ಸಾಧನೆಯಲ್ಲಿ ಗ್ರಾಮ ಕಟ್ಟಕಡೆಯ ಹಳ್ಳಿಯಲ್ಲ ಮೊದಲ ಹಳ್ಳಿ: ಉತ್ತಂಗಿ

ಲೋಕದರ್ಶನವರದಿ

ಮಹಾಲಿಂಗಪುರ 04:  ಪರೀಕ್ಷೆಯನ್ನು ಹಬ್ಬದಂತೆ ಖುಷಿ ಹಾಗೂ ಆತ್ಮವಿಶ್ವಾಸದಿಂದ ಆಚರಿಸಬೇಕೆಂದು ಪತ್ರಕರ್ತ ನಾರನಗೌಡ ಉತ್ತಂಗಿ ಹೇಳಿದರು. 

            ಸಮೀಪದ ಅವರಾದಿ ಗ್ರಾಮದ ಸಕರ್ಾರಿ ಪ್ರೌಢಶಾಲೆ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ ವಿದ್ಯಾಥರ್ಿಗಳ ಬೀಳ್ಕೊಡುಗೆ, ಪ್ರತಿಭಾ ಪುರಸ್ಕಾರ  ಹಾಗೂ ವಾಷರ್ಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದ ಇವರು, ಶಾಲೆಯ ವಿದ್ಯಾಥರ್ಿಗಳು ಕ್ರೀಡೆ, ಸೈಕ್ಲಿಂಗ್, ಸಾಂಸ್ಕೃತಿಕ , ಶೈಕ್ಷಣಿಕ ವಿಭಾಗಗಳಲ್ಲಿ ಮಂಡ್ಯ, ಮೈಸೂರು, ಆದಿಚುಂಚನಗಿರಿಯಲ್ಲಿ ಪ್ರತಿಭೆ ಮೆರೆದು, ಊರಿಗೆ ಕೀತರ್ಿ ತಂದಿರುವುದು ಹಾಗೂ  ಅವರಾದಿ ಗ್ರಾಮ ಸಾಧನೆಯಲ್ಲಿ ಬೆಳಗಾವಿ ಜಿಲ್ಲೆಯ ಕಟ್ಟಕಡೆಯ ಹಳ್ಳಿಯಲ್ಲ ಮೊಟ್ಟ ಮೊದಲ ಹಳ್ಳಿ ಎಂದು ಶ್ಲ್ಯಾಘಿಸಿದರು.  

         ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳನ್ನು ಸನ್ಮಾನಿಸಿ ನಗದು ಬಹುಮಾನ ನೀಡಲಾಯಿತು. ಉತ್ತಮ ಕ್ರೀಡಾಪಟುಗಳಿಗೆ ವೀರಾಗ್ರಣಿ,  ಸಮಗ್ರ ವೀರಾಗ್ರಣಿ ಮುಂತಾದ ಪ್ರಶಸ್ತಿ ಮತ್ತು ನಗದು ಬಹುಮಾನ ನೀಡಲಾಯಿತು. ಮಕ್ಕಳು ತಮ್ಮ ಅನಿಸಿಕೆ ಹಂಚಿಕೊಂಡರು, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.  

         ಎಸ್ಡಿಎಂಸಿ ಅಧ್ಯಕ್ಷ ಎಂ. ಎಂ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾಜಿ ಜಿ.ಪಂ. ಸದಸ್ಯ ರಮೇಶ ಉಟಗಿ, ಕಲಾವಿದ ಮಲ್ಲಪ್ಪ ಗಣಿ ಮಾತನಾಡಿದರು.  

           ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಎಸ್. ಆರ್. ಬಿದರಿ ಸ್ವಾಗತಿಸಿ, ಶ್ರೀಶೈಲ ಪೂಜಾರಿ, ಗ್ರಾಪಂ ಸದಸ್ಯ ಲಕ್ಷ್ಮಣ ಹರಿಜನ, ಮಾರುತಿ ಖೋತ, ಗ್ರಾಪಂ. ಅಧಿಕಾರಿ ಶಿವಲೀಲಾ ದಳವಾಯಿ, ಕಾರ್ಯದಶರ್ಿ ಸುಮನ್ ಬಾವಲತ್ತಿ,  ಮಲ್ಲನಗೌಡ ಪಾಟೀಲ, ಬಸವರಾಜ ಖಾಳಶೆಟ್ಟಿ, ಶಿವಪ್ಪ ಪೂಜಾರಿ, ಚನ್ನಬಸು ಕುಳ್ಳೊಳ್ಳಿ, ರಾಮಭಟ್ಟ ಇತರರು ಇದ್ದರು. ಅಕ್ಷತಾ ಹೊಸಮನಿ ಮತ್ತು ಸಂಗಡಿಗರು ಪ್ರಾಥರ್ಿಸಿ, ಶಿಕ್ಷಕ ಅರಗಿ ವರದಿ ವಾಚನ ಮಾಡಿದರು. ಕಜಾಪ ಅಧ್ಯಕ್ಷ, ಶಿಕ್ಷಕ ಬಸವರಾಜ ಮೇಟಿ ನಿರೂಪಿಸಿದರು.