ಲೋಕದರ್ಶನವರದಿ
ರಾಣೇಬೆನ್ನೂರು19: ಇಲ್ಲಿನ ಕೆಎಲ್ಇ ಶಿಕ್ಷಣ ಸಂಸ್ಥೆಯ ರಾಜ-ರಾಜೇಶ್ವರಿ ಕಾಲೇಜು ಆವರಣದಲ್ಲಿ ಆಯೋಜನೆಗೊಂಡಿರುವ ಕನರ್ಾಟಕ ವೈಭವ ವೈಚಾರಿಕ ಹಬ್ಬ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಕಲಾವಿದ ಕೊಳಲು ವಾದಕ ಅವರ ಸಂಗೀತ ಕಾರ್ಯಕ್ರಮವು ಸಾವಿರಾರು ಪ್ರೇಕ್ಷಕರ ಮನ ತಣಿಸುವಲ್ಲಿ ಸಫಲವಾಯಿತು.
ತನ್ನ ಕೊಳಲಿನ ನಾದದ ಮೂಲಕ ಕನರ್ಾಟಕದ ಸಾಂಸ್ಕೃತಿಕ ಮತ್ತು ಸಂಗೀತ ಪರಂಪರೆಗೆ ಬಹುದೊಡ್ಡ ಇತಿಹಾಸವಿದೆ ಎನ್ನುವುದನ್ನು ಸಾದರಪಡಿಸಿದ ಪ್ರವೀಣ ಅವರು ಪ್ರೇಕ್ಷಕರೊಂದಿಗೆ ಪರಸ್ಪರ ಸಂವಹನ ನಡೆಸುವುದರ ಮೂಲಕ ಗಮನ ಸೆಳೆದರು.
ವೇದಿಕೆಯಲ್ಲಿ ವ್ಹಿ.ಪಿ.ಲಿಂಗನೌಡ್ರ, ಡಾ|| ನಾರಾಯಣ ಪವಾರ, ಜೆ.ನಂದಕುಮಾರ, ನಿರಂಜನ ಪೂಜಾರ, ಪ್ರೋ|| ಸುರೇಶ ನಾಡಗೌಡರ, ಪತ್ರಕರ್ತ ಶಿವಕುಮಾರ ಕಣಸೊಗಿ, ಜಿ.ಜಿ.ಹೊಟ್ಟಿಗೌಡ್ರ ಸೇರಿದಂತೆ ವೈಭವದ ಸಂಘಟಿಕರು, ಮುಖ್ಯಸ್ಥರು ಉಪಸ್ಥಿತರಿದ್ದರು.