ರಾಣೇಬೆನ್ನೂರು ಜೂ.14: ಹಾವೇರಿ ಜಿಲ್ಲೆಯ ರಾಣೇಬೆನ್ನೂರು ವಿಧಾನ ಸಭಾ ಕ್ಷೇತ್ರದ ಮತದಾರರ ಮತ್ತು ಅಭಿಮಾನಿಗಳ ಆಸೆ ಮತ್ತು ನಿರೀಕ್ಷೆಯಂತೆ ಕ್ಷೇತ್ರದ ಶಾಸಕ ಆರ್.ಶಂಕರ್ ಅವರು ಸಮ್ಮಿಶ್ರ ಸಕರ್ಾರದ ಸಚಿವ ಸಂಪುಟದಲ್ಲಿ ಇಂದು ಪೌರಾಡಳಿತ ಖಾತೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ಕ್ಷೇತ್ರದ ಮತದಾರರಲ್ಲಿ ಅತ್ಯಂತ ಹರ್ಷವನ್ನುಂಟು ಮಾಡಿದ್ದು ನಗರವೂ ಸೇರಿದಂತೆ ತಾಲೂಕಿನಾಧ್ಯಾಂತ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಶುಕ್ರವಾರ ಮಧ್ಯಾಹ್ನ 1ಘಂಟೆಗೆ ರಾಜಭವನದ ಗಾಜಿನಮನೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಆರ್.ಶಂಕರ್ ಅವರು ತಮ್ಮ ಕುಲದೈವ ಮೈಲಾರಲಿಂಗೇಶ್ವರ ದೇವರ ಮತ್ತು ಕಾನೂನಿನ ಮೇಲೆ ಪ್ರಮಾಣ ಮಾಡಿ, ರಾಜ್ಯಪಾಲ ವಜುಭಾಯಿವಾಲಾ ಅವರಿಂದ ಪ್ರಮಾಣ ವಚನ ಸ್ವೀಕರಿಸುತ್ತದಂತೆ ಇತ್ತ ರಾಣೇಬೆನ್ನೂರು ನಗರದಲ್ಲಿ ಭಾರಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿರುವುದು ಕಂಡುಬಂದಿತು.
ಆರ್.ಶಂಕರ್ ಅವರು ಮೊದಲಬಾರಿ ಕೋಳಿವಾಡರ ಎದುರಾಳಿಯಾಗಿ ಸ್ಪಧರ್ಿಸಿ ಕೆಲವೇ ಮತಗಳ ಅಂತರಲ್ಲಿ ಪರಾಭವಗೊಂಡಿದ್ದರು. ನಂತರದ ಅವಧಿಯಲ್ಲಿ ಪುನ: ಕೋಳಿವಾಡರ ಪ್ರತಿಸ್ಪಧರ್ಿಯಾಗಿ ಸ್ಪದರ್ೆಗಿಳಿದಿದ್ದ, ಅವರು ಕೆಪಿಜೆಪಿ ಪಕ್ಷದ ವತಿಯಿಂದ ಆಟೋ ಚಿಹ್ನೆಯ ಮೇಲೆ ಪೈಪೋಟಿ ಸ್ಪದರ್ೇ ನೀಡಿದ್ದರಾದರು ಅಂತಿಮ ಘಳಿಗೆಯಲ್ಲಿ ಹತ್ತಾರು ಸಾವಿರಾರು ಮತಳಿಂದ ಗೆಲುವಿನ ನಗೆ ಬೀರಿ ಕ್ಷೇತ್ರದ ಅಭಿವೃದ್ಧಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಚುನಾವಣೆ ನಂತರದ ಕೆಲವು ತಿಂಗಳುಕಾಲ ಅರಣ್ಯ ಮತ್ತು ಪರಿಸರ ವಿಜ್ಞಾನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಅಂದಿನ ರಾಜಕೀಯ ಬದಲಾವಣೆ ಕಾರಣದಿಂದಾಗಿ ಶಂಕರ್ ಅವರು ಸಚಿವ ಸ್ಥಾನದಿಂದ ವಿಮುಕ್ತಿಗೊಂಡಿದ್ದರು. ಕ್ಷೇತ್ರದ ಅಭಿವೃದ್ದಿಗಾಗಿ ಸದ್ದಿಲ್ಲದೇ ಸಾಧಕನಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುವಲ್ಲಿ ಶ್ರಮಿಸಿದ್ದು, ಸಾರ್ವಜನಿಕರಲ್ಲಿ ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರಾಜೀ ಇವರಲ್ಲಿ ಇಲ್ಲ ಎನ್ನುವುದನ್ನು ಮನಗಂಡಿದ್ದರು. ಪ್ರಸ್ತುತ ಮೈತ್ರಿ ಸಕರ್ಾರದ ಆಡಳಿತ ತೇಲಾಟ-ಮೇಲಾಟಗಳ ಮಧ್ಯೆಯೇ ತಾವೂ ಸೇರಿದಂತೆ ಮುಳಬಾಗಿಲು ಕ್ಷೇತ್ರದ ಮತ್ತೋರ್ವ ಪಕ್ಷೇತರ ಶಾಸಕ ಹೆಚ್. ನಾಗೇಶ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಮೈತ್ರಿ ಸಕರ್ಾರ ಗಟ್ಟಿತನಕ್ಕೆ ಆನೆ ಬಲ ಬಂದಂತಾಗಿದೆ ಎನ್ನುವುದು ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಮಾತಾಗಿದೆ.
ವಿಧಾನಸೌಧದ ಮೊಗಸಾಲೆಯಲ್ಲಿ ಪಕ್ಷೇತರ ಶಾಸಕರಾಗಿರುವ ಆರ್ ಶಂಕರ್ ಅವರು ರಾಣೇಬೆನ್ನೂರು ವಿಧಾನ ಸಭಾ ಕ್ಷೇತ್ರದಿಂತ 2ನೇ ಬಾರಿ ಸಚಿವರಾಗಿರುವುದು ವಿಶೇಷತೆಯಾಗಿದ್ದರೂ ತಾಲೂಕಿನ ಕೈ ಪಾಳಯದ ನಾಯಕರಲ್ಲಿ ಭಾರಿ ಆಂತಕ ಮೂಡಿಸಿರುವುದು ಕಂಡುಬರುತ್ತಿದೆ. ಕಾಂಗ್ರೇಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸಕರ್ಾರ ಅವಧಿ ಪೂರ್ಣಗೊಳಿಸಿದಾಗ ಮಾತ್ರ ಆರ್.ಶಂಕರ್ ಅವರು ತಾಲೂಕಿನಲ್ಲಿ ನಡೆಯಬಹುದಾದ ಭವಿಷ್ಯದ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯಥರ್ಿಯಾಗಿ ಸ್ಪಧರ್ಿಸುವ ಗಟ್ಟಿತನ ಬಂದಂತಾಗಿದೆ ಎನ್ನುವುದು ತಾಲೂಕಿನ ಜನರ ಅಭಿಮತವಾಗಿದೆ.
ಆರ್.ಶಂಕರ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಪತ್ರಿಕೆ ಅವರೊಂದಿಗೆ ಮಾತನಾಡಿಸಿದಾಗ ತಮ್ಮ ಬಹುತಿಂಗಳ ನಿರೀಕ್ಷೆಯಂತೆ ಸಚಿವ ಸ್ಥಾನ ದಕ್ಕಿದೆ. ಇದರಲ್ಲಿ ಆಶ್ಚರ್ಯವೇನು ಇಲ್ಲ. ತಮ್ಮ ಆಸೆ-ನಿರೀಕ್ಷೆ ಈಡೇರಿದೆ ಅಷ್ಟೆ. ಸಧ್ಯ ಪೌರಾಡಳಿತ ಸಚಿವ ಸ್ಥಾನ ತಮ್ಮ ಪಾಲಿಗೆ ದಕ್ಕಿದೆ. ಸ್ಥಾನ ಯಾವುದೇ ಇರಲಿ ಅದರಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವ ಉದ್ಧೇಶ ನನ್ನದಾಗಿದೆ. ಸಕರ್ಾರ ಯಾವುದೇ ಸ್ಥಾನ ಕೊಟ್ಟರೂ ನಿಭಾಯಿಸುವ ಶಕ್ತಿ ಕ್ಷೇತ್ರದ ಮತದಾರರು ನೀಡಿದ್ದಾರೆ. ರಾಜ್ಯದ ಜನರ ಆಸೆಯದಂತೆ ತಾವು ಪ್ರಾಮಾಣಿಕವಾಗಿ ಕಾಯಾ-ವಾಚಾ-ಮನಸಾ ಕರ್ತವ್ಯ ನಿರ್ವಹಿಸುವ ಉದ್ಧೇಶ ತಮ್ಮದಾಗಿದೆ ಎಂದು ಉತ್ತರಿಸಿದರು