ಪ್ರವಚನ ಸತ್ತವರ ಕಥೆ ಹೇಳಲ್ಲ :ಹುಚ್ಚೇಶ್ವರ ಶ್ರೀ

ಗುಳೇದಗುಡ್ಡ೦೩:    ಧಾರ್ಮಿಕ ಹಿನ್ನೆಲೆ ಹೊಂದಿದ ನೈತಿಕ ಪರಂಪರೆ ಈ ದೇಶದ  ಪ್ರವಚನಕ್ಕಿದೆ. ಅದು ಕೇವಲ ಸತ್ತವರ ಕಥೆ ಹೇಳುವುದಲ್ಲ. ಅದು ಶರಣರು ಹಾಗೂ ದಾರ್ಶನಿಕರು ಧರ್ಮ ಮಾರ್ಗದಲ್ಲಿ ನಡೆದು ಜನರಲ್ಲಿ ಆಧ್ಯಾತ್ಮಿಕ ಜ್ಯೋತಿ ಬೆಳಗಿಸಿದ ಬಗ್ಗೆ ತಿಳಿಸುವ ಒಂದು ಧಾಮರ್ಿಕ ಸಭೆಯಾಗಿದೆ ಎಂದು ಹೊಳೆಹುಚ್ಚೇಶ್ವರ ಶ್ರೀಗಳು ಹೇಳಿದರು.

    ಅವರು ಸಮೀಪದ ಕೋಟೆಕಲ್ ಗ್ರಾಮದ  ಆರಾಧ್ಯಾ ದೈವ ಶ್ರೀ ಹೊಳೆಹುಚ್ಚೇಶ್ವರ ಸಂಸ್ಥಾನಮಠದ ಜಾತ್ರಾಮಹೋತ್ಸವದ ನಿಮಿತ್ತ ಪಟ್ಟಣದ ಹುಚ್ಚೇಶ್ವರ ಶಾಖಾಮಠವಾದ ಕಲ್ಮಠದಲ್ಲಿ ಹಮ್ಮಿಕೊಂಡಿದ್ದ ಜೀವನ ದರ್ಶನ ಪ್ರವಚನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾಮೀಜಿಗಳಾದವರು ಮಠದಲ್ಲಿ ಕುಳಿತುಕೊಳ್ಳದೇ ಜನರಲ್ಲಿ ಧರ್ಮದ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.ಸ್ವಾಮೀಜಿ ಎಂದರೇ ಸಮಾಜ ಸುಧಾರಕರಿದ್ದಂತೆ. ಧರ್ಮ ಪಾಲನೆಯಲ್ಲಿ  ಯಾರು ಸೊಕ್ಕು ತೊರಿಸುವದಿಲ್ಲಯೋ ಅವರನ್ನು ಧರ್ಮ ಸದಾ ಕಾಪಾಡುತ್ತದೆ ಎಂದು ಹೇಳಿದರು.

    ಮರಡಿಮಠದ ಕಾಡಸಿದ್ದೇಶ್ವರ ಮಹಾಸ್ವಾಮಿಗಳೂ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಿರೇಶ್ವರ ಪುಣ್ಯಾಶ್ರಮದ ಬಸವಕಂದ ದೇವರು ಪ್ರವಚನ ನಡೆಸಿಕೊಟ್ಟು ಮಾತನಾಡಿ,ಗುರುವಿನ ಮಾರ್ಗದರ್ಶನ ಪ್ರತಿಯೊಬ್ಬರು ನಡೆಯಬೇಕು.ಜೀವನಕ್ಕೆ ಮೋಕ್ಷ ಹಾಗೂ ಬೆಲೆ ಸಿಗಬೇಕೆಂದರೆ ಗುರುವಿನ ಮುಂದೆ ಶಿರಭಾಗಲೇಬೇಕು. ದೇವರನ್ನು ಸ್ಮರಿಸುವುದೇ ಪ್ರವಚನಗಳ ಉದ್ದೇಶವಾಗಿದೆ. ಜೀವನದಲ್ಲಿ ನಂಬಿಕಯಿಟ್ಟು ಮುನ್ನಡೆದರೆ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.

ಸಂಗೀತ ಶಿಕ್ಷಕ ಜ್ಞಾನೇಶ್ವರ ಬೊಂಬಲೇಕರ ಅವರಿಂದ ಸಂಗೀತ ಸೇವೆ ಜರುಗಿತು.

    ಈ ಸಂದರ್ಭದಲ್ಲಿ ಎಸ್.ಐ.ಚಿಂದಿ, ನಾಗಪ್ಪ ಚಿಂದಿ, ಟಿ.ಎಂ.ಮಡಿವಾಳರ,  ಎಸ್.ಎಚ್.ಹುಳಿಪಲ್ಲೇದ, ಸಿ.ವಿ.ತಿಪ್ಪಾಗೌಡ್ರ, ಸಂಗಣ್ಣ ಪಟ್ಟಣಶೆಟ್ಟಿ, ಶಿವಪುತ್ರಪ್ಪ ಬೀಳಗಿ, ಬಸವರಾಜ ಬರಗುಂಡಿ,  ಶಾಂತವೀರಯ್ಯ ಹುಚ್ಚೇಶ್ವರಮಠ, ವೀರಭದ್ರಪ್ಪ ಬಳಿಗಾರ, ಸಂಗಣ್ಣ ಯಳಮೇಳಿ, ಶಿವು ಜಮಖಂಡಿ, ಮಲ್ಲಿಕಾರ್ಜುನ  ಕಲಾದಗಿ, ಬಸವರಾಜ ಯಂಡಿಗೇರಿ ಸೇರಿದಂತೆ ಇನ್ನೂ ಇತರರು ಇದ್ದರು.