ಗ್ರಾಮದಲ್ಲಿ ಅರಣ್ಯ ಒತ್ತುವರಿ ಮಾಡಿದ ಜಮೀನವನ್ನು ತೆರವು ಮಾಡಿಸಿದ ಅರಣ್ಯ ಅಧಿಕಾರಿಗಳು

The forest officials cleared the forest encroached land in the village

ಲೋಕದರ್ಶನ ವರದಿ 

ಗ್ರಾಮದಲ್ಲಿ ಅರಣ್ಯ ಒತ್ತುವರಿ ಮಾಡಿದ ಜಮೀನವನ್ನು ತೆರವು ಮಾಡಿಸಿದ ಅರಣ್ಯ ಅಧಿಕಾರಿಗಳು 

ಜಮಖಂಡಿ 28: ತಾಲೂಕಿನ ಹುಲ್ಯಾಳ ಗ್ರಾಮದಲ್ಲಿ ಒತ್ತುವರಿ ಮಾಡಿಕೊಂಡಿದ್ದ ಅರಣ್ಯ ಪ್ರದೇಶವನ್ನು ಅಧಿಕಾರಿಗಳು ತೆರವುಗೊಳಿಸಿದರು. 

ಹುಲ್ಯಾಳ ಗ್ರಾಮದ ಸರ್ವೆ ನಂ.48ರಲ್ಲಿನ 7.10 ಎಕರೆ ಪ್ರದೇಶ ಅರಣ್ಯ ಪ್ರದೇಶ ಜಾಗೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಗುಂಡಪ್ಪ ಕ. ಕಿಶೋರಿ, ವೆಂಕಪ್ಪ ರಾ. ಬಡಚಿ ಅವರ ಮೇಲೆ ಪ್ರಕರಣ ದಾಖಲಾಗಿತ್ತು. ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಆದೇಶದಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ. ರುಥ್ರೇನ್ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರದೀಪ ರಾಠೋಡ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಕಿರಣ ದಾಸರೆಡ್ಡಿ, ಉಪ ವಲಯ ಅರಣ್ಯ ಅಧಿಕಾರಿಗಳಾದ ಎಮ್‌.ಎಸ್‌. ನಾವಿ, ಮಹೇಶ ಗುಡಿಮನಿ, ಆರ್‌.ಎಲ್‌. ಜಾಧವ, ಪಿ.ಎಸ್‌.ಪಾಟೀಲ, ಎಚ್‌.ವಾಯ್‌. ಉಗಾರ ಮತ್ತು ಅರಣ್ಯ ಗಸ್ತು ಪಾಲಕರಾದ ರುದ್ರೇಶ ಮೇತ್ರಿ, ಸಿದ್ದು ಕುಳಲಿ, ರಾಜಕಿರಣ ಬೆಳವಡಿ, ಅಕ್ಷತಾ ಜಂಬಗಿ, ಲಕ್ಷ್ಮಣ ಪಾಟೀಲ, ಮಹಾವೀರ ಆಲಗೂರ ತೆರವು ಕಾರ್ಯಾಚರಣೆ ನಡೆಸಿದರು.