ಲೋಕದರ್ಶನ ವರದಿ
ಕುಕನೂರ 18: ಜಂಗಮರು ಸಂಸ್ಕಾರವಂತರಾಗಿ ಬಾಳಿ, ಸಮಾಜವನ್ನ ತಿದ್ದುವ ಕಾಯಕ ಮಾಡಿದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ, ಜಂಗಮರು ಎಲ್ಲಾ ವರ್ಗದ ಜನರ ಗುರುಗಳು ಎಂದು ಶ್ರೀಮಠದ ಪೂಜ್ಯ ಮಹಾದೇವ ದೇವರು ಹೇಳಿದರು.
ಅವರು ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ನಡೆದ ವೀರಶೈವ ಜಂಗಮ ಸಂಘದ ಉದ್ಘಾಟನಾ ಸಮಾರಂಭ ಮತ್ತು ಜಂಗಮ ಕಾಯಕಯೋಗಿಗಳಿಗೆ ರೇಣಕಚಾರ್ಯ ಪ್ರಶಸ್ತಿ 2020ನೀಡಿ ಗೌರವಿಸಿ ಮಾತನಾಡುತ್ತಾ ಜಂಗಮರು ಕ್ರೀಯಾಶಿಲರಾಗಬೇಕು, ತಮ್ಮ ಮಕ್ಕಳಿಗೆ ನಮ್ಮ ಪರಂಪರೆಯನ್ನ ತಿಳಿಸಿ ಅವರಲ್ಲಿ ಜಂಗಮನ ಕಾಯಕ ಬಗ್ಗೆ ಪಾಲಕರೇ ಅರಿವು ಮೂಡಿಸಬೇಕು, ಮಕ್ಕಳು ನೌಕರಿ ಮಾಡುವುದಕ್ಕಿಂತ ಒಳ್ಳೆಯ ಸಂಸ್ಕಾರವಂತ ಮಗನಾಗಿ ಸಮಾಜದ ಎಲ್ಲಾ ವರ್ಗದ ಜನರ ಮನಸ್ಸನ್ನ ಗೆಲ್ಲುವ ಒಬ್ಬ ಉತ್ತಮ ಜಂಗಮನಾಗಬೇಕು, ವೀರಶೈವ ಪರಂಪರೆಯ ಆಚಾರಗಳನ್ನ ರೂಡಿಸಿಕೊಂಡು ಸದಾಕಾಲ ಲಿಂಗದಾರಿಯಾಗಿ ಧರ್ಮ ಕಾಪಾಡುವ ಕಾರ್ಯ ಜಂಗಮರಿಂದ ನಡೆಯಬೇಕು, ಜಂಗಮರೇ ಸಂಸ್ಕಾರವಂತರಾಗದಿದ್ದರೆ ಸಮಾಜವನ್ನ ತಿದ್ದಲು ಸಾಧ್ಯವಿಲ್ಲ ಎಂದರು.
ನಂತರ ಮಾತನಾಡಿದ ಸಮಾಜದ ಯುವ ಮುಖಂಡ ಕರಬಸಯ್ಯ ಬಿನ್ನಾಳ ಹಿರೇಮಠ ಜಂಗಮ ಸಮಾಜದ ಸಂಘಟನೆ ನಿಂತ ನೀರಾಗಿದೆ, ಸಮಾಜ ಒಂದಾಗದ ಹೊರತು ನಮ್ಮ ಬೇಡಿಕೆಗಳನ್ನ ಸಕರ್ಾರದಿಂದ ಪಡೆಯಲು ಸಾಧ್ಯವಿಲ್ಲ, ಸಮಾಜಕ್ಕಿಂತ ಯಾರು ದೊಡ್ಡವರಲ್ಲ, ಸಮಾಜಕ್ಕೆ ಎಲ್ಲರ ಸೇವೆ ಅವಶ್ಯ, ನಾನು ಮಾಡಿದೆ ನನ್ನಿಂದ ಸಮಾಜ ಎನ್ನುವುದನ್ನ ಬಿಟ್ಟು ಸಮಾಜಕ್ಕಾಗಿ ಎಲ್ಲಾರು ಹೊಂದಾಗಬೇಕಾಗಿದೆ, ನಮ್ಮಲ್ಲಿಯ ಸಂಘಟನೆಯ ಕೊರತೆಯಿಂದ ನಮ್ಮ ಸಮಾಜ ಹಿಂದುಳಿಯಲು ಕಾರಣ, ಇಂದಿನ ಯುವಕರು ಸಮಾಜದ ಸಂಘಟನೆಗೆ ಹಿರಿಯರ ಮಾರ್ಗದರ್ಶದಲ್ಲಿ ಮತ್ತು ನಮ್ಮ ಪೂಜ್ಯ ಮಹಾದೇವ ದೇವರ ಸಲಹೆಯಂತೆ ಸಮಾಜದ ಸಂಘಟನೆ ನಡೆಯಬೇಕು ಎಂದರು.
ಬೇಡ ಜಂಗಮ ಸಮಾಜದ ರಾಜ್ಯಾಧ್ಯಕ್ಷ ವೀರೇಂದ್ರ ಪಾಟೀಲ ಮಾತನಾಡಿ ನಿಮ್ಮ ಹಕ್ಕುಗಳನ್ನ ಕಾನೂನಿನ ಚೌಕಟ್ಟಿನಲ್ಲಿ ಪಡೆಯಲು ತಾವುಗಳು ಪಡೆಯಲು ಹೋರಾಟ ಮಾತ್ರ ನಮ್ಮ ಹಕ್ಕುಗಳು ನಮಗೆ ಸಿಗಲು ಸಾಧ್ಯ, ನಾವು ನಮ್ಮ ಹಕ್ಕುಗಳನ್ನ ಕೇಳದಿದ್ದರೆ ಅವುಗಳು ಸಿಗಲು ಸಾದ್ಯವಿಲ್ಲ, ನಮ್ಮ ಸಮಾಜಕ್ಕೆ ಪುರಾತನ ಪರಂಪರೆಯಿದೆ ಆ ಪರಂಪರೆ ಉಳಿಯಬೇಕಾದರೆ ನಾವು ಸಂಘಟಿತರಾಗಬೇಕು ಈ ನಿಟ್ಟಿನಲ್ಲಿ ಕುಕನೂರಿನ ಜಂಗಮ ಸಂಘದ ಕಾರ್ಯ ಶ್ಲಾಘನೀಯವಾದದ್ದು, ಇವರ ಕಾರ್ಯಕ್ಕೆ ಸರ್ವರ ಸಹಕಾರ ಬೇಕು ಅಣದಾಗ ಮಾತ್ರ ಈ ಸಂಘಟನೆ ಬೆಳೆಯಲು ಸಾದ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಮಾಜ ಸೇವೆ, ಶಿಕ್ಷಣ ರಂಗ, ಕಾಮರ್ಿಕ ರಂಗ, ವೈದಿಕ ಕ್ಷೇತ್ರ, ರಾಜಕೀಯ ಕ್ಷೇತ್ರ, ಕಲಾವಿದರು, ಸೈನಿಕ ಕ್ಷೇತ್ರ, ವ್ಯಾಪಾರ ಕ್ಷೇತ್ರ, ವಕೀಲರು, ಪತ್ರಿಕಾ ರಂಗ, ಕೃಷಿ ಕ್ಷೇತ್ರ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ 101 ಜನ ಜಂಗಮ ಕಾಯಕಯೋಗಿಗಳಿಗೆ ರೇಣುಕಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬೆದವಟ್ಟಿ ಹಿರೇಮಠದ ಷ ಬ್ರ ಶಿವಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ವಿ ಎಮ್ ಭೂಸನೂರಮಠ ಕೊಪ್ಪಳ, ರುದ್ರಯ್ಯ ಹಿರೇಮಠ ವಕೀಲರು, ಅನಿಲ ಆಚಾರ, ಶಂಭು ಜೋಳದ, ಹಂಪಯ್ಯ ಹಿರೇಮಠ, ರವಿ ವಸ್ತ್ರದ, ಮಲ್ಲಿಕಾರ್ಜುನಯ್ಯ ಶಾಸ್ತ್ರೀಮಠ, ಬಸಯ್ಯ ಕುಡಗುಂಟಿ, ಮಹೇಶ ಕಲ್ಮಠ, ಸಿದ್ದಲಿಂಗಸ್ವಾಮಿ ಕಲ್ಮಠ, ಶಿವುಕುಮಾರ ಸರಗಣಾಚಾರ, ಜಯಕುಮಾರ ಅಂಟಿಮಠ, ಗದಿಗೆಪ್ಪ ಪವಾಡಶೆಟ್ಟಿ, ಸಂಗಮೇಶ ಕಲ್ಮಠ, ಶರಣಯ್ಯ ಶಸಿಮಠ, ಸಿದ್ದು ಉಳ್ಳಾಗಡ್ಡಿ, ಗವಿಸಿದ್ದಯ್ಯ ಜಂತ್ಲಿ, ರುದ್ರಮುನಿ ಶಾಸ್ತ್ರೀಗಳು, ವೀರಯ್ಯ ತೋಂಟದಾರ್ಯಮಠ, ಶಿವುಕುಮಾರ ನಾಗಲಾಪುರಮಠ, ಜಂಬಯ್ಯಸ್ವಾಮಿ ಹಿರೇಮಠ, ಜಗದೀಶಯ್ಯ ಕಳ್ಳಿಮಠ, ಅಮರೇಶ ಕಂದಗಲ್ಲಮಠ, ಈಶಯ್ಯ ಶಿರೂರಮಠ ಮತ್ತು ಇನ್ನಿತರು ಇದ್ದರು.