ಮೇ 23ರಂದು ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರ ಬಿಡುಗಡೆ

The film 'Kuladdi Keelyavudo' will be released on May 23rd.

ಮೇ 23ರಂದು ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರ ಬಿಡುಗಡೆ  

ಕೊಪ್ಪಳ 03: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ನಟಿಸಿರುವ ಕೆ.ರಾಮನಾರಾಯಣ್ ನಿರ್ದೇಶನದ  ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರ ಮೇ 23ಕ್ಕೆ ರಾಜ್ಯಾದಾದ್ಯಂತ ತೆರೆ ಕಾಣಲಿದೆ. 

ಶನಿವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ  ಮಾತನಾಡಿದ ಚಿತ್ರದ ನಾಯಕ ಮಡೆನೂರ್ ಮನು ಕನ್ನಡ ಕಲಾಭಿಮಾನಿಗಳೇ ಕುಟುಂಬ ಸಮೇತರಾಗಿ ಚಿತ್ರಮಂದಿರಕ್ಕೆ ಬನ್ನಿ ಚಿತ್ರವನ್ನು ನೋಡಿ ಹರಿಸಿ ನಿಮ್ಮ ಬರುವಿಕೆಗೆ ಕಾಯುತ್ತಿದೆ ನಮ್ಮ ಕ್ಷೇತ್ರ ತಂಡ, ಈ ಚಿತ್ರ ಲವ್, ಮಾಸ್, ಮನೋರಂಜನೆ ಒಳಗೊಂಡ ಚಿತ್ರವಾಗಿದೆ. ಮನೋಮೂರ್ತಿ ಸಂಗೀತ ಸಂಯೋಜಿಸಿದ್ದು, ಚೇತನ್ ಹಾಡಿದ್ದಾರೆ. ‘ಈ ಗೀತೆಯಲ್ಲಿ ಯೋಗರಾಜ್ ಭಟ್ ಅಭಿನಯಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಎರಡು ಹಾಡುಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ’ ಎಂದರು ಖ್ಯಾತ ನಿರ್ದೇಶಕರು.  

ಯೋಗರಾಜ್ ಸಿನಿಮಾಸ್ ಅರ​‍್ಿಸುತ್ತಿರುವ ಈ ಚಿತ್ರಕ್ಕೆ ಪರ್ಲ್‌ ಸಿನಿ ಕ್ರಿಯೇಷನ್ಸ್‌ ಬಂಡವಾಳ ಹೂಡಿದೆ ರಾಜ್ಯದ ಜನತೆ ಚಲನಚಿತ್ರವನ್ನು ನೋಡಿ ಪ್ರೋತ್ಸಾಹಿಸುವಂತೆ ತಿಳಿಸಿದರು. ಚಿತ್ರದ ತಾರಾಬಳಗದಲ್ಲಿ ಮೌನ ಗುಡ್ಡೆಮನೆ ಚಿತ್ರದ ನಾಯಕಿ, ಶರತ್ ಲೋಹಿತಾಶ್ವ, ತಬಲನಾಣಿ, ಸೋನಾಲ್ ಮೊಂತೆರೊ, ಕರಿಸುಬ್ಬು, ಬ್ಯಾಂಕ್ ಜನಾರ್ಧನ್, ಹಾಸ್ಯ ನಟ ಉಮೇಶ್, ಡ್ಯಾಗನ್ ಮಂಜು, ಸೀನ ಮುಂತಾದವರು ಇದ್ದಾರೆ. ಸುದ್ದಿಗೋಷ್ಠಿಯಲ್ಲಿ ಗಂಗಾಧರ್, ಪಟಾಕಿ ಬಸವರಾಜ್ ಉಪಸ್ಥಿತರಿದ್ದರು.