ಮರಿಹೊತ್ತ ಚೇಳು" ಚಿತ್ರಕ್ಕೆ ಪ್ರಥಮ ಬಹುಮಾನ

ಲೋಕದರ್ಶನವರದಿ

ರಾಣೇಬೆನ್ನೂರು೧೯: ಬಳ್ಳಾರಿ ಜಿಲ್ಲೆಯ ಹಂಪಿ ಉತ್ಸವದ ಅಂಗವಾಗಿ ಏರ್ಪಡಿಸಿದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ ಯಲ್ಲಿ ವನ್ಯಜೀವಿ ಛಾಯಾಗ್ರಾಹಕ ನಾಮದೇವ ಕಾಗದಗಾರ ಸೆರೆಹಿಡಿದ "ಮರಿಹೊತ್ತ ಚೇಳಿಗೆ" ಪ್ರಥಮ ಬಹುಮಾನ ಲಭಿಸಿದೆ.

        ವನ್ಯ ಜೀವಿ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದ  ನಾಮದೇವ ಕಾಗದಗಾರ ರವರಿಗೆ ಬಳ್ಳಾರಿ ಜಿಲ್ಲಾ ಪಂಚಾಯತಿಯ ಸಿಇಓ ಕೆ.ನಿತೀಶ ರವರು ತಮ್ಮ ಕಛೇರಿಯಲ್ಲಿ  25 ಸಾವಿರ ನಗದು, ಪ್ರಮಾಣ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.

  ಹಿರಿಯ ಪತ್ರಕರ್ತ ಸಿ.ಮಂಜುನಾಥ ಹಾಗೂ ಸಹಾಯಕ ಕಾರ್ಯ ನಿರ್ವಾಹಕರು  ಸೇರಿದಂತೆ ಜಿಲ್ಲಾ ಪಂಚಾಯಿತಿಯ ಸಿಬ್ಭಂದಿ ವರ್ಗ ಉಪಸ್ಥಿತರಿದ್ದರು.  

      ನಂತರದಲ್ಲಿ ಬಳ್ಳಾರಿ ವಲಯದ  ಪೋಲಿಸ್ ಮಹಾನಿದರ್ೇಶಕ ಎಂ.ನಂಜುಂಡಸ್ವಾಮಿಯವರು ನಾಮದೇವ ಕಾಗದಗಾರ ರವರ ಈ ಸಾಧನೆಯನ್ನು ಮೆಚ್ಚಿ ತಮ್ಮ ಕಛೇರಿಗೆ ಆಹ್ವಾನಿಸಿ ಅಭಿನಂದಿಸಿದರು. 

        ನಾಮದೇವ ಕಾಗದಗಾರ ಅವರ ಕ್ಷೇತ್ರ ಸಾಧನೆಗೆ ವನ್ಯ ಜೀವಿ ಛಾಯಾಗ್ರಾಕರಾದ ಚಂದ್ರು ಶಿಡೇನೂರ, ಹರೀಶ್ ಬಡಿಗೇರ, ಟಿ.ಶಿವಕುಮಾರ ಹಾಗೂ ಕಾಗದ ಸಾಂಗತ್ಯದ ಗೆಳೆಯರು, ಸಾಹಿತಿಗಳು, ಪತ್ರಕರ್ತರು ಅಭಿನಂದಿಸಿದ್ದಾರೆ.