ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಪೌರ ಕಾರ್ಮಿಕರ ಶ್ರಮ ಅಪಾರ: ಶೀಲಾ ಭಾವಿಕಟ್ಟಿ

ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಪೌರ ಕಾರ್ಮಿಕರ ಶ್ರಮ ಅಪಾರ: ಶೀಲಾ ಭಾವಿಕಟ್ಟಿ The efforts of civic workers are immense in building a healthy society: Sheela Bhavikatti

ಪೌರ ಕಾರ್ಮಿಕರಿಗೆ ಸನ್ಮಾನ ಪ್ರಶಸ್ತಿ ವಿತರಣೆ! 

ಮಹಾಲಿಂಗಪುರ, 23 : ಪೌರಕಾರ್ಮಿಕರು ಜನರು ಕಣ್ಣು ಬಿಡುವ ಮುನ್ನ ತಮ್ಮ ಸ್ವಚ್ಛತೆಯ ಕೆಲಸ ಮುಗಿಸುವ ತರಾತುರಿಯಲ್ಲಿರುತ್ತಾರೆ. ಪೌರ ಕಾರ್ಮಿಕರಿಗೆ ಇನ್ನೂ ಹೆಚ್ಚಿನ ಸವಲತ್ತು ಮತ್ತು ಸೌಕರ್ಯಗಳು ಸಿಗಬೇಕು.ಅವರು ಸಲ್ಲಿಸುವ ಸೇವೆಗೆ ಬೆಲೆ ಕಟ್ಟಲಾಗದು ಎಂದು ಪುರಸಭೆ ಉಪಾಧ್ಯಕ್ಷೆ ಶೀಲಾ ಭಾವಿಕಟ್ಟಿ ಹೇಳಿದರು. 

ಸ್ಥಳೀಯ ಪುರಸಭೆ ಸಭಾಭವನದಲ್ಲಿ ನಡೆದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಸ್ವಾಸ್ಥ ಕಾಪಾಡುವ ಪೌರ ಕಾರ್ಮಿಕರನ್ನು ಗೌರವದಿಂದ ಕರೆಯಬೇಕು, ಅವರ ಸೇವೆ ಅತ್ಯಮೂಲ್ಯವಾಗಿದೆ. ಸ್ವಚ್ಛ ಸುಂದರ ನಗರವನ್ನಾಗಿಸಲು ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಅರೋಗ್ಯ ರಕ್ಷಣೆ ಬಹಳ ಮುಖ್ಯ ಎಂದರು. 

ಸಂಘಟನಾಧಿಕಾರಿ ಸಿ ಎಸ್ ಮಠಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ವಜ್ರಮಟ್ಟಿ, ಲಯನ್ಸ್‌ ಕ್ಲಬ್ ಅಧ್ಯಕ್ಷ ಸಿದ್ದು ನಕಾತಿ, ಕಾನಿಪ ಸಂಘದ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ, ಮಾತನಾಡಿ ಪೌರಕಾರ್ಮಿಕರು ವೈಯಕ್ತಿಕ ಆರೋಗ್ಯದ ಕಡೆ ಗಮನ ಹರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು, ಪೌರ ಕಾರ್ಮಿಕರ ಮಕ್ಕಳ ಕಲ್ಯಾಣ ನಿಧಿಯಲ್ಲಿ ವಿದ್ಯಾರ್ಥಿ ವೇತನ, ಲ್ಯಾಪ ಟ್ಯಾಪ ಹಾಗೂ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಾಯ, ಆರೋಗ್ಯ್‌ ತಪಾಸನೆ ಸೇರಿದಂತೆ ಹಲವು ಯೋಜನೆಗಳಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಮಕ್ಕಳಿಗೆ ಉನ್ನತ ಶಿಕ್ಷಣ ಒದಗಿಸುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. 

ಪೌರ ಕಾರ್ಮಿಕರಾದ ಯಲ್ಲವ್ವ ಮಾಂಗ, ದಸ್ತಗೀರ ಭಂಗಿ, ಶ್ರೀಮಂತ ದಡ್ಡೆವಗೋಳ, ಲಕ್ಷ್ಮಣ ಆನೆಪ್ಪಗೊಳ, ಶೇರಅಲಿ ಶೇಖ, ಶೆಟ್ಟೆವ್ವ ಅನೆವ್ವಗೊಳ, ಲಕ್ಷ್ಮಿ ಪರೀಟ, ಉಮೇಶ ರೂಗಿ ಸೇರಿ ಎಲ್ಲರನ್ನೂ ಸನ್ಮಾನಿಸಿ ಗೌರವಿಸಲಾಯಿತು. ಜೊತೆಗೆ ಲಯನ್ಸ್‌ ಕ್ಲಬ್ ವತಿಯಿಂದ ಈ ಪೌರಕಾರ್ಮಿಕರಿಗೆ ಸನ್ಮಾನ,ಬಟ್ಟೆ ಹಾಗೂ ಸಸಿ ವಿತರಣೆ ಮಾಡಲಾಯಿತು. ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ನಡೆದ ಮ್ಯೂಜಿಕಲ್ ಚೇರ್, ಚಕ್ಕಲಿ ತಿನ್ನುವ ಸ್ಪರ್ಧೆ, ಗೋಣಿಚೀಲ ಸ್ಪರ್ಧೆ ಈ ಆಟಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಪಡೆದ ಪೌರಕಾರ್ಮಿಕರಿಗೆ ಪ್ರಶಸ್ತಿ ನೀಡಲಾಯಿತು. 

ಪೌರ ಸೇವಾ ನೌಕರರ ಸಂಘದ ಅಧ್ಯಕ್ಷರಾದ ಎಂ ಕೆ ದಳವಾಯಿ,ಪುರಸಭೆ ಮುಖ್ಯಾಧಿಕಾರಿ ನಾಮದೇವ ಲಮಾಣಿ, ಉದ್ಯಮಿದಾರ ರಾಹುಲ ಅವರಾದಿ, ಶಿವ ಭಜನೆ ಕಲಾವಿದ ಮಲ್ಲಪ್ಪ ನುಚ್ಚಿ,ಪುರಸಭೆ ಕಚೇರಿ ವ್ಯವಸ್ಥಾಪಕರಾದ ಎಸ್ ಏನ್ ಪಾಟೀಲ, ಹಿರಿಯ ಆರೋಗ್ಯ ನೀರಿಕ್ಷರಾದ ಎಂ ಎಂ ಮುಗಳಖೊಡ, ಕಂದಾಯ ಅಧಿಕಾರಿ, ಪಿ.ವಾಯ ಸೊನ್ನದ,ಅರುಣ ಸಣ್ಣಕ್ಕಿ, ಮನೋಜ ಹಂಚಾಟೆ ರಾಜೇಶ್ವರಿ ಸೋರಗಾಂವಿ,ಡಾ.ರಮೇಶ ಶೆಟ್ಟರ,ಪ್ರಶಾಂತ ಅಂಗಡಿ,ಹುಚ್ಚೇಶ ವಡ್ಡರ, ಶೈಲಾ ಶೆಟ್ಟರ, ಕಿರಣ ಸಣ್ಣಕ್ಕಿ, ಅಶ್ವಿನಿ ಕೋಳಿಗುಡ್ಡ,ಪಿ ಡಿ ನಾಗನೂರ,ಎಂ ಡಿ ಮಹಾಲಿಂಗ,ಕಾಂತು ಹಡಪದ, ಈರಣ್ಣ ಕೊಪ್ಪದ, ಪರಶು ಬಂಡಿವಡ್ಡರ,ಮಹಾಲಿಂಗ ಗಸ್ತಿ,ಶಿವಾನಂದ ಚೌದರಿ, ಸದಾಶಿವ ಕತ್ತಿ,ಮಂಜುಳಾ ಬಂಡಿವಡ್ಡರ, ರಾಮು ಮಾಂಗ, ಮಹಾಲಿಂಗ ಮಾಂಗ,ಸೇರಿದಂತೆ ಹಲವರು ಉಪಸ್ಥಿತರಿದ್ದರು.ಎಂ ಡಿ ಆನಂದ,ಪ್ರಾರ್ಥಿಸಿ,ರವಿ ಹಲಸಪ್ಪಗೋಳ ನಿರೂಪಿಸಿ ಎಸ್ ಎನ್ ಪಾಟೀಲ ವಂದಿಸಿದರು.