ಮಹಾಕಾವ್ಯ ಕೊಟ್ಟ ವಾಲ್ಮೀಕಿ ಒಳ್ಳೆಯ ಮನುಷ್ಯ : ಶಾಸಕಿ ರೂಪಾಲಿ

ಕಾರವಾರ 24: ರಾಮಾಯಣ ಮಹಾಕಾವ್ಯವನ್ನು ಜಗತ್ತಿಗೆ ಕೊಟ್ಟ ಆದಿಕವಿ ವಾಲ್ಮೀಕಿ  ಮಹಷರ್ಿ ಒಳ್ಳೆಯ ಮನುಷ್ಯರಾಗಿದ್ದರು  ಎಂದು ಶಾಸಕಿ ರೂಪಾಲಿ ನಾಯ್ಕ  ಅಭಿಪ್ರಾಯಪಟ್ಟರು.

 ಕಾರವಾರದ ಜಿಲ್ಲಾ ರಂಗಮಂದಿರದಲ್ಲಿ ಬುಧುವಾರ  ನಡೆದ ಮಹಷರ್ಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬದುಕಿನ ಮಹಾಸೂತ್ರವನ್ನು ಒಳಗೊಂಡ ರಾಮಾಯಣ ಭಾರತದ ಜನಜೀವನದ ಪ್ರತಿಬಿಂಬವೇ ಆಗಿದೆ. ನಮ್ಮ ಸಮಾಜ ಹೇಗಿತ್ತು ಎಂಬುದನ್ನು ರಾಮಾಯಣ ಪ್ರತಿನಿಧಿಸುತ್ತದೆ. ಸಮಾಜದ ಪ್ರತಿಬಿಂಬವನ್ನೇ ಕವಿ ಸಮಾಜದ ಎದುರು ಇಡುತ್ತಾನೆ. ಹಾಗಾಗಿ ಮಹಾಕಾವ್ಯ ರಾಮಾಯಣವನ್ನು ಜಗತ್ತಿಗೆ ನೀಡಿದ ವಾಲ್ಮೀಕಿ ಕವಿ ಹೃದಯವರು ಎಂದು ಅಭಿಪ್ರಾಯಪಟ್ಟರು.

                ವಾಲ್ಮೀಕಿ ರಾಮಾಯಣವನ್ನು ವಿದೇಶಗಳಲ್ಲೂ ಸ್ಮರಿಸುತ್ತಾರೆ. ರಾಮಯಣ  ನಮ್ಮ ದೇಶ ಮತ್ತು ಸಂಸ್ಕೃತಿಯ ಪ್ರತೀಕವಾಲ್ಮೀಕಿಯಂತಹ ಸತ್ಪುರುಷರ ಜಯಂತಿಯನ್ನು ರಾಜ್ಯ  ಸಕರ್ಾರದ ವತಿಯಿಂದ ಆಚರಿಸುವುದು ಉತ್ತಮ ಸಂಪ್ರದಾಯ. ಜಿಲ್ಲಾಡಳಿತ ಅತ್ಯಂತ ಉತ್ಸುಕತೆಯಿಂದ ಜಯಂತಿಗೆ ಸಿದ್ಧತೆ ಮಾಡಿದೆ. ಇಂಥ ಜಯಂತಿಗಳಲ್ಲಿ ಎಲ್ಲಾ ಸಮುದಾಯದ ಜನ ಸ್ವಯಂ ಪ್ರೇರಣೆಯಿಂದ ಭಾಗವಹಿಸಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು. ಮೂಲಕ ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ರಾಮಾಯಣದ  ಮಹಾಪುರುಷರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಜಯಂತಿಗಳನ್ನು ಸಾರ್ಥಕಪಡಿಸಬೇಕು ಎಂದರು. ಇದೇ  ಸಂದರ್ಭದಲ್ಲಿ ಪರಿಶಿಷ್ಟ ವರ್ಗಗಳ ಸಮುದಾಯದ ಪ್ರತಿಭಾವಂತ ವಿದ್ಯಾಥರ್ಿಗಳನ್ನು ಸನ್ಮಾನಿಸಿ ಸಮುದಾಯವನ್ನು ಮತ್ತಷ್ಟು ಮುಖ್ಯವಾಹಿನಿಗೆ ತರಲು ನೀಡುವ ಪ್ರೋತ್ಸಾಹ ಪ್ರಶಂಸನೀಯ ಎಂದರು.

                ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು, ರಾಮಾಯಣ ಮಹಾಕಾವ್ಯವನ್ನು ರಚಿಸಿದ ಮಹಷರ್ಿ ವಾಲ್ಮೀಕಿ ಪೂವರ್ಾಶ್ರಮದಲ್ಲಿ ಬೇಡ ಜನಾಂಗದವನಾಗಿದ್ದರೂ, ಅವರ  ಏಕಾಗ್ರತೆ ಮತ್ತು ಶ್ರದ್ಧೆಯಿಂದ ಕಾವ್ಯ ಬರೆದು  ಮಹಷರ್ಿಯಾದರು. ಅದೇ ರೀತಿಯಲ್ಲಿ ನಾವೂ ಕೂಡ ನಮ್ಮ ಬದುಕಿನಲ್ಲಿ ಯಶಸ್ಸು ಸಾಧಿಸಲು ಏಕಾಗ್ರತೆ ಮತ್ತು ಶ್ರದ್ಧೆ ಮುಖ್ಯ ಎಂದರು.

                ಕಳೆದ ಸಾಲಿನಲ್ಲಿ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ಪರಿಶಿಷ್ಟ ವರ್ಗದ ವಿದ್ಯಾಥರ್ಿಗಳಾದ ಭಟ್ಕಳ ತಾಲೂಕಿನ ಶಾರದಾ ಗೊಂಡ, ಕಾರವಾರದ ನವೀನ್ಕೃಷ್ಣ ಗೊಂಡ, ಮುಂಡಗೋಡದ ಮಧುರ ಹೊಸಮನಿ, ಪ್ರಗತಿವಲ್ಲಿ, ಅಕ್ಷತಾ, ಸಿರಸಿಯ ಅಂಜನಾ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಯಲ್ಲಾಪುರದ ಮಯೂರ ಕಿಲಾರಿ, ಶಿರಸಿಯ ಲಾವಣ್ಯ ಸಿದ್ದಿ ಹಾಗೂ ಪದವಿಯಲ್ಲಿ ಹೆಚ್ಚು ಅಂಕಗಳಿಸಿದ ಕಾರವಾರದ ಸುನಂದಾ ಎಂ.ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ, ಪರಿಶಿಷ್ಟ ವರ್ಗಗಳ ನಿಗಮದ ವತಿಯಿಂದ ವಿವಿಧ ಯೋಜನಾ ಫಲಾನುಭವಿಗಳಿಗೆ ಜೆಸಿಬಿ ಹಾಗೂ ಆಟೋ ಖರೀದಿಸಿ ಸ್ವಯಂ ಉದ್ಯೋಗ ಪ್ರಾರಂಭಿಸಲು ಸಬ್ಸಿಡಿ ಸಹಿತ ಸಾಲ  ಸೌಲಭ್ಯಗಳನ್ನು ವಿತರಿಸಲಾಯಿತು.

                ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಎಂ.ರೋಷನ್, ನಗರಸಭೆ ಆಯುಕ್ತ ಯೋಗೇಶ್ವರ, ಕಾರವಾರ ಉಪ ವಿಭಾಗಾಧಿಕಾರಿ ಅಭಿಜಿನ್ ಉಪಸ್ಥಿತರಿದ್ದರುಮುಂಜಾನೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಕಾರವಾರದ ಮುಖ್ಯ ಬೀದಿಗಳಲ್ಲಿ ಮಹಷರ್ಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನಡೆಯಿತು.