ಲೋಕದರ್ಶನ ವರದಿ
ಕಾಗವಾಡ 18: ಸಂಸಾರದ ಪ್ರತಿಜೀವಿಯು ಅನಾದಿ ಕಾಲದಿಂದಲೂ ದುಃಖದಲ್ಲಿ ಜೀವಿಸುತ್ತಿವೆ. ಕರ್ಮಜಾಲದಲ್ಲಿ ಸಿಲುಕಿ ಒದ್ದಾಡುತ್ತಿವೆ. ಕಷ್ಟದೊಂದಿಗೆ ಜೀವುಸುತ್ತಿವೆ. ತಾವು ವಿಶಾಲ ಮನೋಭಾವದಿಂದ ಇಲ್ಲಿಗೆ ಆಗಮಿಸಿ ಶ್ರದ್ಧೆ ಮತ್ತು ಭಕ್ತಿಯಿಂದ ನನ್ನ ದರ್ಶನ ಮಾಡಲು ಬಂದಿರುವಿರಿ. ಇಂದು ವಿಜಯ ದಶಮಿ ಇರುವುದರಿಂದ ನಿಮ್ಮೆಲ್ಲರಿಗೂ ಆಶೀರ್ವದಿಸುವುದು ನನ್ನ ಕರ್ತವ್ಯವಾಗಿದೆ. ನಿಮ್ಮೆಲ್ಲರಿಗೂ ನನ್ನ ಎರಡು ಕೈಗಳಿಂದ ಮನಃಪೂರ್ವಕ ಆಶೀರ್ವಾದಗಳು ಎಂದು ಮುನಿಶ್ರೀಗಳು ತಮ್ಮ ಕೊನೆಯ ಪ್ರವಚನದಲ್ಲಿ ಭಕ್ತರನ್ನು ಉದ್ದೇಶಿಸಿ ಉಪದೇಶ ನೀಡಿದ್ದರು.
ಸತ್ಯವನ್ನು ತಿಳಿದುಕೊಳ್ಳಲು, ಸತ್ಯವನ್ನು ಒಪ್ಪಿಕೊಳ್ಳಲು ಯಾವ ಜೀವಿಯೂತಯಾರಿರುವುದಿಲ್ಲ. ಜೀವಿಯೂ ಎಷ್ಟೇ ಶೂರ, ವೀರ, ಬಲಿಷ್ಟವಾಗಿದ್ದರೂ ಸಹ ಜೀವನದಲ್ಲಿಯಾರ ಮೇಲೆಯೂ ವಿಜಯ ಸಾಧಿಸಲು ಸಾಧ್ಯವಿಲ್ಲ ಮತ್ತುಅದು ಮುಖ್ಯವು ಅಲ್ಲ. ತನ್ನ ದುರಾಚಾರಗಳೊಂದಿಗೆ ಹೋರಾಡಿ ವಿಜಯ ಸಾಧಿಸಿ ಭಗವಂತನಾಗಲು ಪ್ರಯತ್ನಿಸಿ ವಿಜಯಿಯಾಗಬೇಕೆ ವಿನಂತ ಬಾಹ್ಯ ವಿಜಯದಿಂದ ಅದು ಅಲ್ಲ. ಆತ್ಮ ಶುದ್ಧಿಯೊಂದಿಗೆ, ಕಠಿಣ ತಪಸ್ಸು ಮಾಡಿ, ಧರ್ಮಮಾಗದಲ್ಲಿ ಜನರ ಕಲ್ಯಾಣಕ್ಕಾಗಿ ಶ್ರಮಿಸಿದ ಸಂತೋಷ ನನ್ನನ್ನು ಮೋಕ್ಷ ಮಾರ್ಗದ ಕಡೆ ತಂದು ನಿಲ್ಲಿಸಿದೆ ಎಂದು ಉಪದೇಶ ನೀಡಿದ್ದರು.
ಸೆ. 8 ರಂದುಕೊನೆಯ ಬಾರಿಗೆ ಉಪದೇಶ ಮಾಡಿದ ಮುನಿಶ್ರೀಗಳು, ಸೆ. 12 ರಂದು ಬೆಳಿಗ್ಗೆ ಯಮ ಸಲ್ಲೇಖನ ಸ್ವೀಕರಿಸಿದ್ದರು. ಅಂದಿನಿಂದ ಅಣ್ಣ, ಆಹಾರ, ನೀರು ತ್ಯಜಿಸಿದ್ದು, ಯಮ ಸಲ್ಲೇಖನ ಸ್ವೀಕರಿಸಿ ಇಂದಿಗೆ ಆರು ದಿನಗಳಾಗಿವೆ.
ಮುನಿಶ್ರೀಗಳ ದರ್ಶನಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.ಇಂದು ಸಾವಿರಾರು ಭಕ್ತರು ಆಗಮಿಸಿ ಮುನಿಶ್ರೀಗಳ ದರ್ಶನ ಪಡೆದುಕೊಂಡರು. ಕೊಲ್ಲಾಪೂರ ಜಿಲ್ಲೆಯ ಶಿರೋಳ ತಾಲೂಕಿನ ನಾಂದನಿ ಮಠದ ಜಿನಸೇನ ಭಟ್ಟಾರಕರು ಮುನಿಶ್ರೀಗಳೊಂದಿಗೆ ಇದ್ದು, ಮುನಿಶ್ರೀಗಳ ಮೋಕ್ಷ ಮಾರ್ಗ ಸಾಧನೆಯಲ್ಲಿ ಸಾಕ್ಷಿಯಾದರು.
ರಾಷ್ಟ್ರಸಂತ ಮುನಿಶ್ರೀ ಚಿನ್ಮಯಸಾಗರಜೀ (ಜಂಗಲವಾಲೆ ಬಾಬಾ) ಮಹಾರಾಜರು ಕೊನೆಯದಾಗಿ ಉಪದೇಶ ಮಾಡಿದಂತೆ ನಡೆದು ಜನರಿಗೆ ಮಾರ್ಗದರ್ಶಕರಾಗಿ ಮಹಾನ ಸಂತರಾಗಿದ್ದಾರೆ ಎಂದು ಭಕ್ತರು ಮಾತನಾಡುತ್ತಿದ್ದರು. ನಿರ್ಯಾಪಕ ಆಚಾರ್ಯ ಜಿನಸೇನ ಮಹಾರಾಜ, ಚಂದ್ರಪ್ರಭು ಮಹಾರಾಜ, ಸೂರ್ಯಸಾಗರ ಮಹಾರಾಜ, ಮುನಿಶ್ರೀ ಪಾವನಸಾಗರ ಮಹಾರಾಜ, ಸಮರ್ಪನಸಾಗರ ಮಹಾರಾಜ, ಅಜೀತಸೇನ ಮಹಾರಾಜ, ಸುಮತಿಸಾಗರ ಮಹಾರಾಜ, ಪ್ರಸಂಗಸಾಗರ ಮಹಾರಾಜ, ಏಲಕ ಸಿದ್ಧಾಂತಸಾಗರ ಮಹಾರಾಜ, ಸೌರಭಸೇನ ಭಟ್ಟಾರಕ ಮುಂತಾದವರು ಉಪಸ್ಥಿತರಿದ್ದರು.