ಲೋಕದರ್ಶನ ವರದಿ
ಯಮಕನಮರಡಿ 10: ಡಾ.ಬಾಬಾಸಾಹೇಬ ಅಂಬೇಡ್ಕರರು ಬದುಕು ಹಾಗೂ ಕಷ್ಟಗಳನ್ನೆ ಸವಾಲಾಗಿ ಸ್ವೀಕರಿಸಿ ಬದುಕಿನುದಕ್ಕೂ ಒದುವ ಹವ್ಯಾಸ ಬೆಳೆಸಿದ್ದರಿಂದ ಸಂವಿಧಾನವನ್ನೆ ರಚಿಸಿದ ಸಂವಿಧಾನದ ಮಹಾನ್ ಶಿಲ್ಪಿಯಾದರು ಬಡತದನದಲ್ಲಿಯೇ ಬೆಂದು ಸಮಾಜದಲ್ಲಿ ಎಂತಹ ಕಷ್ಟಗಳು ಬಂದರೂ ಅವರು ಚಿಂತನೆಯಿಂದ ಸಂವಿಧಾನವನ್ನು ರಚಿಸಿ ಅದನ್ನು ಸವಾಲಾಗಿ ಸ್ವೀಕರಿಸಿ ಅಂಬೇಡ್ಕರರು ನಮ್ಮ ಭಾರತ ದೇಶದಲ್ಲಿ ಜನ್ಮತಾಳಿದ್ದು ನಮಗೆಲ್ಲರಿಗೂ ಹೆಮ್ಮೆ ಎಂದು ಯಮಕನಮರಡಿ ಸಕರ್ಾರಿ ಪಪೂ ಮಹಾವಿದ್ಯಾಲಯದ ಉಪನ್ಯಾಸಕರಾದ ಪ್ರೊ. ಸಿ.ಜಿ.ಮಠಪತಿ, ಹೇಳಿದರು,
ಅವರು ಡಾ.ಬಾಬಾಸಾಹೇಬ ಅಂಬೇಡ್ಕರವರ ಪರಿನಿವರ್ಾಣ ದಿನದಂಗವಾಗಿ ಹಮ್ಮಿಕೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ, ಹಾಗೂ ಡಿ.ಎಲ್.ಖೋತ ಸಂ.ಪಪೂ ಮಹಾವಿದ್ಯಾಲಯ ಹೆಬ್ಬಾಳ ಇವರ ಸಂಯುಕ್ತ ಆಶ್ರಯದಲ್ಲಿ ಹೆಬ್ಬಾಳ ಗ್ರಾಮದಲ್ಲಿ "ಡಾ. ಬಿ.ಆರ್. ಅಂಬೇಡ್ಕರ ಓದು ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಮಾತನಾಡಿದರು,
ಸಮಾರಂಭವನ್ನು ಹುಕ್ಕೇರಿ ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿಗಳಾದ ಉಮೇಶ ಸಿದ್ನಾಳ ಇವರು ಬಾಬಾಸಾಹೇಬ ಅಂಬೇಡ್ಕರ ಭಾವ ಚಿತ್ರಕ್ಕೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಇಂದಿನ ಯುವ ಜನರಲ್ಲಿ ಶಿಸ್ತು, ತಾಳ್ಮೆ, ಗುರಿ,ಗಳು ಇದ್ದಾಗ ಮಾತ್ರ ಯುವಕರು ತಮ್ಮ ಬದುಕನ್ನು ಸುಂದರವಾಗಿ ನಿಮರ್ಿಸಿಕೊಳ್ಳಲು ಸಾಧ್ಯ ಶಿಕ್ಷಣದ ದಾರಿ ದೀಪ ಯುವಕರಿಗೆ ಮಾರ್ಗದಶರ್ಿಯಾಗಲೆಂದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಉಪನ್ಯಾಸಕರಾದ ಕೆ.ಆಯ್.ಮೋಶಿ ವಹಿಸಿದರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ಸಹಾಯಕ ನದರ್ೇಶಕಿ ಕು.ವಿದ್ಯಾವತಿ ಹೆಚ್.ಬಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಯುವ ಜನರಲ್ಲಿರುವ ಸೂಕ್ತ ಪ್ರತಿಭೆ ಗುರುತಿಸಲು ಅವರಿಗೆ ಸ್ಪಧರ್ಾತ್ಮಕ ಕಾರ್ಯಕ್ರಮದ ಜೊತೆಗೆ ಇಂತಹ ಕಾರ್ಯಕ್ರಮ ಆಯೋಜಿಸಿ ಇಂದಿನ ಯುವ ಜನರಲ್ಲಿ ಓದುವ ಹವ್ಯಾಸ ಮೂಡಿಸುವ ದಿಸೆಯಲ್ಲಿ ಇಂಥ ಕಾರ್ಯಕ್ರಮ ಸಹಕಾರಿಯಾಗಲೆಂದರು, ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾಥರ್ಿಗಳಿಗೆ ಭಾಷಣ, ರಸಪ್ರಶ್ನೆ, ಕವನ, ಪ್ರಬಂಧ, ಸ್ಪಧರ್ೆ ಆಯೋಜಿಸಿ ವಿಜೆತರಿಗೆ ಪ್ರಮಾಣ ಪತ್ರ ಹಾಗೂ ಗ್ರಂಥಗಳನ್ನು ಬಹುಮಾನವಾಗಿ ನೀಡಲಾಯಿತು. "ಸ್ವರ ಸುರಭಿ ಕಲಾ ಬಳಗ ಸಂಕೇಶ್ವರ ಇವರು ಕ್ರಾಂತಿ ಗೀತೆ ಬಾಬಾಸಾಹೇಬರ ಜಾಗೃತಿ ಗೀತೆ ಹಾಡಿದರು, ಉಪನ್ಯಾಸಕ ಎಸ್.ಎಚ್. ಮೂಡಿ ಸ್ವಾಗತಿಸಿದರು. ಬಿ.ಡಿ. ನಿಂಗನೂರಿ ಅತಿಥಿಗಳನ್ನು ಪರಿಚಯಿಸಿದರು, ಆರ್.ಪಿ.ದೇಶಿಂಗೆ ಕಾರ್ಯಕ್ರಮ ನರೂಪಿಸಿದರು, ಒಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು