ವಿದ್ಯಾಥರ್ಿಗಳ ಭವಿಷ್ಯ ರೂಪಿಸುವುದು ಶಿಕ್ಷಕರ ಕೈಯಲ್ಲಿದೆ: ಬಿ.ಪಿ ಬಂದಿ

ಲೋಕದರ್ಶನ ವರದಿ

ಮೂಡಲಗಿ 09: ವಿದ್ಯಾಥರ್ಿಗಳ ಭವಿಷ್ಯ ರೂಪಿಸುವುದು ಶಿಕ್ಷಕರ ಕೈಯಲ್ಲಿದೆ. ವಿದ್ಯಾಥರ್ಿಗಳೂ ಶೈಕ್ಷಣಿಕವಾಗಿ ಪ್ರಗತಿಹೊಂದಲು ಶಿಕ್ಷಕರೊಂದಿಗೆ ಪಾಲಕರು ಸ್ಪಂದಿಸಿದರೇ ಮಾತ್ರ ಸಾಧ್ಯವಿದೆ ಎಂಇಎಸ್ ಕಾಲೇಜಿನ ನಿವೃತ ಉಪನ್ಯಾಸಕ ಬಾಲಶೇಖರ ಬಂದಿ ಎಂದು ಹೇಳಿದರು. 

ಸ್ಥಳೀಯ ಲಕ್ಷ್ಮಿನಗರದಲ್ಲಿರುವ ಸೇಂಟ್ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ 6ನೇ ವಾಷರ್ಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, ಶಾಲಾ ವಾಷರ್ಿಕೋತ್ಸವದ ವೇದಿಕೆಯೂ ಭಾವೈಕ್ಯತೆಯ ಸಂಗಮವಾಗಿ ಕಾಣುತ್ತಿದೆ. ಶಾಲಾ ಮಕ್ಕಳಿಗೆ ಅಕ್ಷರವನ್ನು ಮಾತ್ರ ಬಿತ್ತುವುದಲ್ಲ, ಸಾಮರಸ್ಯದ ಬೀಜವನ್ನು ಬಿತ್ತಬೇಕು. ಇತ್ತಿಚಿನ ದಿನಗಳಲ್ಲಿ ಶಿಕ್ಷಣರಂಗವು ಬಹಳಷ್ಟು ಬದಲಾವಣೆಯಾಗಿದೆ.  ಸುಸಜ್ಜಿತ ಕಟ್ಟಡ ಮತ್ತು ಐಷರಾಮಿ ವ್ಯವಸ್ಥೆಗಳಿಂದ ಮಕ್ಕಳಿಗೆ ಶಿಕ್ಷಣ ದೊರೆಯಲು ಸಾಧ್ಯವಿಲ್ಲ. ಸೆಂಟ್ಮೇರಿಸ್ ಶಾಲೆಯೂ ಕೇವಲ 6ವರ್ಷಗಳ ಅವಧಿಯಲ್ಲಿ 430 ಮಕ್ಕಳನ್ನು ಹೊಂದಿರುವುದು  ಗಮನಿಸಿದರೆ ಇಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂಬುದು ಖಾತ್ರಿಯಾಗಿದೆ. ಶಿಕ್ಷಕರು ಯಾವ ಮಕ್ಕಳನ್ನು ನಿರ್ಲಕ್ಷ್ಯ ಮಾಡಬಾರದು ಪ್ರತಿಯೊಂದು ಮಗುವಿನಲ್ಲಿಯೂ ಪ್ರತಿಭೆ ಇರುತ್ತದೆ. ಪ್ರತಿಭೆಯನ್ನು ಗುರುತಿಸಿ ಉತ್ತಮ ಶಿಕ್ಷಣ ನೀಡಿದರೆ ಪ್ರತಿಭಾವಂತ ಪ್ರಜೆಯಾಗುತ್ತಾನೆ. ಇತ್ತಿಚಿನ ದಿನಗಳಲ್ಲಿ ಪಾಲಕರು ಟಿ.ವಿ. ಮತ್ತು ಮೊಬೈಲ್ ಮೋಹದಿಂದ ಮಕ್ಕಳಿಗೆ ಪುಸ್ತಕ ಪರಿಚಯ, ಕಥೆ ಹೇಳುವುದನ್ನು ಮರೆತಿದ್ದಾರೆ. ಮಗುವಿನ ಭವಿಷ್ಯ ಅಂಕದ ಮೇಲೆ ಅವಲಂಭಿತವಾಗಿಲ್ಲ ಅದು ಉತ್ತಮ ಸಂಸ್ಕಾರದಿಂದ ನಿಮರ್ಿತವಾಗುತ್ತದೆ. ಅವರಿಗೆ ಉತ್ತಮ ಸಂಸ್ಕಾರವನ್ನು ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿಸಿ ಎಂದು ಕರೆ ನೀಡಿದರು.

    ಗವಿಮಠದ ಶಂಕ್ರಯ್ಯ ಹಿರೇಮಠ ಸಾನಿಧ್ಯವಹಿಸಿ ಆಶೀರ್ವಚನ ನೀಡುತ್ತ ಛಲ, ಗುರಿ, ಸಾಮಥ್ರ್ಯವಿದ್ದರೆ ವಿದ್ಯಾಥರ್ಿ ಏನೆಲ್ಲ ಸಾಧನೆಗೈಯಲು ಸಾಧ್ಯವಾಗುತ್ತದೆ. ವಿದ್ಯಾಥರ್ಿಗಳು ನಿತ್ಯದ ಅಧ್ಯಾಯನದೊಂದಿಗೆ ಇತರೆ ವಿಷಯಗಳ ನೈಪುಣ್ಯತೆಗಳನ್ನು ರೂಢಿಸಿಕೊಂಡು ಸಮಾಜಕ್ಕೆ ಆಸ್ತಿಯಾಗಬೇಕು. ಶಿಕ್ಷಣವನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ, ವಿಶ್ವಾಸದಿಂದ ಪಡೆಯಬೇಕು ಎಂದರು

   ಮೂಡಲಗಿ ಮೆಥೋಡಿಸ್ ಚಚರ್್ನ ಸಭಾಪಾಲಕರಾದ ಡ್ಯಾನಿಯಲ್ ಬಾಬು, ಮೌಲಾನಾ ಮೊಹಮದ್ ಶಫಿಕ್ ಅಜ್ಮಿ  ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.  ವಿ.ಆರ್.ಕರಬನ್ನವರ  ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.

    ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ರವೀಂದ್ರ ಸಣ್ಣಕ್ಕಿ, ಅನ್ವರ್ ನದಾಫ್, ಹನುಮಂತ ಗುಡ್ಲಮನಿ, ಎಸ್.ವಾಯ್.ಸಣ್ಣಕ್ಕಿ, ಗಫಾರ ಡಾಂಗೆ, ಪ್ರಸಾದರಾವ್, ಸಂಸ್ಥೆಯ ಅಧ್ಯಕ್ಷ ಡ್ಯಾನಿಯಲ್ ಸವರ್ಿ, ಶೀಲಾ ಸವರ್ಿ, ಶಿವಲಿಂಗಪ್ಪ ಕೌಜಲಗಿ, ರಮೇಶ ಸಣ್ಣಕ್ಕಿ, ಸಿದ್ದು ಗಡ್ಡೆಕರ,  ಚಂದ್ರು ಉಡುಪಿ, ಮಲ್ಲಿಕ ಹುಣಶ್ಯಾಳ, ರಮೇಶ ಪ್ಯಾಟಿಗೌಡರ, ಸುಭಾಸ ಬೆಳಕೂಡ, ಶ್ರೀಶೈಲ ಬಳಿಗಾರ, ಕೃಷ್ಣಪ್ಪ ಪಾಟೀಲ ಮತ್ತಿತರರು  ಉಪಸ್ಥಿತರಿದ್ದರು. 

ಸಮಾರೋಪ ಸಮಾರಂಭ: ಸೇಂಟ್ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ 6ನೇ ವಾಷರ್ಿಕೋತ್ಸವದ ಸಮಾರೋಪ ಸಮಾರಂಭವೂ ಶನಿವಾರ ಸಂಜೆ ಜರುಗಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಕ್ಕಳ ಸಾಹಿತಿ ಪ್ರೋ. ಸಂಗಮೇಶ ಗುಜಗೊಂಡ ಮಾತನಾಡಿ, ಮಕ್ಕಳು ದೇವಲೋಕದ ಪುಷ್ಪವಿದ್ದಂತೆ, ಮಕ್ಕಳ ಪ್ರತಿಭೆಗೆ ಅವಕಾಶ ನೀಡಿ ಅವರಲ್ಲಿರುವ ಸೂಕ್ತ ಪ್ರತಿಭೆಯನ್ನು ಹೊರಗೆಳೆಯುವುದೇ ನಿಜವಾದ ಶಿಕ್ಷಣ. ಮಕ್ಕಳು ದೇಶದ ಭವಿಷ್ಯ, ಮಕ್ಕಳ ಹಕ್ಕುಗಳನ್ನು ಸಂರಕ್ಷಣೆ ಮಾಡವುದು ನಮ್ಮೇಲ್ಲರ ಕರ್ತವ್ಯವಾಗಿದೆ. ಪಾಲಕರು ಮಕ್ಕಳಿಗಾಗಿ ಸಮಯ ಮತ್ತು ಸ್ಪೂತರ್ಿ ನೀಡುವುದರ ಜೊತೆಗೆ ನಿರಂತರವಾದ ಪ್ರೇರಣೆ ನೀಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.

ನಿವೃತ್ತ ಕಮೀಷನರ್ ಪ್ರಸಾದ್ ರಾವ್ ಮಾತನಾಡಿ, ಮಕ್ಕಳಿಗಾಗಿ ಆಸ್ತಿ ಮಾಡದೆ, ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿಸಿ ಎಂದರು. ವೇದಿಕೆಯಲ್ಲಿ ಪುರಸಭೆ ಸದಸ್ಯ ಜಯನಂದ ಪಾಟೀಲ, ನಿವೃತ್ತ ತಹಶೀಲ್ದಾರ ವಿಜಯಕುಮಾರ ಕರಬನ್ನವರ, ಸಂಗಮೇಶ ಕೌಜಲಗಿ, ಪರಸಪ್ಪ ಬಬಲಿ, ಸಮೀರ ದಬಾಡಿ, ಶಿವಬಸು ಶೆಕ್ಕಿ, ಪ್ರಮೀಳ, ನಳೀನಿ, ಸುರೇಶ ಮೂಡಲಗಿ ಮತ್ತಿತರರು ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಪೋಷಕರಿಂದ ಸಂಸ್ಥೆಯ ಶೀಲಾ ಸವರ್ಿ ಅವರನ್ನು ಸನ್ಮಾನಿಸಲಾಯಿತು. ಪುಟಾಣಿ ಮಕ್ಕಳಿಂದ ಎರಡು ದಿನ ವಿವಿಧ ಮನೋರಂಜನೆ ಕಾರ್ಯಕ್ರಮಗಳು ಜರುಗಿತು. ಕಾರ್ಯಕ್ರಮವನ್ನು ಶಿಕ್ಷಕರಾದ ಜೇಮ್ಸ್ ನಿರೂಪಿಸಿದರು, ಜೋಸಫ್ ವಂದಿಸಿದರು.