ಲೋಕದರ್ಶನ ವರದಿ
ಧಾರವಾಡ, 24: ರಾಷ್ಟ್ರವನ್ನು ಮುನ್ನಡೆಸಬಲ್ಲ ಸಮರ್ಥ ಪೀಳಿಗೆಯನ್ನು ನಿಮರ್ಾಣ ಮಾಡುವ ಗುರುತರ ಹೊಣೆಗಾರಿಕೆ ನಮ್ಮ ಶಿಕ್ಷಕರ ಮೇಲಿದೆ. ಶಿಕ್ಷಕರು ಶ್ರೇಷ್ಠ ಬೋಧನೆಯನ್ನು ರೂಢಿಸಿಕೊಂಡಾಗ ದೇಶದ ಭವಿಷ್ಯವು ಶಾಲಾ ತರಗತಿಗಳಲ್ಲಿ ನಿಮರ್ಾಣವಾಗುತ್ತದೆ ಎಂದು ಕನರ್ಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಹೇಳಿದರು.
ಡಾ.ಎಚ್.ಎಫ್. ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ ಹಾಗೂ ಬೆಲ್ಲದ ಶಿಕ್ಷಣ ಮತ್ತು ಕೃಷಿ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಡಯಟ್ನ ಡೆಪ್ಯೂಟಿ ಚೆನ್ನಬಸಪ್ಪ ಸಮಾವೇಶ ಭವನದಲ್ಲಿ 'ಶಿಕ್ಷಣ ಪರಿಶ್ರಮ ಹಿರಿಮೆಗೆ ಪುರಸ್ಕಾರ' ಯೋಜನೆಯಡಿ ಪ್ರೊ.ಶಿ.ಶಿ. ಬಸವನಾಳ ಉತ್ತಮ ಮುಖ್ಯಾಧ್ಯಾಪಕ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು. ಸ್ವಾವಲಂಬಿ ಸಮಾಜ ನಿಮರ್ಾಣ ಹಾಗೂ ರಾಷ್ಟ್ರದ ವಿಕಾಸಕ್ಕೆ ಪೂರಕವಾಗಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಮೌಲ್ಯಗಳನ್ನು ಮರೆತು ನಡೆದರೆ ಭವಿಷ್ಯದ ದಿನಗಳು ಅತಿ ಹೆಚ್ಚು ಮಾರಕವಾಗುತ್ತವೆ ಎಂದರು.
ಪ್ರಶಸ್ತಿ ಪ್ರದಾನ ಮಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ, ಭಾರತದ ಚರಿತ್ರೆಯ ಪುಟಗಳು ರೋಮಾಂಚಕವಾದ ಸಂಗತಿಗಳನ್ನು ಒಳಗೊಂಡಿವೆ. ಶಿಕ್ಷಕರ ಸಮರ್ಪಣಾ ಮನೋಭಾವದ ಸೇವೆಯು ದೇಶವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ಪ್ರಾಮಾಣಿಕ ಪೀಳಿಗೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ಅಂಬೇಡ್ಕರ್, ಬುದ್ಧ, ಬಸವ, ಗಾಂಧೀಜಿಯಂತಹ ಮೌಲ್ಯತುಂಬಿದ ವ್ಯಕ್ತಿತ್ವಗಳನ್ನು ಮತ್ತೆ ನಾವು ನಮ್ಮ ಶಾಲಾ ಮಕ್ಕಳಲ್ಲಿ ಕಾಣುವಂತಾಗಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಶಿಕ್ಷಣ ಇಲಾಖೆಯ ಜಂಟಿ ನಿದರ್ೆಶಕ ಡಾ. ಬಿ.ಕೆ.ಎಸ್.ವರ್ಧನ್ ಮಾತನಾಡಿ, ವಿದ್ಯಾವಿಕಾಸದ ಸಂದರ್ಭದಲ್ಲಿ ಶಿಕ್ಷಕ-ಶಿಕ್ಷಕಿಯರನ್ನು ಪ್ರೋತ್ಸಾಹಿಸಿ ಬೆನ್ನುತಟ್ಟುವಲ್ಲಿ ಚಂದ್ರಕಾಂತ ಬೆಲ್ಲದ ಅವರಂತಹ ದಾನಿಗಣ್ಯರ ಸಹಕಾರ ಬಹುದೊಡ್ಡದು ಎಂದರು. ವಿಶ್ರಾಂತ ಗ್ರಂಥಪಾಲಕ ಡಾ. ಎಸ್. ಆರ್. ಗುಂಜಾಳ, ಶಿಕ್ಷಣತಜ್ಞ ಶಿವಶಂಕರ ಹಿರೇಮಠ, ಡಿಡಿಪಿಐ ಆರ್.ಎಸ್. ಮುಳ್ಳೂರ, ಉಪನಿದರ್ೆಶಕ ಮೃತ್ಯುಂಜಯ ಕುಂದಗೋಳ, ಉಮೇಶ ಬಮ್ಮಕ್ಕನವರ, ಅಜರ್ುನ ಕಂಬೋಗಿ, ಶಾಂತಾ ಮೀಶೆೆ, ನಿವೃತ್ತ ಡಿಡಿಪಿಐ ಎಸ್.ಬಿ. ಕೊಡ್ಲಿ, ಎ.ಎನ್. ನಾಗರಳ್ಳಿ, ಆರ್.ಸಿ. ಹಲಗತ್ತಿ, ಕೆ.ಎಚ್. ನಾಯಕ ಇದ್ದರು. ವಿಜಯಲಕ್ಷ್ಮಿ ಶೆಟ್ಟಿ ನಿರೂಪಿಸಿದರು. ಶಂಕರ ಗಂಗಣ್ಣವರ ವಂದಿಸಿದರು.
ಪ್ರಶಸ್ತಿ ಪುರಸ್ಕೃತರು : ಪ್ರೌಢ ಶಾಲಾ ವಿಭಾಗದಿಂದ ಆಸ್ಪಕ ಹಿರೇಕುಂಬಿ (ಸಪ್ರೌಶಾ ಅದರಗುಂಚಿ), ಸುರೇಶ ಅಂದಾನಪ್ಪನವರ (ಸಪ್ರೌಶಾ ಕುಂಚೂರು), ಪಿ.ಎಫ್. ಹಿರೇಮಠ (ಕೆ.ಜಿ.ಮುದಗಲ್ಲ ಪ್ರೌಶಾ ಶಿಗ್ಲಿ), ನಾಗರಾಜ ನಾಯ್ಕ (ಮಾರಿಕಾಂಬಾ ಸಪಪೂ ಕಾಲೇಜು ಶಿರಸಿ), ಪದ್ಮಾ ನಾಯಕ (ಸಪ್ರೌಶಾ ನಾಡುಮಸ್ಕೇರಿ), ಗುರುನಾಥ ಕೋಳಿ (ಸಪ್ರೌಶಾ ಹುಣಶ್ಯಾಳ ಪಿ.ಜಿ.), ಡಿ.ಆರ್.ಶಹಾಪೂರ (ಸಪ್ರೌಶಾ ಬೆಳವಡಿ), ಎಸ್.ವ್ಹಿ. ಜುನ್ನೂರ (ಸಪ್ರೌಶಾ ಸೋರಗಾಂವಿ), ಬಿ.ವ್ಹಿ. ಪಾಟೀಲ (ಸಪ್ರೌಶಾ ನಾದಕೆ). ಪ್ರಾಥಮಿಕ ಶಾಲಾ ವಿಭಾಗದಿಂದ ದಾಕ್ಷಾಯಣಿ ಹಿರೇಮಠ (ಸಹಿಪ್ರಾ ಶಾಲೆ, ಗಾಮನಗಟ್ಟಿ), ಎಂ.ಎಂ. ದೇವಕ್ಕಿಗೌಡ್ರ (ಸಹಿಪ್ರಾ ಶಾಲೆ, ಕೊಟ್ಟಿಗೇರಿ), ಕೆ.ಬಿ.ಕೊಣ್ಣೂರ (ಸಹಿಪ್ರಾ ಶಾಲೆ, ಲಕ್ಕುಂಡಿ), ಯಶೋಧಾ ನಾಯ್ಕ (ಸಹಿಪ್ರಾ ಶಾಲೆ, ಹೆಗಡೆಕಟ್ಟಾ), ಎಚ್.ಎಫ್. ಸಣ್ಣಕ್ಕಿ (ಸಹಿಪ್ರಾ ಶಾಲೆ, ಲಕ್ಷ್ಮೀಗುಡಿ-ಉಗಾರಖುರ್ದ), ಬಿ.ಎಚ್. ಬೆನಕಟ್ಟಿ (ಸಹಿಪ್ರಾ ಶಾಲೆ, ಜಮಖಂಡಿ), ಎಸ್.ಎಸ್. ಅಂಕಲಗಿ (ಸಹಿಪ್ರಾ ಶಾಲೆ, ಅಥಗರ್ಾ ಲಮಾಣಿ ತಾಂಡೆ ನಂ.-1). ಪ್ರಶಸ್ತಿ ಪುರಸ್ಕೃತರಿಗೆ ಶಾಲು ಹೊದಿಸಿ, ಮೈಸೂರು ಪೇಟಾ ತೊಡಿಸಿ ಪ್ರಶಸ್ತಿಯ ಸ್ಮರಣಿಕೆ ಹಾಗೂ ಫಲಪುಷ್ಪ ನೀಡಿ ಸತ್ಕರಿಸಲಾಯಿತು.