ಬೆಂಗಳೂರು, ಜ 10 : 2020 ರ ಮೊದಲ ಚಂದ್ರಗ್ರಹಣ ಜ 10 ರ ಶುಕ್ರವಾರ ರಾತ್ರಿ ಘಟಿಸಲಿದೆ. ರಾತ್ರಿ 10.37 ರಿಂದ ಬೆಳಗಿನ ಜಾವ 2.40 ರ ವರೆಗೆ ಪಾಶ್ರ್ವ ಗ್ರಹಣ ಸಂಭವಿಸಲಿದೆ. ಒಟ್ಟು ಗ್ರಹಣದ ಅವಧಿ 4 ಗಂಟೆ 3 ನಿಮಿಷದಷ್ಟಿರಲಿದೆ.
ಬರಿಗಣ್ಣಿನಿಂದ ಚಂದ್ರಗ್ರಹಣ ವೀಕ್ಷಿಸಬಹುದಾಗಿದೆ. ಆದರೆ ಇದು ಪಾಶ್ರ್ವಚಂದ್ರ ಗ್ರಹಣವಾಗಿದ್ದು ಚಂದ್ರನ ಮೇಲೆ ದಟ್ಟ ನೆರಳು ಬೀಳುವುದಿಲ್ಲವಾದ್ದರಿಂದ ಹುಣ್ಣಿಮೆ ಚಂದ್ರನಿಗೂ ಗ್ರಹಣದ ಚಂದ್ರನಿಗೂ ಅಂತಹ ವ್ಯತ್ಯಾಸ ಗೋಚರಿಸುವುದಿಲ್ಲ.
ಭಾರತ, ಯುರೋಪ್, ಆಫ್ರಿಕಾ, ಆಸ್ಟ್ರೇಲಿಯಾದ ಕೆಲ ಪ್ರದೇಶಗಳಲ್ಲಿ ಗ್ರಹಣ ಗೋಚರಿಸಲಿದೆ.