ವಿಜಯಪುರ 19: ಈ ದೇಶದಲ್ಲಿ ರೈತರಿಗೆ ಜಯವಾಗಬೇಕಿದೆ ಮತ್ತು ಸೈನಿಕರಿಗೆ ಜಯವಾಗಬೇಕಿದೆ. ರೈತ ಇಲ್ಲದಿದ್ದರೆ ಅನ್ನವಿಲ್ಲ ಸೈನಿಕ ಇಲ್ಲದಿದ್ದರೆ ಭದ್ರತೆ ಇಲ್ಲ ಈ ಎರಡೂ ಶಕ್ತಿಗಳೂ ನಮ್ಮ ದೇಶದ ಹೃದಯ ಮತ್ತು ಬೆನ್ನೆಲುಬು ಇದ್ದಂತೆ ಎಂದು ತೋಟಗಾರಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ ಮನಗೂಳಿ ಅವರು ಹೇಳಿದರು.
ನಗರದ ಕೃಷಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಇಂದು ಕೃಷಿ ವಿಶ್ವವಿದ್ಯಾಲಯ ಧಾರವಾಡ ಹಾಗೂ ತೋಟಗಾರಿಕ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಿಸಾನ ಮೇಳ ಹಾಗೂ ಆತ್ಮ (ಎ.ಟಿ.ಎಂ.ಎ) ಯೋಜನೆಯಡಿ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿತರಣಾ ಸಮಾರಂಭವನ್ನು ಸಸಿಗೆ ನೀರುಣಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಅಮೇರಿಕಾ, ಪ್ರಾನ್, ಇಸ್ರೇಲ್, ಮುಂತಾದ ದೇಶಗಳು ಕೇವಲ 25 ರಷ್ಟು ಜನರು ಕೃಷಿಕರಾಗಿ, 75 ರಷ್ಟು ಜನರು ಉದ್ಯೋಗ ಮಾಡುತ್ತಾ ಬೇರೆ ದೇಶಗಳಿಗೆ ಆಹಾರವನ್ನು ರಪ್ತು ಮಾಡುತ್ತವೆ. ಆದರೆ ನಮ್ಮ ದೇಶದಲ್ಲಿ 75 ರಷ್ಟು ಕೃಷಿಕರಾಗಿದ್ದು 25 ರಷ್ಟು ಉದ್ಯೋಗಸ್ಥರಿದ್ದು ಬೇರೆ ದೇಶಗಳಿಂದ ಆಹಾರವನ್ನು ಆಮದು ಮಾಡಿಕೊಳ್ಳುತ್ತಿವೆ. ಇದೊಂದು ಗಂಭೀರ ಸಂಗತಿ ಆಗಿದೆ, ರೈತಾಪಿ ವರ್ಗದವರು ಉತ್ತಮ ವೈಜ್ಞಾನಿಕ ಸಲಕರಣೆಗಳಿಂದ ತಂತ್ರಜ್ಞಾನ ಬಳಸಿಕೊಂಡು ಒಕ್ಕಲುತನಕ್ಕೆ ಮುಂದಾಗಬೇಕು ಆಗ ಮಾತ್ರ ನಮ್ಮ ದೇಶ ಕೃಷಿಯಲ್ಲಿ ಅಭಿವೃದ್ದಿ ಹೊಂದಲು ಸಾದ್ಯ ಎಂದರು.
ರೈತರು ನಿಮ್ಮ ಭೂಮಿಯ ಫಲವತ್ತತೆಯ ಅನುಗುಣವಾಗಿ ಹೊಂದಿಕೆ ಆಗುವಂತ ಬೆಳೆಯನ್ನು ಬೆಳೆಯಬೇಕು, ಹಾಗೂ ರೈತರು ಮಿಶ್ರ ಬೆಳೆಗೆ ಹೆಚ್ಚು ಒತ್ತು ನೀಡಬೇಕು, ರೈತರ ಅಭಿವೃದ್ದಿಗಾಗಿಯೇ ರಚನೆ ಆದಂತಹ ಸಕರ್ಾರದ ಹಲವು ರೈತಪರ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು, ನಿಮ್ಮ ಮಕ್ಕಳನ್ನು ಉತ್ತಮ ಶಿಕ್ಷಣವಂತರನ್ನಾಗಿ ಮಾಡಿ ಸದೃಢ ರಾಷ್ಟ್ರನಿಮರ್ಾಣಕ್ಕೆ ಕೈ ಜೋಡಿಸಬೇಕು ಎಂದು ಹೇಳಿದರು
ರೈತರಿಗೆ ಧನಕರುಗಳೆ ಸಂಪತ್ತು ಆಗಿದ್ದು ಹೈನುಗಾರಿಕೆ, ಕೋಳಿಸಾಕಾಣಿಕೆ, ಕುರಿಸಾಕಾಣಿಕೆ, ಮುಂತಾದ ಸಾಕಾಣಿಕೆನ್ನು ಪ್ರರಂಬಿಸಿದರೆ ಕೃಷಿಗೆ ಯೋಗ್ಯವಾದ ಸವಯವ ಗೊಬ್ಬರವು ಉತ್ಪನ್ನವಾಗುತ್ತದೆ, ಜೊತೆಗೆ ಲಾಭವು ಹೆಚ್ಚುತ್ತದೆ ಎಂದು ಕಾರ್ಯಕ್ರಮದಲ್ಲಿ ನೆರೆದಿದ್ದ ರೈತರಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಾಗಠಾಣ ಶಾಸಕ ಡಾ|| ದೇವಾನಂದ ಚವ್ಹಾಣ ಅವರು ಮಾತನಾಡಿ ರೈತರು ತನಗಾದ ಸಂಪೂರ್ಣ ನೋವನ್ನು ನುಂಗಿ ಜಗತ್ತಿಗೆ ನಲಿವನ್ನು ಊಣಬಡಿಸಿ ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಈ ಕೃಷಿಕ ಕುಟುಂಬ ನಮ್ಮ ದೇಶದಲ್ಲಿ ನೆಲೆಸಿರುವವರೆಗೂ ನಮಗೆಂದೂ ಸೋಲಗದು. ಸರಕಾರದ ಸಹಾಕಾರದಿಂದ ರಚನೆಗೊಂಡಂತಹ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಕೃಷಿ ಸಲಕರಣೆ ವಿವಿಧ ಕೃಷಿ ತಂತ್ರಜ್ಞಾನ ಬಳಕೆ, ಸವಯವ ಗೊಬ್ಬರ ಬಳಕೆ, ಮುಂತಾದ ತಂತ್ರಗಳನ್ನು ಬಳಸಿಕೊಂಡು, ಕೃಷಿ ಚಟುವಟಿಕಡಯಲ್ಲಿ ತೊಡಗಿಕೊಂಡು ಮುನ್ನೆಡೆದರೆ ಮುಂದಿನ ದಿನಗಳಲ್ಲಿ ಇಡೀ ವಿಶ್ವಕ್ಕೆ ಆಹಾರ ನೀಡುವ ದೇಶ ನಮ್ಮದಾಗಲಿದೆ ಎಂದು ಹೇಳಿದರು.
ಸ್ವಾಗತ ಭಾಷಣವನ್ನು ಪ್ರಕಾಶ್ ಆರ್ ಚವ್ಹಾಣ್ ನೆರವೇರಿಸಿದರು, ಜಂಟಿ ಕೃಷಿ ನಿದರ್ೇಶಕ ಶಿವಕಮಾರ್ ಪ್ರಸ್ತಾವಿಕ ನುಡಿಗಳನ್ನು ನುಡಿದರು.
ಇದೇ ಸಂದರ್ಭದಲ್ಲಿ ಕೃಷಿವಲಯದಲ್ಲಿ ಅತ್ಯುನ್ನತ ಸಧಾನೆ ಮಾಡಿದ ಸಾದಕರಿಗೆ ಸನ್ಮಾನಿಸಿ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕಪ್ರಶಸ್ತಿ ಜೊತೆ 25000 ಸಾವಿರ ರೂಪಾಯಿ ಹಾಗೂ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಜೊತೆಗೆ 10000 ಸಾವಿರ ರೂಪಾಯಿ ನಗದು ಬಹುಮಾನಗಳೊಂದಿಗೆ ಪ್ರಶಸ್ತಿಗಳನ್ನು ವಿತರಣೆ ಮಾಡಲಾಯಿತು
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ, ಕವಿತಾ ವಿಲಾಸ ರಾಠೋಡ, ಶ್ರೀಮತಿ ಮಹಾದೇವಿ, ಡಾ. ಆರ್,ಬಿ, ಬೆಳ್ಳಿ ಇತರ ಅಧಿಕಾರಿ ಮುಖಂಡರು ಉಪಸ್ಥಿತರಿದ್ದರು.