ಕರ್ತವ್ಯ ನಿರತ ಗ್ರಾಮ ಲೆಕ್ಕಧಿಕಾರಿ ಹತ್ಯೆ ಖಂಡಿಸಿ ಮನವಿ

ಲೋಕದರ್ಶನ ವರದಿ

ರಾಮದುರ್ಗ, 24: ಅಕ್ರಮ ತಡೆಯಲು ಕರ್ತವ್ಯ ನಿರತ ಗ್ರಾಮ ಲೆಕ್ಕಾಧಿಕಾರಿಯನ್ನು ಹತ್ಯೆ ಮಾಡಿರುವ ಘಟನೆಯನ್ನು ಖಂಡಿಸಿ, ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ರಾಮದುರ್ಗ ತಾಲೂಕಾ ರಾಜ್ಯ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ತಹಶೀಲ್ದಾರ ಮುಖಾಂತರ ಕನರ್ಾಟಕ ಸರಕಾರದ ಮುಖ್ಯ ಕಾರ್ಯದಶರ್ಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.

ರಾಯಚೂರ ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುವುದನ್ನು ಪ್ರಶ್ನಿಸಿ, ಕರ್ತವ್ಯದಲ್ಲಿ ನಿರತನಾದ  ಗ್ರಾಮ ಲೆಕ್ಕಾಧಿಕಾರಿ ಸಾಹೇಬ ಪಟೇಲ ಅವರ ಮೇಲೆ ಡಿ.22 ವಾಹನ ಮಾಲಿಕ ವಾಹನ ಹರಿಸಿ ಕ್ರೂರವಾಗಿ ಹತ್ಯೆ ಮಾಡಿರುವುದು ಖಂಡನೀಯ, ಕೂಡಲೇ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಇಲಾಖೆಯ ಕಾನೂನು ಜಾರಿ ಮಾಡಲು ಮುಂದಾಗುವ ಸರಕಾರಿ ನೌಕರರಿಗೆ ಸರಕಾರ ಸೂಕ್ತ ರಕ್ಷಣೆ ಒದಗಿಸಬೇಕೆಂದು ಅವರು ಮನವಿ ಮೂಲಕ ಸರಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಸಿ. ಬಿ. ಚೌದರಿ, ಗೌರವಾಧ್ಯಕ್ಷ ಎಂ. ಪಿ. ಬೆಳವಣಕಿ, ಕಾರ್ಯದಶರ್ಿ ಎಂ.ಎಸ್ ಜಂಗವಾಡ, ಖಜಾಂಚಿ ಐ. ವೈ. ಪವಾಡಿಗೌಡ್ರ, ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿದರ್ೇಶಕ ಕೆ.ಎಸ್. ಕಕರ್ಿ, ಆಹಾರ ಇಲಾಖೆಯ ಅಧಿಕಾರಿ ಸಂಜೀವ ಹಮ್ಮನ್ನವರ, ಪ್ರಾಚಾರ್ಯ ಡಿ.ಡಿ. ಮುಜಾವರ, ಉಪನ್ಯಾಸಕ ಬಿ.ಬಿ. ಹರನಟ್ಟಿ, ನರೇಗಾ ಎಡಿ ಎಂ.ಎಸ್. ಹೊಂಗಲ, ಪಿಡಿಓ ಶೇಖರ ಹಿರೇಸೊಮನ್ನವರ, ಬಲರಾಮ ಲಮಾಣಿ, ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಆರ್. ಮಂಜುಳಾ, ಶಿಕ್ಷಕರಾದ ಐ. ಪಿ. ಮುಳ್ಳೂರ, ಪಿ.ಡಿ ಕಾಲವಾಡ ಸೇರಿದಂತೆ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಇತರರಿದ್ದರು.