ಕಣ್ಣು ಮಾನವನ ದೇಹದ ಅತೀ ಸೂಕ್ಷ್ಮವಾದ ಅಂಗ

ಲೋಕದರ್ಶನ ವರದಿ

ಬೈಲಹೊಂಗಲ 04: ಕಣ್ಣು ಮಾನವನ ದೇಹದ ಅತೀ ಸೂಕ್ಷ್ಮವಾದ ಅಂಗ. ಇದನ್ನು ಅತೀ ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು. ಬಡ ಜನರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಅನುಕೂಲವಾಗಿವೆ ಎಂದು ಪಿಕೆಪಿಎಸ್ ಅಧ್ಯಕ್ಷ ಸೋಮಲಿಂಗ ಚಳಕೊಪ್ಪ ಹೇಳಿದರು.

    ಸಮೀಪದ ಹೊಸೂರ  ಗ್ರಾಮದ  ಪಿಕೆಪಿಎಸ್, ನೇತ್ರ ರಿಸರ್ಚ ಫೌಂಡೇಶನ್ ದ ಸುಪರ್ ಸ್ಪೇಶಾಲಿಟಿ ಆಸ್ಪತ್ರೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಉಚಿತ ಕಣ್ಣು ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕೂಲಿ ಕಾಮರ್ಿಕರು, ಬಡ ಜನತೆಗೆ ಸರಿಯಾದ ಕಣ್ಣಿನ ಆರೈಕೆ ಮಾಹಿತಿಯ ಕೊರತೆಯಿಂದ ತಮ್ಮ ಕಣ್ಣಿನ ದೃಷ್ಟಿಯನ್ನೆ ಕಳೆದುಕೊಂಡಿದ್ದಾರೆ. ಸಾಮನ್ಯ ಜನತೆಗೆ ಕಣ್ಣಿನ ಆರೋಗ್ಯದ ಬಗ್ಗೆ ಉಚಿತ ಮಾಹಿತಿ, ತಪಾಸಣೆ, ಕನ್ನಡಕ ವಿತರಣೆ, ಮತ್ತು ಪೊರೆ ಬಂದ ರೋಗಿಗಳಿಗೆ ಉಚಿತ ಶಸ್ತ್ರ ಚಿಕಿತ್ಸೆ ಹಮ್ಮಿಕೊಳ್ಳಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

      ನೇತ್ರ ತಜ್ಞೆ ಜೋಸ್ಟಸ್ನಾ ಪಾಟೀಲ ಮಾತನಾಡಿ, ಪೌಷ್ಠಿಕ ಆಹಾರ ಕೊರತೆಯಿಂದ ಅನೇಕ ರೋಗಕ್ಕೆ ತುತ್ತಾಗಿ ಕಣ್ಣಿನ ಪೊರೆ, ಗ್ಲೊಕೊಮಾ ರೋಗ ಬರುವದು. ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದೆ ದೃಷ್ಟಿ ಹೀನರಾಗುತ್ತಿದ್ದಾರೆ. ನೇತ್ರ ರಿಸರ್ಚ ಫೌಂಡೇಶನ್ ದಿಂದ ಜನಸಾಮನ್ಯರಿಗೆ ಉಚಿತ ಚಿಕಿತ್ಸೆ ಮತ್ತು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

  ವೇದಿಕೆಯ ಮೇಲೆ ನಿವೃತ್ತ ಸಹಕಾರಿ ಸಂಘಗಳ ನಿಬಂಧಕ ಎಸ್.ವ್ಹಿ.ಇಂಗಳಗಿ, ಉಪಾಧ್ಯಕ್ಷ ಈರಣ್ಣ ಹುರಳಿ, ಜಿಲ್ಲಾ ಸಹಕಾರಿ ಯುನಿಯನ್ ನಿರ್ದೇಶಕ ಆಯ್.ಬಿ.ಇಂಗಳಗಿ, ನ್ಯಾಯವಾದಿ ಎಸ್.ಎನ್.ಬುಡಶಟ್ಟಿ, ಮುಖ್ಯ ಕಾರ್ಯ ನಿರ್ವಾಹಕ ರುದ್ರಪ್ಪ ಹುಲಿಕಟ್ಟಿ ಇದ್ದರು.

ಪಿಕೆಪಿಎಸ್ ನಿರ್ಧೆಶಕರಾದ ಶಿವು ಮಾಕಿ, ಸಿದ್ದಪ್ಪ ಗುಮಗೋಳ, ಪ್ರೇಮಾಬಾಯಿ ಪಾಟೀಲ, ಗಂಗವ್ವ ಯರಡಾಲ, ನಾಗಪ್ಪ ತಳವಾರ, ಸೋಮಲಿಂಗಪ್ಪ ಯರಡಾಲ ಇದ್ದರು.

  ಶಿಬಿರದಲ್ಲಿ 150 ಜನ ಚಿಕಿತ್ಸೆ ಪಡೆದುಕೊಂಡರು. 41 ಜನ ಉಚಿತ ಶಸ್ತ್ರ ಚಿಕಿತ್ಸೆಗೆ ಆಸ್ಪತ್ರೆಗೆ ತೆರಳಿದರು. ಪ್ರಸಾದ ಹುಂಬಿ ಸ್ವಾಗತಿಸಿದರು, ಕಲ್ಲಪ್ಪ ಚಳಕೊಪ್ಪ ನಿರೂಪಿಸಿ ವಂದಿಸಿದರು.