ಕಾಂಗ್ರೆಸ್ನ ಎಐಯುಡಬ್ಲ್ಯೂಸಿ ರಾಷ್ಟ್ರೀಯ ಸಮಿತಿ ವಿಸರ್ಜನೆ

ನವದೆಹಲಿ, ಅ 26:   ಪಕ್ಷದ ಸಂಘಟನೆ ಪುನಾರಚನೆಯ ಭಾಗವಾಗಿ ಕಾಂಗ್ರೆಸ್ ಶುಕ್ರವಾರ ತಡರಾತ್ರಿ ಅಖಿಲ ಭಾರತ ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಸಮಿತಿ (ಎಐಯುಡಬ್ಲ್ಯೂಸಿ)ಯನ್ನು ವಿಸರ್ಜಿಸಿ ಹೊಸ ರಾಷ್ಟ್ರೀಯ ಪದಾಧಿಕಾರಿಗಳು ಮತ್ತು ರಾಜ್ಯ ಅಧ್ಯಕ್ಷರನ್ನು ನೇಮಿಸಿದೆ.    ಅಖಿಲ ಭಾರತ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಅಧ್ಯಕ್ಷರಾಗಿ ಎಐಸಿಸಿ ಅರವಿಂದ್ ಸಿಂಗ್ ಅವರನ್ನು ನೇಮಕ ಮಾಡಿದ್ದು, ಇರ್ಫಾನ್ ಆಲಂ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.  ಎಐಸಿಸಿ ಮೂರು ಪ್ರಾದೇಶಿಕ ಸಂಯೋಜಕರು, ಐದು ರಾಷ್ಟ್ರೀಯ ಸಂಯೋಜಕರು ಮತ್ತು ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಐದು ಸದಸ್ಯರನ್ನು ನೇಮಕ ಮಾಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ನಂತರ ಅಖಿಲ ಭಾರತ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್  ರಾಷ್ಟ್ರೀಯ ಸಮಿತಿಯ ವಿಸರ್ಜನೆಯು ಸಂಘಟನೆಯ ಪುನಾರಚನೆಯ ಭಾಗವಾಗಿದೆ.