ಲೋಕದರ್ಶನ ವರದಿ
ಬೆಳಗಾವಿ 11: ನಗರದ ಪೌರ ಕಾಮರ್ಿಕರ ಗುತ್ತಿಗೆದಾರ ವೈ.ಬಿ.ಗೊಲ್ಲರ ಎಂಬಾತರಿಗೆ ಹಲವರು ಸಾಮಾಜಿಕ ಮಾದ್ಯಮಗಳ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪೌರ ಕಾಮರ್ಿಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಶಾಪೂರನ ಭಾರತನಗರದ ಪೌರಕಾಮರ್ಿಕ ಗುತ್ತಿಗೆದಾರ ವೈ.ಬಿ.ಗೊಲ್ಲರ ಎನ್ನುವ ನೀವು ಪೌರ ಕಾಮರ್ಿಕರಿಗೆ ಸರಿಯಾಗಿ ವೇತನ ,ಉಡುಪು ಮತ್ತು ರಕ್ಷಣಾ ಸಾಮಗ್ರಿಗಳನ್ನು ಸರಿಯಾಗಿ ನೀಡುತ್ತಿಲ್ಲ ಇವರನ್ನು ಕೆಲಸದಿಂದ ವಜಾಗೊಳಿಸಬೇಕೆಂದು ಸಾಮಾಜೀಕ ಜಾಲತಾಣಗಳಲ್ಲಿ ಸುಳ್ಳು ಸಂದೇಶವನ್ನು ನೀಡುವುದರ ಮೂಲಕ ಶಂಕರ ಪೂಜಾರಿ, ಸುರೇಶ ಗೊಲ್ಲರ, ತಿಮ್ಮಾ ಗೊಲ್ಲರ, ಕುರುಬ ಗೊಲ್ಲರ, ಗಿರೀಶ ಪೂಜಾರಿ ಎನ್ನುವರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.