ಲೋಕದರ್ಶನ ವರದಿ
ಕೊಪ್ಪಳ 11: ಸ್ವಯಂ ಉದ್ಯೋಗ ಆಥರ್ಿಕ ಸ್ವಾಲಂಭನೆ, ನಗದು ರಹಿತ ವ್ಯಪಾರ, ಗ್ರಾಹಕರಿಗೆ ಸರಕಾರದಿಂದ ನೀಡುವ ಆಥರ್ಿಕ ಸಾಲ ಸೌಲಭ್ಯಗಳು ಗ್ರಾಹಕ ಸಾರ್ವಜನಿಕರಿಗೆ ಒದಗಿಸಿಕೊಡಲು ಪ್ರಾಮಿಣಿಕ ಪ್ರಯತ್ನ ಬ್ಯಾಂಕರ್ಸ ಮಾಡುತ್ತದೆ ದೇಶದ ಅಭಿವೃದಿಯಲ್ಲಿ ಪ್ರತಿ ಒಬ್ಬ ನಾಗರಿಕನ ಪಾಲುಗಾರಿಕೆ ಇರುತ್ತದೆ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಪ್ರಬಂಧಕರಾದ ವಾಯ್.ಎಸ್. ಸಿದ್ದೇಶ್ವರ ಹೇಳಿದರು.
ಅವರು ಮಂಗಳವಾರ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕೊಪ್ಪಳ ಶಾಖೆವತಿಯಿಂದ ಆಥರ್ಿಕ ಸಾಕ್ಷರತಾ ಸಪ್ತಾಹ ಕಾಯರ್ಾಗಾರವು ಜಿಲ್ಲಾ ಕೈಗಾರಿಕಾ ಉದ್ಯಮಶೀಲತೆ ಕೇಂದ್ರದಲ್ಲಿ ಕಾರ್ಯಗಾರದ ಉದ್ಘಾಟನೆಯನ್ನು ನೆರೆವೇರಿಸಿ ಮಾತನಾಡಿದ ಅವರು, ಗ್ರಾಹಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಾಗೃತಿ ಮೂಡಿಸಿ ಸಿಗಬಹುದಾದ ಸೌಕರ್ಯ ಒದಗಿಸಿಕೊಡಲು ನಿಟ್ಟಿನಲ್ಲಿ ಶ್ರಮಿಸಬೇಕೆಂದರು. ಇದರ ಉಪಯುಕ್ತತೆ ಕುರಿತು ಎಲ್ಲರೂ ಅರಿತು ಕೊಳ್ಳಬೇಕೆಂದು ಗ್ರಾಹಕರ ಜೊತೆಗೆ ಅವಿನಾಭಾವ ಸಂಬಂಧ ಹೊಂದಬೇಕೆಂದು ಕಾರ್ಯಗಾರದಲ್ಲಿ ವಿವರಿಸಿದರು.
ಕಾರ್ಯಗಾರದ ಪ್ರಾಸ್ತಾವಿಕ ನುಡಿಗಳನ್ನು ಮತ್ತು ಆರ್ಥಿಕ ಸಾಕ್ಷರತೆ ಕುರಿತು ಸವಿವರವಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕೊಪ್ಪಳ ಶಾಖೆಯ ಹಿರಿಯ ಪ್ರಬಂಧಕರಾದ ಬೊಮ್ಮಣ್ಣ ಅಕ್ಕಸಾಲಿ ಫಲಾನುಭವಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಉದ್ಯಮಶೀಲ ಅಭಿವೃದ್ಧಿ ಕೇಂದ್ರ ಕೊಪ್ಪಳದ ಅಧಿಕಾರಿ ದತ್ತಾತ್ರೇಯ ರುಡ್ಸೆಟ್, ಕೊಪ್ಪಳದ ನಿರ್ದೇಶಕರಾದ ವಿ.ಎಸ್. ಕೊಲ್ಲಾಪುರ ಹಾಗೂ ಜಿಲ್ಲಾ ಖಾದಿ ಮತ್ತು ಗ್ರಾಮೀಣ ಕೈಗಾರಿಕೆ ಮಂಡಳಿಯ ಜಿಲ್ಲಾ ಅಧಿಕಾರಿ ವೀರೇಶ್, ಸರ್ಮೋದಯ ಸಂಸ್ಥೆ ಕೊಪ್ಪಳ ಜಿಲ್ಲೆಯ ಜಿಲ್ಲಾ ಅಧ್ಯಕ್ಷರು ನಾಗರಾಜ್ ದೇಸಾಯಿ ಪಾಲ್ಗೊಂಡಿದ್ದರು. ಕಾರ್ಯಕಮವನ್ನು ವೀರೇಶ್ ಕೂಲಿ ನಿರೂಪಿಸಿ ವಂದಿಸಿದರು.