ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ ಸಲ್ಲದು: ಪ್ರಕಾಶಾನಂದಜೀ

ಲೋಕದರ್ಶನವರದಿ

ರಾಣೇಬೆನ್ನೂರು08: ರಸ್ತೆ ಅಗಲೀಕರಣ ಸೇರಿದಂತೆ ಅಭಿವೃದ್ಧಿಯ ಹೆಸರಿನಲ್ಲಿ  ಅರಣ್ಯ ನಾಶ ಮಾಡಿದ್ದೇವೆ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಆಗಬೇಕು, ಮರಗಳು, ನದಿ-ಕೆರೆಗಳು ಕಾಡು ಇವೆಲ್ಲ ನಮ್ಮ ಸಮೃದ್ಧ ಬದುಕಿಗೆ ಅವಶ್ಯವಿರುವ ನೈಸಗರ್ಿಕ ಬಂಡವಾಳ. ನಾವುಗಳು ನಮ್ಮ ಸ್ವಾರ್ಥಕ್ಕೆ ಅಮೂಲ್ಯ ಪರಿಸರವನ್ನು ಹಾಳು ಮಾಡುವುದು ಸರಿಯಲ್ಲ ಎಂದು ಸ್ಥಳೀಯ ರಾಮಕೃಷ್ಣ ಆಶ್ರಮದ ಪ್ರಕಾಶಾನಂದ ಮಹಾರಾಜ ಹೇಳಿದರು. 

    ರಾಜೇಶ್ವರಿನಗರದ ಉದ್ಯಾನವನದಲ್ಲಿ ಜೆಸಿಐ ಸಂಸ್ಥೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಉದ್ಯಾನವನ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 

     ವಿಶ್ವದಲ್ಲಿ ಕಾಣುವ ಸಕಲ ವಸ್ತುಗಳು ಪಂಚ ಮಹಾಭೂತಗಳಿಂದ ಸೃಷ್ಟಿಯಾಗಿವೆ. ಇವುಗಳಿಲ್ಲದೆ ಜಗತ್ತಿಲ್ಲ. ಭೂಮಿ, ಬೆಂಕಿ, ಆಕಾಶ, ಗಾಳಿ ಮತ್ತು ನೀರು ನಮ್ಮ ಬದುಕಿಗೆ ಅಗತ್ಯ ಎಂದರು.

    ನಿಸರ್ಗದ ಸಮತೋಲನ ತಪ್ಪಿದರೆ ಅನಾಹುತ ತಪ್ಪಿದ್ದಲ್ಲ, ನಿಸರ್ಗವನ್ನು ಅಗತ್ಯಕಷ್ಟೇ ಬಳಸುವ ಮೂಲಕ  ಪ್ರಳಯ, ಭೂಕಂಪ, ನೆರೆಹಾವಳಿ, ಪರಿಸರ ಮಾಲಿನ್ಯೆಗಳಲ್ಲಿ ಸಿಕ್ಕಿ ಹಾಕಿಕೊಳ್ಳದೆ ಎಚ್ಚೆತ್ತುಕೊಳ್ಳಬೇಕು, ಇದಕ್ಕೆ ಪರಿಹಾರ ಕೆರೆಗಳ ಹೂಳೆತ್ತುವದು, ತೆರದ ಬಾವಿಗಳ ಬಳಕೆ, ಹೊಲಗಳ ಬದುಗಳಲ್ಲಿ ಮರಗಳನ್ನು ಬೆಳೆಸಬೇಕು, ಇಂಗು ಗುಂಡಿ ನಿಮರ್ಾಣವಾಗಬೇಕು ಎಂದು ಶ್ರೀಗಳು ತಿಳಿಸಿದರು.

    ಜೆಸಿಐ ಅಧ್ಯಕ್ಷೆ ಪುಷ್ಪಾ ಬಾದಾಮಿ, ಸೋಮಶೇಖರ ಮುಂಡರಗಿ, ಡಾ|| ನಾರಾಯಣ ಪವಾರ, ರೇಣುಕಾ ಗಿರಡ್ಡಿ, ಶಶಿಕಲಾ ಮಾಗನೂರ, ಯಶಸ್ವಿನಿ ಮಾನೆ, ಚೇತನ ಮುಂಡಾಸದ, ಗೀತಾ ಕೇರೂರ ಸೇರಿದಂತೆ ಮತ್ತಿತರ ಗಣ್ಯರು, ಮಹಿಳಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು.