ಮಾಂಜರಿ 29: ಎಲ್ಲ ಧರ್ಮಗಳ ಗುರಿ ಮಾನವನ ಕಲ್ಯಾಣವೇ ಆಗಿದೆ ಆದ್ದರಿಂದ ಧರ್ಮವನ್ನು ನಾವು ಕಾಪಾಡಿದರೆ ಧರ್ಮವನ್ನು ನಮ್ಮನ್ನು ಕಾಪಾಡುತ್ತದೆ ಪ್ರತಿಯೊಬ್ಬರು ಭಕ್ತರು ಧರ್ಮ ರಕ್ಷಣೆ ಮಾಡಬೇಕು ಸದ್ಗುರುಗಳ ಸುಸಂಸ್ಕೃತಿಯಿಂದ ಭಾರತ ಕರ್ಮ ಮತ್ತು ಧರ್ಮ ಭೂಮಿಯಾಗಿದೆ. ಇಂಥ ಪುಣ್ಯಭೂಮಿಯಲ್ಲಿ ಜನಸಿರುವು ಪುಣ್ಯವಂತರಾಗಿದ್ದೇವೆ ಎಂದು ವಿಧಾನಪರಿಷತ್ತಿನ ಮಾಜಿ ಸದಸ್ಯ ಮಾಜಿ ಮುಖ್ಯ ಸಚೇತಕ ಮಹಾಂತೇಶ್ ಕವಟಿಗಿಮಠ ಹೇಳಿದರು.
ಅವರು ಮಂಗಳವಾರ ಸಾಯಂಕಾಲ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದಲ್ಲಿ ಶ್ರೀ ವೀರಭದ್ರ ದೇವಸ್ಥಾನದ ವಿಶಾಳಿ ಯಾತ್ರಾ ಮಹೋತ್ಸವ ಹಾಗೂ ಮಹಾ ರಥೋತ್ಸವ ಅಂಗವಾಗಿ ಆಯೋಜಿಸಲಾದ ಧರ್ಮ ಜಾಗೃತಿ ಮತ್ತು ಸಂಸ್ಕೃತಿಕ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾ. ಚೆನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿಗಳು ವಹಿಸಿದ್ದರು ಅತಿಥಿಯಾಗಿ ರಾಜ್ಯಸಭೆಯ ಸದಸ್ಯ ಈರಣ್ಣ ಕಡಾಡಿ ಹಾಗೂ ಬೆಳ್ಳಂಕಿಯ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಜಮಖಂಡಿಯ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿಗಳು ಅಂಬಿಕಾ ನಗರದ ಈಶ್ವರ್ ಪಂಡಿತಾರಾಧ್ಯ ಸ್ವಾಮೀಜಿಗಳು ವೀರಭದ್ರ ದೇವಸ್ಥಾನ ಹಾಗೂ ಕಾಡ ಸಿದ್ದೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿಗಳಾದ ರೇಣುಕಾದೇವರು ನಾಗನೂರ ಮಠದ ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿಗಳು ಬಂಡಿಗಣಿಯ ಅನ್ನದಾನೇಶ್ವರ ಶ್ರೀಗಳು ಮಾಂಜರಿಯ ಗುರು ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಚಿದಾನಂದ ಕೋರೆ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಅಜಿತ್ ರಾವ್ ದೇಸಾಯಿ ಡಾ ಸುಕುಮಾರ್ ಚೌಗುಲೆ ಉಪವಿಭಾಗಿಯ ಅಧಿಕಾರಿ ಸುಭಾಶ ಸಂಪಗಾವಿ ಕೆ ಪಿ ರುದ್ರಯ್ಯಪ್ಪ ಹಾಗೂ ಇನ್ನೆಳದು ಶಿವಾಚಾರ್ಯರು ಹಾಜರಿದ್ದರು ಈ ಸಮಾರಂಭದ ಅಧ್ಯಕ್ಷತೆಯನ್ನು ಜಮಖಂಡಿಯ ಶಾಸಕ ನಾಡೋಜ್ ಪ್ರಶಸ್ತಿ ಪುರಸ್ಕೃತ ಜಗದೀಶ್ ಗುಡುಗುಂಟೆಮಠ ಇವರು ವಹಿಸಿದ್ದರು
ಈ ವೇಳೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ 12ನೆಯ ಶತಮಾನಕ್ಕೆ ಬಂದರೆ ಶರಣರ ವಚನ ಚಳುವಳಿ ಒಂದು ಮಹತ್ವ ಪೂರ್ಣ ಹೆಜ್ಜೆ ವಚನಗಳ ಅನುಭವಿಗಳ ಸಾಹಿತಿ ಶರಣರು ವಚನಗಳನ್ನು ಪಾಂಡಿತ್ಯ ಪ್ರದರ್ಶನಕ್ಕಾಗಿ ಬರೆಯಲಿಲ್ಲ ವರ್ಣವಸ್ಥೆಯಿಂದ ಸಾಮಾಜಿಕ ಧಾರ್ಮಿಕ ಆರ್ಥಿಕ ಅಸಮಾನತೆ ತೆಲೆದೂರಿ ಸಮಾಜದಲ್ಲಿ ಜಾತೀಯತೆ ಮೇಲು ಕೀಳು ಧನಿಕ ಬಡವ ಎಂಬ ಭಾವನೆ ಉಂಟಾಗಿ ಸಮಾಜ ಕುಳಿಸಿಕೊಂಡಿತ್ತು ಇಂಥ ರೋಗಗ್ರಸ್ತ ಸಮಾಜವನ್ನು ತಿಳಿಗೊಳಿಸಲು ಅರಿವು ಮಾಡಿಸಲು ಜನಸಾಮಾನ್ಯರಿಗೆ ತಿಳಿಯದಂತೆ ಸರಳಭಾಷೆಯಲ್ಲಿ ವಚನ ಮೂಲಕ ನಮ್ಮ ಅನುಭವಗಳನ್ನು ತಿಳಿಸುವ ಉದ್ದೇಶವಾಗಿತ್ತು ಎಂದು ಅವರು ಹೇಳಿದರು
ಇಂದಿನ ಧರ್ಮ ಜಾಗೃತಿ ಮತ್ತು ಸಾಂಸ್ಕೃತಿಕ ಸಮಾರಂಭದಲ್ಲಿ ಚಿಕ್ಕೋಡಿಯ ಉಪವಿಭಾಗೀಯ ಅಧಿಕಾರಿಗಳಾದ ಸುಭಾಷ್ ಸಂಪಗಾವಿ ಇವರಿಗೆ ಅತ್ಯುತ್ತಮ ಚುನಾವಣೆ ಅಧಿಕಾರಿಯಾಗಿ ಪ್ರಶಸ್ತಿ ಲಭಿಸಿದಕ್ಕಾಗಿ ಶ್ರೀ ಮಠದಿಂದ ವೃತ್ತಿ ಚೇತನ ಪ್ರಶಸ್ತಿ ಹಾಗೂ ಬೆಂಗಳೂರಿನ ಕೆ ಆರ್ ಇ ಡಿ ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಕೆ ಪಿ ರುದ್ರ್ಪಯ್ಯ ಇವರಿಗೆ ಸೌಜನ್ಯ ಶಿರೋಮಣಿ ಪ್ರಶಸ್ತಿಯನ್ನು ಶ್ರೀಶೈಲ್ ಪೀಠದ ಜಗದ್ಗುರುಗಳ ಅಮೃತ ಹಸ್ತದಿಂದ ನೀಡಲಾಯಿತು ಈ ವೇಳೆ ಹಲವಾರು ಶ್ರೀಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು
ಈ ವೇಳೆ ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾಕ್ಟರ್ ಚನ್ನ ಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ ಬಹು ಜನ್ಮದ ಪುಣ್ಯದ ಫಲ ಮಾನವ ಜೀವನ ಅರಿತು ಆಚರಿಸಿ ಬಾಳಿದರೆ ಜೀವನ ಉಜ್ವಲ ಗೊಳ್ಳುತ್ತಿದ್ದೆ ಸುಖ ಮತ್ತು ದುಃಖ ಶಾಶ್ವತವಾಗಿ ಉಳಿಯೋದಿಲ್ಲ ಹಗಲು ರಾತ್ರಿಯಂತೆ ಸದಾ ತಿರುಗುತ್ತದೆ ದುಃಖಗಳ ಸಮ್ಮಿಶ್ರಮವೇ ನಿಜವಾದ ಜೀವನ ಎಂದು ಅವರು ಹೇಳಿದರು ಇದೆ ವೇಳೆ ಕನ್ನಡ ಕೋಗಿಲೆ ಖ್ಯಾತಿಯ ಕುಮಾರಿ ಮಹಾನ್ಯ ಗುರು ಪಾಟೀಲ್ ಇವರು ನಮ್ಮ ಸಂಗೀತ ಸೇವೆ ಮತ್ತು ಹಿಪ್ಪರಗಿಯ ಸಿದ್ದರಾಮಯ್ಯ ಪ್ರತಿಷ್ಠಾನ ಶಾಲಾ ವಿದ್ಯಾರ್ಥಿಗಳಿಂದ ಸಂಸ್ಕೃತಿ ಕಾರ್ಯಕ್ರಮವನ್ನು ಜರುಗಿತು
ಡಾ ಪ್ರಭಾಕರ್ ಕೋರೆ ಸೊಸೈಟಿಯ ನಿರ್ದೇಶಕರಾದ ಶ್ರೀಕಾಂತ್ ಉಮರಾನೆ ಸ್ವಾಗತಿಸಿ ವಿಶ್ವ ಪ್ರಭುದೇವರ ಶಿವಾಚಾರ್ಯ ಸ್ವಾಮೀಜಿಗಳು ನಿರೂಪಿಸಿ ಮಲ್ಲಪ್ಪ ಸಿಂಧೂರ್ ವಂದಿಸಿದರು.