ಲೋಕದರ್ಶಮ ವರದಿ
ಮೂಡಲಗಿ 15: ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳ ಸವರ್ಾಂಗೀಣ ಅಭಿವೃದ್ಧಿಗೆ ಅಗತ್ಯವಾಗಿದೆ. ವಿದ್ಯಾಥರ್ಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ನಿರಾಣಿ ಸಮೂಹ ಸಂಸ್ಥೆಯ ನಿದರ್ೇಶಕ ಸಂಗಮೇಶ ಆರ್ ನಿರಾಣಿ ಹೇಳಿದರು.
ಸ್ಥಳೀಯ ಶ್ರೀನಿವಾಸ ಶಾಲೆಯ 3ನೇ ವಾಷರ್ಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾಥರ್ಿಯ ಭವಿಷ್ಯ ಶಿಕ್ಷಣದಲ್ಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ನಿರಂತರವಾಗಿ ಅಧ್ಯಯನ ಮಾಡುವ ಮೂಲಕ ತಮ್ಮ ವಿದ್ಯಾಥರ್ಿ ಜೀವನದ ಸದುಪಯೋಗ ಪಡೆದುಕೊಳ್ಳಬೇಕು. ಬಾಲ್ಯದಿಂದಲೇ ನಮ್ಮ ಜೀವನದಲ್ಲಿ ಉತ್ತಮ ಕಾರ್ಯಗಳ ಜೊತೆಗೆ ಸಂಸ್ಕಾರವನ್ನು ಬೆಳೆಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗವುದರಲ್ಲಿ ಅನುಮಾನವಿಲ್ಲ. ಧೈರ್ಯವಿದ್ದವನಿಗೆ ಸಾಧನೆಯ ಹಾದಿ ಕಠಿಣವಲ್ಲ ಎಂಬುದನ್ನು ಶ್ರೀನಿವಾಸ ಶಾಲೆಯ ಅಧ್ಯಕ್ಷರಾದ ಆರ್.ಎನ್ ಸೋನವಾಲ್ಕರ ತೋರಿಸಿಕೊಟ್ಟದ್ದಾರೆ. ತಮ್ಮ ಊರಿನ ವಿದ್ಯಾಥರ್ಿಗಳಿಗೆ ಶೈಕ್ಷಣಿಕವಾಗಿ ಅನುಕೂಲವಾಗಲೆಂದು ಸಿಬಿಎಸ್ಇ ಮಾನ್ಯತೆ ಹೊಂದಿರುವ ಶಿಕ್ಷಣ ಸಂಸ್ಥೆಯನ್ನು ನೀಡಿ ವಿದ್ಯಾಥರ್ಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಗುರಿ ಹೊಂದಿರುವುದು ಶ್ಲಾಘನೀಯವಾಗಿದೆ. ಇದೇ ರೀತಿಯಲ್ಲಿ ಈ ಭಾಗದ ವಿದ್ಯಾಥರ್ಿಗಳಿಗೆ ಅವಶ್ಯವಿರುವ ವಿಜ್ಞಾನ ಪದವಿಪೂರ್ವ ಕಾಲೇಜ್ ಶೀಘ್ರವಾಗಿ ಪ್ರಾರಂಭಗೊಳ್ಳಲಿ ನಿಮ್ಮ ಎಲ್ಲ ಕಾರ್ಯಗಳಿಗೆ ನಿರಾಣಿ ಸಮೂಹ ಸಂಸ್ಥೆಯ ಸಹಕಾರವಿರುತ್ತದೆ ಎಂದರು.
ಕ್ಷೇತ್ರ ಶಿಕ್ಷಣಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ, ಮೂಡಲಗಿ ಪಟ್ಟಣವೂ ಕೃಷಿ, ಸಣ್ಣ ವ್ಯಾಪಾರ ಹಾಗೂ ಪ್ರಸಿದ್ದ ದನಗಳ ಪೇಟೆಗೆ ಹೆಸರುವಾಸಿಯಾಗಿದೆ. ಇತ್ತಿಚಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಿಂದ ಶಿಕ್ಷಣ ಕಾಶಿಯಾಗಿಯೂ ಪ್ರಸಿದ್ದಿ ಹೊಂದಿದೆ. ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ಪಾಲಕರ ಸಹಕಾರ ಅತ್ಯವಶ್ಯಕವಾಗಿದ್ದು ಭವಿಷ್ಯದಲ್ಲಿ ಅಲೋಚನ ಶಕ್ತಿ ಬಹಳಷ್ಟು ಬೇಕಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಸೇರಿಸುವ ಶಿಕ್ಷಣ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಂಡಿರಬೇಕು. ಶ್ರೀ ಶ್ರೀನಿವಾಸ ಶಿಕ್ಷಣ ಸಂಸ್ಥೆಯೂ ಮಕ್ಕಳ ಮನಸ್ಸನ್ನು ಅರಿತು ಕಾರ್ಯ ನಿರ್ವಹಿಸುತ್ತಿರುವುದರಿಂದ ಕಡಿಮೆ ಅವಧಿಯಲ್ಲಿಯೇ ಹೆಸರುಗಳಿಸಿದೆ. ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ತೋರಿಸಿಕೊಳ್ಳಲು ಶಾಲಾ ವೇದಿಕೆ ಅನುಕೂಲವಾಗಿದೆ. ಇದರ ಸದುಪಯೋಗ ಪಡೆದು ಪ್ರತಿಭಾವಂತರಾಗಿ ಎಂದು ವಿಧ್ಯಾಥರ್ಿಗಳಿಗೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಆರ್.ಎನ್. ಸೋನವಾಲ್ಕರ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿ, ಶಿಕ್ಷಣ ಸಂಸ್ಥೆಯೂ ಪ್ರಗತಿ ಪಥದತ್ತ ಸಾಗಲು ಪೋಷಕರ ಸಹಕಾರ ಕಾರಣವಾಗಿದೆ. ನಿಮ್ಮೆಲ್ಲರ ಸಹಕಾರ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸುವಂತೆ ಮಾಡಿದೆ. ನಾನು ಹಣ ಮಾಡುವ ಉದ್ದೇಶದಿಂದ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿಲ್ಲ ನನ್ನ ಊರಿನ ವಿದ್ಯಾಥರ್ಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಪ್ರಾರಂಭಿಸಿದ್ದೆನೆ. ನನ್ನ ಯಶಸ್ಸಿನಲ್ಲಿ ಬಹಳಷ್ಟು ಜನರ ಶ್ರಮವಿದೆ ಅವರೆಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೆನೆ ಎಂದರು.
ಪ್ರಾಚಾರ್ಯ ಮನೋಜ ಭಟ್ಟ ಶಾಲಾವರದಿ ವಾಚಿಸಿದರು. ಕಾರ್ಯದಶರ್ಿ ವೆಂಕಟೇಶ ಪಾಟೀಲ ಅತಿಥಿ ಪರಿಚಯ ಮಾಡಿದರು. ಮೂಡಲಗಿ ಸಿದ್ದಸಂಸ್ಥಾನಮಠದ ಪೀಠಾಧಿಪತಿ ಶ್ರೀಪಾದಭೋದ ಸ್ವಾಮಿಜೀ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಶಾಲಾ ಮಕ್ಕಳಿಂದ ಮನೋರಂಜನೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಸಿಪಿಐ ವೆಂಕಟೇಶ ಮುರನಾಳ, ಡಾ. ರೇಣುಕಾ ಸೋನವಾಲ್ಕರ, ಪುರಸಭೆ ಸದಸ್ಯರಾದ ಸಂತೋಷ ಸೋನವಾಲ್ಕರ, ಶಿವಾನಂದ ಚಂಡಕಿ, ಶಿಕ್ಷಕರಾದ ಬಸವರಾಜ ಮೈಗೂರ, ವಿದ್ಯಾ ಹೆಗಡೆ, ಆರತಿ, ಸಂಗೀತ, ಶ್ವೇತಾ ನಾಯ್ಕ, ಸುಷ್ಮಗೌಡ, ಸಂಗೀತಾ ಶಿಕ್ಷಕಿ ಶಮರ್ಿಳಾ ಹಿರೇಮಠ ಸೇರಿದಂತೆ ಪೋಷಕರು ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾಥರ್ಿನಿ ಸೃಷ್ಠಿ ಚಂಡಕಿ ನಿರೂಪಿಸಿದರು. ಶಿಕ್ಷಕಿ ಚಂದ್ರಿಕಾ ನಾಯ್ಕ ವಂದಿಸಿದರು.