ಯಮಕನಮರಡಿ 21: ಸ್ಥಳೀಯ ಯ ವಿ ಸಂಘದ ಶಾಲೆಯಲ್ಲಿ ಸ್ಥಾಪಿಸಲಾದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಕೇಂದ್ರಕ್ಕೆ ಯಮಕನಮರಡಿ ಪೋಲಿಸ ಠಾಣೇ ಪಿ ಎಸ್ ಐ ಶಿವಾನಂದ ಮಣ್ಣಿಕೇರಿರವರು ದಿ.21 ರಂದು ಮುಂಜಾನೆ ಖುದ್ದಾಗಿ ತಮ್ಮ ಸಿಬ್ಬಂದಿಗಳೊಂದಿಗೆ ಭೆಟ್ಟಿ ನಿಡಿ ಕೆಂದ್ರವನ್ನು ಪರಿಶಿಲಿಸಿ ಮಾತನಾಡುತ್ತಾ ಎಸ್ ಎಸ್ ಎಲ್ ಸಿ ಪರಿಕ್ಷೇಯು ಕೆಂದ್ರದಲ್ಲಿ ಶಿಸ್ತು ಬದ್ದವಾಗಿ ನಡೆದಿರುವುದನ್ನು ವಿಕ್ಷೀಸಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಅದರಂತೆ ಸ್ಥಳೀಯ ಸಿ ಇ ಎಸ್ ಪ್ರೌಡಶಾಲೆ ಕೆಂದ್ರಕ್ಕೂ ಸಹಿತ ಬೇಟಿ ನಿಡಿ ಪರಿಶಿಲಿಸಿದರು ಈ ಸಲದ ಎಸ ಎಸ ಎಲ್ ಸಿ ಪರಿಕ್ಷೇಯಲ್ಲಿ ಶಾಲಾ ಸುತ್ತಮುತ್ತಲು ಯಾವುದೇ ತೆರನಾದ ಗಲಾಟೆ ವಗೈರೆ ಇಲ್ಲದೆ ಇರುವುದನ್ನು ಕಂಡು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಅದರಂತೆ ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಶ್ರೀಮತಿ ಪ್ರಭಾವತಿ ಪಾಟೀಲ ರವರು ಮದ್ಯಾಹ್ನ 12 ಗಂಟೆಗೆ ಬೆಟಿ ನಿಡಿ ಯಮಕನಮರಡಿ ದಡ್ಡಿ ಬಸ್ಸಾಪುರ ಮುಂತಾದ ಗ್ರಾಮಗಳಲ್ಲಿ ಬೇಟಿ ನಿಡಿದರು. ಎಲ್ಲ ಕೇಂದ್ರಗಳಲ್ಲಿ ನಿರು ಮತ್ತು ತುರ್ತು ವೈದ್ಯಕೀಯ ಸಿಬ್ಬಂದಿಯನ್ನು ಆಯೋಜಿಸಲಾಗಿತ್ತು.