ಲೋಕದರ್ಶನ ವರದಿ
ವಿಶೇಷಚೇತನರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು : ತಮ್ಮಣ್ಣವರ
ಹಾರೂಗೇರಿ, 25 : ವಿಶೇಷಚೇತನರು, ಆತ್ಮವಿಶ್ವಾಸ, ಸ್ವಾಭಿಮಾನದಿಂದ ಸಮಾಜದಲ್ಲಿ ಬದುಕು ಕಟ್ಟಿಕೊಳ್ಳಬೇಕೆಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.
ಸಮೀಪದ ಬೀರ್ಪನಮಡ್ಡಿಯ ಶಾಸಕರ ಕಚೇರಿ ಆವರಣದಲ್ಲಿ ಮಂಗಳವಾರ ವಿಶೇಷಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಬೆಳಗಾವಿ ವಿಭಾಗದಿಂದ ಶಾಸಕರ ಅನುದಾನದಡಿ ಕುಡಚಿ ವಿಧಾನಸಭೆ ಮತಕ್ಷೇತ್ರದ ವಿಶೇಷಚೇತನ ಫಲಾನುಭವಿಗಳಿಗೆ 20 ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಿ ಅವರು ಮಾತನಾಡಿದರು.
ನೊಂದವರ ಮುಖದಲ್ಲಿ ನಗುವನ್ನು ಅರಳಿಸುವುದು, ಅವರು ಖುಷಿಯಾಗಿ ಜೀವನವನ್ನು ಸಾಗಿಸುವುದು ನನ್ನ ಕನಸು. ಅಂಗವೈಕಲ್ಯವೇ ಜೀವನದ ಅಂತಿಮವಲ್ಲ. ಮುಂದಿನ ಸವಾಲುಗಳನ್ನು ಎದುರಿಸಿ, ಗೆಲ್ಲುವ ಛಲವೇ ಬದುಕಿನ ಪುನರಾರಂಭ. ವಿಶೇಷಚೇತನರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು. ಸಮಾಜದಲ್ಲಿ ಗೌರವದಿಂದ ಬದುಕಲು ಆರ್ಥಿಕವಾಗಿ ಸಬಲರಾಗಬೇಕೆಂದು ಹೇಳಿದರು.
ನಂತರ ವಿಶೇಷಚೇತನ ಫಲಾನುಭವಿಗಳೊಂದಿಗೆ ತ್ರಿಚಕ್ರ ವಾಹನದಲ್ಲಿ ಸವಾರಿ ಮಾಡಿದರು. ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ಕದ್ದು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ ದೊಡಮನಿ, ತಾಲೂಕು ಪಂಚಾಯತ್ ವಿವಿದೋದ್ಧೇಶ ಪುನರ್ ವಸತಿ ಅಧಿಕಾರಿ ಸಂಜಯ ಕಾಂಬಳೆ, ಕುಡಚಿ ಬ್ಲಾಕ್ ಅಧ್ಯಕ್ಷ ಪ್ರದೀಪ ಹಾಲ್ಗುಣಿ, ಕಾಂಗ್ರೆಸ್ ಮುಖಂಡರಾದ ಧನಪಾಲ ಶಿರಹಟ್ಟಿ, ಸಾಹೇಬಲಾಲ ರೋಹಿಲೆ, ಅಲ್ಲಾವುದ್ದಿನ ರೋಹಿಲೆ, ಬಸನಗೌಡ ಪಾಟೀಲ, ಕಲ್ಮೇಶ ಕಾಂಬಳೆ, ವರ್ಧಮಾನ ಶಿರಹಟ್ಟಿ, ಭೀಮು ಚೌಗಲಾ, ಸಚೀನ ಹಳಕಲ, ಪರಮಾನಂದ ಬೆಳಗಲಿ, ರಾಮಣ್ಣ ಶಿರಹಟ್ಟಿ, ಪರ್ಪ ಖೇತಗೌಡರ, ಹನಮಂತಸಾಬಗೌಡ ನಾಯಿಕ, ಶ್ರೀಶೈಲ ಅಂಗಡಿ, ಇಲಾಯಿ ಕಾಗವಾಡೆ, ಗಿರೆಪ್ಪ ಬಳಿಗಾರ, ತಮ್ಮನಗೌಡ ಪಾಟೀಲ, ನಿಜಗುಣಿ ಪಾಟೀಲ, ವಿಠ್ಠಲ ಭಂಡಗಾರ, ಸುಭಾಸ ದಳವಾಯಿ, ಭೀಮು ಪಾರ್ಥನಳ್ಳಿ, ರವಿ ಮುರಗಣ್ಣವರ, ಈಶ್ವರ ಗಿಣಿಮುಗೆ, ವಿನೋದ ದರೂರೆ ಹಾಗೂ ವಿಶೇಷಚೇತನ ಫಲಾನುಭವಿಗಳು ಉಪಸ್ಥಿತರಿದ್ದರು.