ಲಿಬಿಯಾದಿಂದ 62 ಅಕ್ರಮ ವಲಸಿಗರ ಗಡೀಪಾರು

 ಟ್ರಿಪೊಲಿ, ನವೆಂಬರ್ 18 :   ಲಿಬಿಯಾ  62 ಅಕ್ರಮ ವಲಸಿಗರನ್ನು ಚಾಡ್ ಮತ್ತು ಸುಡಾನ್ಗೆ ಗಡೀಪಾರು ಮಾಡಿದೆ ಎಂದು ಸರಕಾರದ ವಲಸೆ  ನಿಯಂತ್ರಣ ಇಲಾಖೆ ಪ್ರಕಟಿಸಿದೆ.    ಚಾಡ್ ಮತ್ತು ಸುಡಾನ್ ಜೊತೆಗಿನ ದಕ್ಷಿಣದ ಗಡಿಗಳ ಮೂಲಕ ವಲಸಿಗರನ್ನು ಗಡೀಪಾರು ಮಾಡಲಾಗಿದೆ ಎಂದು ಇಲಾಖೆ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.    ಲಿಬಿಯಾದಲ್ಲಿ 650,000 ಕ್ಕೂ ಹೆಚ್ಚು ಅಕ್ರಮ ವಲಸಿಗರು ಇದ್ದು,  ಅವರಲ್ಲಿ 6,000 ಮಹಿಳೆಯರು ಮತ್ತು ಮಕ್ಕಳನ್ನು  ಬಂಧನ ಕೇಂದ್ರಗಳಲ್ಲಿ ಬಂಧಿಸಲಾಗಿದೆ ಎಂದೂ  ವಲಸೆಯ ಅಂತಾರಾಷ್ಟ್ರೀಯ ಸಂಸ್ಥೆ ಇತ್ತೀಚೆಗೆ ಹೇಳಿತ್ತು .    2011 ರಲ್ಲಿ ತನ್ನ ಮಾಜಿ ನಾಯಕ ಮಹಮ್ಮದ್  ಗಡಾಫಿ ಪತನವಾದಾಗಿನಿಂದಲೂ ದೇಶವು ಅಸುರಕ್ಷತೆ  ಮತ್ತು ಗೊಂದಲದಲ್ಲಿ ಸಿಲುಕಿದ್ದು, ಪರಿಣಾಮ   ಅಕ್ರಮ ವಲಸಿಗರ ಸಮಸ್ಯೆಯೂ ಹೆಚ್ಚಾಗಿದೆ.