ಕೊಪ್ಪಳ 18: ಪ್ರತಿಯೊಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ನಗರಸಭೆ ಹಿರಿಯ ಸದಸ್ಯ ಅಮ್ಜದ್ ಪಟೇಲ್ ಹೇಳಿದರು.
ಅವರು ನಗರದ ಗಡಿಯಾರ ಕಂಬದ ಬಳಿ ದೀನಿಯಾ ಹಬೀಬಿಯಾ ಮದ್ರಸಾದ 5ನೇ ವಾಷರ್ಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೋಂಡು ಮಾತನಾಡಿ ಇಂದು ಪಾಲಕರು ಮಕ್ಕಳಿಗೆ ಯಾವುದೇ ಅಸ್ತಿ ಮಾಡದೇ ಮಕ್ಕಳಿಗೆ ಉತ್ತಮ ಶಿಕ್ಷಣ ಎಂಬ ಆಸ್ತಿ ಮಾಡಿ ಅಂದಾಗ ಮಕ್ಕಳು ಶೈಕ್ಷಣೀಕತೆಯಿಂದ ಸಂಪೂರ್ಣ ಪರಿವರ್ತನೆಯಾಗಿ ದೇಶಕ್ಕೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದ ಅವರು ಮೊದಲು ಬೇರೆಡೆ ಹೋಗಿ ಶಿಕ್ಷಣ ಕಲಿಯುವ ಪರಿಸ್ಥಿತಿ ಇತ್ತು ಆದರೆ ಇಂದು ಸಮಾಜದ ಎಲ್ಲಾ ಧಾಮರ್ಿಕ ಗುರುಗಳ ಸಹಾಯ ಸಹಕಾರದಿಂದ ಇಲ್ಲಿಯೇ ಕಲಿಯುವ ಅವಕಾಶವಿದೆ ಇಂತಹ ಪುಣ್ಯದ ಕಾರ್ಯಕ್ಕೆ ಎಲ್ಲಾರೂ ಸಹಕರಿಸೋಣ ಎಂದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪಾಷಾ ಕಾಟನ್ ಮಾತನಾಡಿ ಮುಸ್ಲಿಂ ಸಮಾಜ ಶೈಕ್ಷಣೀಕವಾಗಿ ತೀರ ಹಿಂದುಳಿದಿದ್ದು ಎಲ್ಲಾರೂ ಶಿಕ್ಷಣ ಪಡೆದರೆ ಸಮಾಜದ ಅಭಿವೃದ್ಧಿಯಾಗುತ್ತದೆ ಎಂದರು.
ಜಿ.ಪಂ. ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ.ರಾಜಶೇಖರ ಹಿಟ್ನಾಳ್, ಗಂಗಾವತಿಯ ಮುಸ್ತಫಾ ಅಹ್ಮದ್ ಕಮಾಲ್ ಪಾಷ ಮಾತನಾಡಿದರು. ದಿವ್ಯ ಸಾನಿಧ್ಯವನ್ನು ಧಾಮರ್ಿಕ ಗುರುಗಳಾದ ಮುಹಮ್ಮದ್ ನೂರುಲ್ಲಾ ತಹೆಸೀನ್, ಸಾಹೇಬ್ ಪೀರ್ ಮುಹಮ್ಮದ್ ಮುಹಮ್ಮದುಲ್ ಹುಸೈನಿ, ಸೂಫಿ ಮುಹಮ್ಮದ್ ಬಕ್ಷಿ ತಸ್ಕೀನ್, ಸೇರಿದಂತೆ ಇತರ ಧಾಮರ್ಿಕ ಗುರುಗಳು ವಹಿಸಿದ್ದರು. ದೀನಿಯಾ ಹಬೀಬಿಯಾ ಮದ್ರಸಾದ 5ನೇ ವಾಷರ್ಿಕೋತ್ಸವದ ಪದವಿ ವಿತರಣಾ ಸಮಾರಂಭ ಜರುಗಿತು.
ವೇದಿಕೆಯ ಮೇಲೆ ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದಶರ್ಿ ಕೆ.ಎಂ.ಸೈಯದ್, ನಗರಸಭೆ ಸದಸ್ಯರಾದ ಅಕ್ಬರ್ ಪಾಷಾ ಪಲ್ಟನ್, ಅಜೀಮುದ್ದೀನ್ ಅತ್ತಾರ್, ಬಸಯ್ಯ ಹಿರೇಮಠ, ಬಾಬಾ ಅರಗಂಜಿ, ಮುಖಂಡರಾದ ಸಿದ್ದಲಿಂಗಪ್ಪ, ವಾಸುದೇವ,ಯೂಸುಫಿಯಾ ಮಸ್ಜಿದ್ ಅಧ್ಯಕ್ಷ ಸೈಯದ್ ಹಜ್ರತ್ಪಾಷ ಖಾದ್ರಿ, ಖತೀಬ ಬಾಷುಸಾಬ, ಮೌಲಾಹುಸೇನ್ ಜಮೇದಾರ, ಫೀರಾಹುಸೇನ್ ಚಿಕನ್,ಸೇರಿದಂತೆ ಸಮಾಜದ ಹಿರಿಯರು ಉಪಸ್ಥಿತರಿದ್ದರು.