ವಿದ್ಯಾರ್ಥಿಗಳ ಶಿಸ್ತು ಬದ್ಧ ಜೀವನ ಕಾನೂನು ಪಾಲನೆಗೆ ಸಮ: ಸತ್ರ ನ್ಯಾಯಾಧೀಶರ ಜಿ. ಎಸ್. ಸಂಗ್ರೇಶಿ

ಗದಗ 21: ವಿದ್ಯಾರ್ಥಿಗಳು ಈ ದೇಶದ ಸಂಪತ್ತು, ಶಿಸ್ತು, ನಿಯಮಗಳನ್ವಯ ಜೀವನ ಸಾಗಿಸಿದರೆ ಅದು ಕಾನೂನು ಪಾಲಿಸಿದಂತೆ ಎಂದು ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಜಿ. ಎಸ್. ಸಂಗ್ರೇಶಿ ನುಡಿದರು.

ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ವಿವಿಧ ಇಲಾಖೆಗಳ ಹಾಗೂ ಜಿಲ್ಲಾ ವಕೀಲರ ಸಂಘ ಸೇರಿದಂತೆ ಸರ್ಕಾರಿ ಮತ್ತು ಅರೇ ಸರ್ಕಾರಿ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮನೋರಮಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಜರುಗಿದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ನಾಗರೀಕರು ಕೂಡಾ ಸಂವಿಧಾನದ ಚೌಕಟ್ಟಿನ ಅಡಿಯಲ್ಲಿ ಜೀವನ ಸಾಗಿಸಬೇಕು. ಅಗತ್ಯದಷ್ಟು ಕಾನೂನು ಅರಿವು ಹೊಂದಬೇಕು.  ನಿಮ್ಮ ಪಾಲಕರಿಗೆ, ಶಿಕ್ಷಣ ನೀಡಿದ ಸಂಸ್ಥೆಗೆ ಕೀರ್ತಿ ತಂದರೆ, ಮತ್ತೊಬ್ಬರ ಹಕ್ಕಿಗೆ ಚ್ಯುತಿ ಬರದಂತೆ ನಡೆದುಕೊಂಡರೆ ಕಾನೂನು ಗೌರವಿಸಿದಂತೆ ಅದು ಸಮಾಜಕ್ಕೆ ನೀವು ಕೊಡುವ ಕಾಣಿಕೆ. ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ, ಎಂದು ವಿದ್ಯಾರ್ಥಿಗಳಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್.ಸಂಗ್ರೇಶಿ ತಿಳಿಸಿದರು.

ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಷಿ ಮಾತನಾಡಿ ವಿದ್ಯಾರ್ಥಿಗಳು ಅನ್ಯ ವಿಷಯಗಳಿಗೆ ಪ್ರಾಧಾನ್ಯತೆ ಕೊಡದೇ ಓದಿನ ಕಡೆ ಗಮನ ಕೊಡಬೇಕು, ಙ್ಞಾನದ ಹಸಿವು ಇರಬೇಕು, ಕಷ್ಟಪಟ್ಟು ಓದಬೇಕು, ದೇಶದ ಬೆಳವಣಿಗೆ ಒಳ್ಳೆಯ ಚಿಂತನೆಗಳ ಮೇಲೆ ಅವಲಂಬಿಸಿದೆ. ಸಂವಿಧಾನವನ್ನು ಅರ್ಥಮಾಡಿಕೊಂಡು ಜೀವನ ಸಾಗಿಸಿದರೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾದ್ಯ ಎಂದರು.

ಜಿಲ್ಲಾ ವಕೀಲರ ಸಂಘದ ಅದ್ಯಕ್ಷ ವಿ. ಬಿ. ಹುಬ್ಬಳ್ಳಿ ಮಾತನಾಡಿ ಜೀವನ ಸಾರ್ಥಕ ಹೊಂದಲು ಗುರಿ ದೊಡ್ಡದಿರಲಿ, ಸಾದನೆ ಪ್ರತಿಕ್ಷಣವಿರಲಿ, ಗೌರವದಿಂದ  ಬದುಕುವುದು ಬಹಳ ಮುಖ್ಯ ಎಂದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿದರ್ೆಶಕರಾದ ಎಸ್.ಎಸ್.ಹಿರೇಮಠ, ಮನೋರಮಾ ಕಾಲೇಜಿನ ಪ್ರಾಚಾರ್ಯರಾದ ಬಿ.ಎಸ್.ಹಿರೇಮಠ, ಮಕ್ಕಳ ಕಲ್ಯಾಣ ಸಮಿತಿಯ ಅದ್ಯಕ್ಷೆ ಕೆ.ಎಂ.ನಾಯ್ಕರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಎಸ್.ಜಿ. ಸಲಗರೆ ಅವರು ಕಾನೂನು ಸೇವಾ ಪ್ರಾಧಿಕಾರದ ಉದ್ದೇಶಗಳ ಬಗ್ಗೆ ಹಾಗೂ ಮಂಜುಳಾ ಸ್ವಾಮಿ ಮೂಲಬೂತ ಹಕ್ಕು ಮತ್ತು ಕರ್ತವ್ಯಗಳು, ಕೌಟುಂಬಿಕ ದೌರ್ಜನ ತಡೆ ಕಾಯ್ದೆ ಮಾದಕ ವ್ಯಸನ ಬಲಿಯಾದವರಿಗೆ ಕಾನೂನು ಸೇವೆಗಳ ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾ ವಕೀಲರ ಸಂಘದ ಜಂಟಿ ಕಾರ್ಯದರ್ಶಿ ವಾಯ್.ಡಿ.ತಳವಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಶೈಲಾ ಕುರಹಟ್ಘಿ ಕಾಲೇಜಿನ ಚೇರಮನ್ ಎನ್.ಎಂ.ಕುಡತರಕರ, ಆಡಳಿತಾಧಿಕಾರಿ  ಕಿಶೋರ ಮುದಗಲ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸ್ನೇಹಾ ಕುರಂದ್ವಾಡ ನಿರೂಪಿಸಿದರು. ಕೊನೆಯಲ್ಲಿ ಎ.ಸಿ.ರಾಜೂರ ವಂದಿಸಿದರು. ನ್ಯಾಯವಾದಿಗಳು, ಮಕ್ಕಳ ಸಹಾಯವಾಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಹಾಗೂ ವಿವಿದ ಇಲಾಖೆ ಅಧಿಕಾರಿಗಳು, ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.