ಕ್ಷೇತ್ರದ ಮತದಾರರು ಅತ್ಯಧಿಕ ಮತಗಳಿಂದ ಗೆಲ್ಲಿಸಿದ್ದಾರೆ

ಕಾಗವಾಡ 10: ಕಾಗವಾಡ ಕ್ಷೇತ್ರದ ಉಪಚುನಾವಣೆಯಲ್ಲಿ ತುರುಸಿನ ಜಿದ್ದಾಜಿದ್ದಿಯ ಚುನಾವಣೆಯಲ್ಲಿ  ಕಾಗವಾಡ ಕ್ಷೇತ್ರದ ಮತದಾರರು 18 ಸಾವಿರು ಮತಾದಿಕ್ಯಯಿಂದ ನಮ್ಮ ತಂದೆ ಶ್ರೀಮಂತ ಪಾಟೀಲ ಇವರನ್ನು ಗೆಲ್ಲಿಸಿದ್ದಾರೆ. ಈ ಚುನಾವಣೆಯಲ್ಲಿ ನಮ್ಮತಂದೆ ಅಷ್ಟೇ ಗೆಲಿಲ್ಲಾ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಾ ಅವರು ಗೆದ್ದಂತಾಗಿದೆಯೆಂದು ಶಾಸಕ ಶ್ರೀಮಂತ ಪಾಟೀಲರ ಸುಪುತ್ರ ಶ್ರೀನಿವಾಸ ಪಾಟೀಲ ಕೆಂಪವಾಡದಲ್ಲಿ ಹೇಳಿದರು.

ಮಂಗಳವಾರ ರಂದು ಕೆಂಪವಾಡದಲ್ಲಿ ಚುನಾವಣೆ ಬಳಿಕ ಕಾರ್ಯಕರ್ತರ ಅಭಿನಂದನೆ ಸ್ವೀಕರಿಸಿ, ಶ್ರೀನಿವಾಸ ಪಾಟೀಲ ಮಾತನಾಡಿದರು. ಶಾಸಕ ಶ್ರೀಮಂತ ಪಾಟೀಲ ಜ್ವರ ಬಂದಿದ್ದ ರಿಂದ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾರೆ. ಅವರ ಪುತ್ರರಾದ ಶ್ರೀನಿವಾಸ ಮತ್ತು ಯೊಗೇಶ ಇವರು ಮತದಾರರಿಗೆ, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಅನೇಕ ಮತದಾರರು ಶಾಸಕರ ಪರವಾಗಿಅವರ ಪುತ್ರರಿಗೆ ಮಾಲೆ ಹಾಕಿ ಅಭಿನಂದಿಸುತ್ತಿದ್ದಾರೆ.

ಯಾವುದೇ ಹಣದ ಆಸೆ ನಮ್ಮ ತಂದೆಗೆಯಿಲ್ಲಾ. ಶಾಂತ, ಸರಳ, ಸಜ್ಜನಿಕೆ ಹೊಂದಿರುವ ನಮ್ಮ ತಂದೆಯವರು ಕನಸ್ಸು ಒಂದೇಯಾಗಿದೆ, ಕಾಗವಾಡ ಕ್ಷೇತ್ರದ ಅಭಿವೃದ್ಧಿ. ಈ ಆಸೆ ಆಗೀಣ ಸರ್ಕಾರ ಪೂರೈಸಲಿಲ್ಲಾ. ಆ ಕಾರಣದಿಂದ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ, ಕಾಂಗ್ರೆಸ್ ಪಕ್ಷತೊರೆದು ಬಿಜೆಪಿ ಪಕ್ಷ ಸೇರಿಕೊಂಡು ಉಪಚುನಾವಣೆ ಎದುರಿಸಿದ್ದರು.ಈ ಮೊದಲು ಮತದಾರರು ಇಟ್ಟ ಭರವಸೆ ಮತ್ತು ನಮ್ಮ ತಂದೆಯವರ ಪ್ರಾಮಾಣಿಕತೆ ಗಮನದಲ್ಲಿ ತೆಗೆದುಕೊಂಡು ವಿರೋಧಿ ಪಕ್ಷದವರು ಏನೋ ಸುಳ್ಳು ಹೇಳಿದ್ದರೂ, ಗಮನ ಕೊಡದೆ 18 ಸಾವಿರ ಅಧಿಕ ಮತಗಳಿಂದ ಚುನಾಯಿತ ಗೊಳಿಸಿದ್ದಾರೆ.ಈ ಋಣದ ಭಾರ ನಮ್ಮ ಮೇಲೆ ಇದೆ. ಸೇವೆ ಮಾಡಿ ಅಲ್ಪ-ಸ್ವಲ್ಪತೀರಿಸುತ್ತೇವೆ ಯೆಂದು ಹೇಳಿದರು.

ಈ ವೇಳೆ ಕಾಗವಾಡಕ್ಷೇತ್ರದ ಬೇರೆ ಬೇರೆ ಗ್ರಾಮಗಳಿಂದ ಆಗಮಿಸಿದ ಕಾರ್ಯಕರ್ತರು, ಅಭಿಮಾನಿಗಳು ಜಯಘೋಷ ಹಾಕಿ, ಸಿಹಿ ಹಂಚಿ, ಸಂಭ್ರಮಾಚರಿಸಿದರು.