ಲೋಕದರ್ಶನ ವರದಿ
ಶಿರಹಟ್ಟಿ 24: ಪಟ್ಟಣದ ಜನರ ಬಹುದಿನ ಬೇಡಿಕೆಯಾದ ಬಸ್ ಡಿಪೋ ಪ್ರಾರಂಭಕ್ಕೆ, ಶುಭ ಸೂಚನೆ ದೊರಕಿದ್ದು, ಶೀಘ್ರದಲ್ಲಿ ಸುಸಜ್ಜೀತ ಬಸ್ ಡಿಪೋ ನಿರ್ಮಾಣ ಮಾಡುವುದರ ಮೂಲಕ ಸಾರ್ವಜನಿಕರ ಸೇವೆಗೆ ಕಲ್ಪಿಸಲಾಗುದು ಎಂದು ಶಾಸಕ ರಾಮಣ್ನ ಲಮಾಣಿ ಹೇಳಿದರು.
ಪಟ್ಟಣದ ಹರಿಪೂರದಲ್ಲಿ 3.65 ಕೋಟಿ ವಚ್ಚದಲ್ಲಿ ನೂತನ ಬಸ್ ಡಿಪೋ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೆರಿಸಿ ಮಾತನಾಡಿದರು. ಪಟ್ಟಣವು ಕೇಂದ್ರ ಸ್ಥಳವಾಗಿದೆ, ಹೀಗಾಗಿ ತಾಲೂಕು ಕೇಂದ್ರಕ್ಕೆ ಸಾವಿರಾರು ವಿದ್ಯಾರ್ಥಿಗಳು, ಗ್ರಾಮೀಣ ಪ್ರದೇಶದ ಜನರು ನಿತ್ಯ ವಿವಿಧ ಕೆಲಸ ಕಾರ್ಯಗಳಿಗಾಗಿ ಬರುತ್ತಾರೆ. ಆದ್ದರಿಂದ ಜನರಿಗೆ ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಕಲ್ಪಿಸುವುದರ ಮೂಲಕ ಸುಗಮ ಸಂಚಾರಕ್ಕೆ ಒತ್ತು ನೀಡಲಾಗುವುದು. ಅಲ್ಲದೇ ಶೀಘ್ರದಲ್ಲಿ ಸರ್ವ ಇಲಾಖೆಯ ಕಛೇರಿ ಸೇರಿದಂತೆ ಕೋರ್ಟ್, ನೂರು ಬೆಡ್ಡಿನ ಆಸ್ಪತ್ರೆಗೆ ನಿವೇಶನವನ್ನು ಗುರುತಿಸಲಾಗಿದ್ದು, ಶೀಘ್ರದಲ್ಲಿ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ನೆರವೆರಿಸಲಾಗುವುದು.
ನಂತರ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್. ಪಾಟೀಲ ಮಾತನಾಡಿ. ಸಾರಿಗೆ ಸಂಸ್ಥೆಯು ಸಾಕಷ್ಟು ಕಷ್ಟದಲ್ಲಿದ್ದರೂ ಸಾರ್ವಜನಿಕರ ಸೇವೆ ನಿರಂತರವಾಗಿ ಸಲ್ಲಿಸುತ್ತಿದ್ದು, ಜನರು ಸಾರಿಗೆ ಸಂಸ್ಥೆಯನ್ನು ನಮ್ಮದೆಂದು ಭಾವಿಸಿ ಬಸ್ಗಳಿಗೆ ಕಲ್ಲು ತುರಿ ಹಾನಿ ಮಾಡದೆ ಬಸ್ಗಳ ರಕ್ಷಣೆಗೆ ಮುಂದಾಗಬೇಕು. ಸಾರ್ವಜನಿಕರು ಖಾಸಗಿ ವಾಹನ, ದ್ವಿಚಕ್ರ ವಾಹನ ಉಪಯೋಗಿಸಿ ಅಪಘಾತಕ್ಕೆ ಈಡಾಗುವುದಕ್ಕಿಂತ ಸರ್ಕಾರಿ ಬಸ್ನಲ್ಲಿ ಪ್ರಯಾಣಿಸಿ ಸುರಕ್ಷಿತವಾಗಿರಿ ಎಂದು ಹೇಳಿದರು.
ಮಾಜಿ ಸಂಸದ ಐ.ಜಿ. ಸನದಿ, ಜಿಪಂ ಸದಸ್ಯೆ ರೇಖಾ ಅಳವಂಡಿ, ದೇವಕ್ಕ ಲಮಾಣಿ, ಜಿಪಂ ಮಾಜಿ ಅಧ್ಯಕ್ಷ ವಿ.ವಿ. ಕಪ್ಪತ್ತನವರ, ತಿಪ್ಪಣ್ಣ ಕೊಂಚಿಗೇರಿ, ರಾಮಣ್ಣ ಡಂಬಳ, ಸಿ.ಸಿ ನೂರಶಟ್ಟರ, ನಾಗರಾಜ ಲಕ್ಕುಂಡಿ, ಸಂದೀಪ ಕಪ್ಪತ್ತನವರ, ಫಕ್ಕೀರೇಶ ರಟ್ಟಿಹಳ್ಳಿ, ಗೂಳಪ್ಪ ಕರಿಗಾರ, ಅನಿಲ ಮಾನೆ, ಶ್ರೀನಿವಾಸ ಬಾರಬಾರ, ಪರಶುರಾಮ ಡೊಂಕಬಳ್ಳಿ ಸೇರಿದಂತೆ ಕುಂದು ಕೊರತೆ ನಿವಾರಣಾ ಸಮಿತಿಯ ಸರ್ವ ಸದಸ್ಯೆರು ಉಪಸ್ಥಿತರಿದ್ದರು.