾಮೇಶ್ವರ ರಾಠಿ, ಮಾಣಿಕಲಾಲಸಾ ಕಾವಡೆ, ಜುಗಲಕಿಶೋರ ಭಟ್ಟಡ ಉಪಸ್ಥಿತರಿದ್ದರು.

  ಮುಖ್ಯೋಧ್ಯಾಪಕಿಯರಾದ ಜೆಜೆ ಲೋಬೋ ಸ್ವಾಗತಿಸಿದರು.  ವೀಣಾ ಹಳ್ಳೂರ ಶಾಲೆಯ ವರದಿವಾಚನ ಮಾಡಿದರು.  ವಿದ್ಯಾಥರ್ಿನಿಯರಾದ ನಮ್ರತಾ ರಾಠೋಡ ರೇಣುಕಾ ದೋಂಗಡೆ ನಿರೂಪಿಸಿದರು. ಗಂಗಮ್ಮ ಅಂಗಡಿ ಶಾಲೆಯ ಮುಖ್ಯೋಪಾಧ್ಯಾಪಕಿ ಸುಜಾತಾ ಕರಡಿಗುಡ್ಡ ವಂದಿಸಿದರು.