ಲೋಕದರ್ಶನ ವರದಿ
ಶಿರಹಟ್ಟಿ 25: ಮತಕ್ಷೇತ್ರದದ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಗ್ರಾಮೀಣ ಪ್ರದೇಶಕ್ಕೆ ರಸ್ತೆ, ವಿದ್ಯುತ್, ನೀರು ಸೇರಿದಂತೆ ಮುಂತಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ಗ್ರಾಮೀಣ ಪ್ರದೇಶದ ಅಭಿವೃದ್ದಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ತಾಲೂಕಿನ ದೇವಿಹಾಳ, ರಣತೂರು, ಬೆಳ್ಳಟ್ಟಿ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಈ ಗ್ರಾಮದ ಜನರ ಬಹುದಿನದ ಬೇಡಿಕೆಯಾದ ಉತ್ತಮ ರಸ್ತೆಯ ಕಾಮಗಾರಿಯ ಕನಸು ನನಸಾಗುವ ಕಾಲ ಬಂದಿದೆ. ಪ್ರಸ್ತುತ ರಸ್ತೆಯು ಈ ಮೂರು ಗ್ರಾಮದ ನಡುವಿನ ಜನರಿಗೆ ಉತ್ತಮ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ.
ಅಭಿವೃದ್ದಿ ಕಾಮಗಾರಿಗಳಲ್ಲಿ ಯಾವುದೇ ರೀತಿಯ ಲೋಪದೋಷ ಹಾಗೂ ನಿಷ್ಕಾಳಜಿಗಳಿಗೆ ಆಸ್ಪದ ನೀಡದೆ ಪ್ರತಿಯೊಂದು ಕಾಮಗಾರಿಗಳು ಗುಣಮಟ್ಟದಿಂದ ಕೂಡಿರುವುದಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಶಂಕರಪ್ಪ ಬಾಕರ್ಿ, ತಿಮ್ಮರಡ್ಡಿ ಅಳವಂಡಿ, ಹುಸೇನಸಾಬ ಬಳಿಗಾರ, ಶರೀಫಸಾಬ ಛಬ್ಬಿ, ಎಂ.ಎ. ಪಾಟೀಲ, ನಾಗಪ್ಪ ಕಾಶಣ್ಣವರ, ಪರಶುರಾಮ ಅಕ್ಕಮ್ಮನವರ, ಶಿವಾಜಿ ಲಮಾಣಿ, ಹುಸೇನಸಾಬ ನೀಲಗುಂದ, ಹಜರೇಸಾಬ ಬಿಜಕತ್ತಿ, ಆಭಿಯಂತರ ಎಂ.ಎ.ಪಟ್ಟಣಶೆಟ್ರ ಮುಂತಾದವರು ಉಪಸ್ಥಿತರಿದ್ದರು.