ಗದಗ 2 : ಖಾಸಗಿ ಟಿವಿಗಳಲ್ಲಿ ಪ್ರಸಾರವಾಗುವ ವಿಷಯ ಅಥವಾ ಸುದ್ದಿ, ಸಮಾಜ , ಧರ್ಮ ಭಾಷೆ ಇವುಗಳ ಶಾಂತಿಗೆ ಭಂಗ ಅಥವಾ ಪ್ರಚೋದನೆ ಉಂಟು ಮಾಡುವ ದ್ವೇಷದ ಭಾವನೆ ವಿಷಯಗಳ ಪ್ರಸಾರದ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ನುಡಿದರು.
ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ಕೇಬಲ್ ಟಿವಿ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಎಮ್.ಎಸ್.ಓಗಳು ತಮ್ಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಬಲ್ ಆಪರೇಟರಗಳು ಡಿಸೆಂಬರ್ 10 ರೊಳಗೆ ಲೈಸನ್ಸ್ ನವೀಕರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಸೆಟ್ ಟಾಪ್ ಬಾಕ್ಸ್ ಇಲ್ಲದೇ ನೇರವಾಗಿ ಆನ್ಲಾಗ್ ವ್ಯವಸ್ಥೆ ಮೂಲಕ ಪ್ರಸಾರ ಮಾಡುತ್ತಿರುವ ಆಪರೇಟರುಗಳ ಮಾಹಿತಿ ನೀಡಿದರೆ ಮತ್ತು ನಕಲಿ ಕೇಬಲ್ ಟಿವಿ ನೆಟ್ ವರ್ಕ ಪ್ರಸಾರ ಕಂಡು ಬಂದಲ್ಲಿ ಪ್ರಕರಣ ದಾಖಲಿಸಿ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.
ಕೇಬಲ್ ಹಾಗೂ ಖಾಸಗಿ ಟಿ.ವಿ. ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ದೂರು ಕೋಶ ರಚಿಸಲಾಗಿದ್ದು ಗ್ರಾಹಕರು ಅಥವಾ ಸಾರ್ವಜನಿಕರು ಕೇಬಲ್ ಟಿ.ವಿ. ಸೇವೆಗೆ ಸಂಬಂಧಿಸಿದ ಹಾಗೂ ಖಾಸಗಿ ಟಿವಿಗಳಲ್ಲಿ ಪ್ರಸಾರಿತ ಆಕ್ಷೇಪಾರ್ಹ ವಿಷಯಗಳ ಕುರಿತು ದೂರುಗಳನ್ನು ಸಲ್ಲಿಸಬಹುದಾಗಿದೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ವಿ. ನವಲೆ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಎಂ.ಎಸ್.ಓಗಳು, ಪ್ರಧಾನ ಅಂಚೆ ಕಚೇರಿ ಅಧಿಕಾರಿ ಸೇರಿದಂತೆ ಜಿಲ್ಲಾ ಸಮಿತಿ ಸದಸ್ಯರು , ನಾಮನಿದರ್ೇಶಿತ ಸದಸ್ಯರು ಉಪಸ್ಥಿತರಿದ್ದರು.