ನವದೆಹಲಿ, ಜೂನ್ 5, ಪ್ರಸಿದ್ದ ಅಮರನಾಥ ಯಾತ್ರೆ ಮುಂದಿನ ತಿಂಗಳ 21 ರಿಂದ ಪ್ರಾರಂಭವಾಗಲಿದ್ದು, ಒಟ್ಟು 14 ದಿನಗಳವರೆಗೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಅಮರನಾಥ ಯಾತ್ರೆಯ ಅಂಗವಾಗಿ ಇಂದು ಜಮ್ಮುಕಾಶ್ಮೀರ ಆಡಳಿತದ ವತಿಯಿಂದ ಪೂಜಾಕಾರ್ಯವನ್ನು ನೆರವೇರಿಸಿ ಯಾತ್ರೆಯ ಪೂರ್ವ ಸಿದ್ಧತೆಗೆ ಚಾಲನೆ ನೀಡಲಾಗಿದೆ. ಜುಲೈ 21 ರಿಂದ ಆರಂಭವಾಗುವ ಯಾತ್ರೆ ಅಗಸ್ಟ್ 3ರವರೆಗೆ ಅಂದರೆ 14 ದಿನಗಳ ವರೆಗೂ ಮುಂದುವರೆಯಲಿದೆ ಎಂದು ಹೇಳಲಾಗಿದೆ. ಅನಂತ್ ನಾಗ್ ಜಿಲ್ಲೆಯ ಪಹಲ್ ಗಾಮ್ ನಿಂದ ಹಾಗೂ ಗಂದರ್ಬಾಲ್ ಜಿಲ್ಲೆಯ ಬಲ್ ಟಲ್ ಪ್ರದೇಶದಿಂದ ಅಮರನಾಥ ಯಾತ್ರೆ ಕೈಗೊಳ್ಳಬಹುದಾಗಿದೆ ಎಮದು ಹೇಳಲಾಗಿದೆ.