ಲೋಕದರ್ಶನವರದಿ
ಮಹಾಲಿಂಗಪುರ: ಮಹಾಲಿಂಗಪುರ ಪುರಸಭೆ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಹಾಗೂ ವಸತಿ ತೆರಿಗೆಗಳನ್ನು ಹೆಚ್ಚಿಸುವ ಸಾರ್ವಜನಿಕ ಪ್ರಕಟಣೆಯನ್ನು ವಿರೋಧಿಸಿ ಹಾಗೂ ನಾಗರಿಕರ ಮೂಲಭೂತ ಸೌಕರ್ಯ ಜಾರಿಗೆ ತರುವಂತೆ ಒತ್ತಾಯಿಸಿ ಕನರ್ಾಟಕ ರಾಜ್ಯ ನೇಕಾರರ ಸೇವಾ ಸಂಘ ರಾಜ್ಯ ಸಕರ್ಾರಕ್ಕೆ ಪುರಸಭೆ ಮುಖ್ಯಾಧಿಕಾರಿಯ ಮೂಲಕ ತೀವ್ರವಾಗಿ ಒತ್ತಾಯಿಸಿದೆ.
ಅದೇ ರೀತಿ ಪಟ್ಟಣ 50 ಸಾವಿರ ಜನಸಂಖ್ಯೆ ಹೊಂದಿದ್ದು, ಇಲ್ಲಿ ಸಾರ್ವಜನಿಕ ಗ್ರಂಥಾಲಯಕ್ಕೆ ಸೂಕ್ತ ಕಟ್ಟಡವಿಲ್ಲೆ ವಾಚಕರು ಪರದಾಡುವಂತಾಗಿದೆ.
ಅದೇ ರೀತಿ ಪಟ್ಟಣದಲ್ಲಿ ಇರುವ ಮೊರಾಜರ್ಿ ವಸತಿ ಶಾಲೆಯನ್ನು ಬೇರೆ ಪಟ್ಟಣಕ್ಕೆ ಸ್ಥಳಾಂತರಿಸುವುದನ್ನು ವಿರೋಧಿಸಿ ಹಾಗೂ ನಗರೋತ್ಥಾನ ಯೋಜನೆಯಲ್ಲಿ ನಿಮರ್ಾಣವಾಗುತ್ತಿರುವ ಕಾಮಗಾರಿಗಳು ಆಮೆ ಗತಿಯಲ್ಲಿ ಸಾಗಿದ್ದು ತಕ್ಷಣವೇ ಕಾಮಗಾರಿಯನ್ನು ಪೂರೈಸುವಂತೆ ಈ ಸಂದರ್ಭದಲ್ಲಿ ನೆರೆದ ನೂರಾರು ಸಾರ್ವಜನಿಕರು ಮನವಿ ಮೂಲಕ ಆಗ್ರಹಿಸಿದ್ದಾರೆ.
ಜೊತೆಗೆ ಒಂದು ತಿಂಗಳ ಗಡುವನ್ನು ಕೂಡ ನೀಡಿ, ಎಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
ಶಿವಾನಂದ ಟಿರಕಿ, ನಿಂಗಪ್ಪ ಬಾಳಿಕಾಯಿ, ಸುರೇಶ ಮಡಿವಾಳ, ಅಜರ್ುನ ಬಂಡಿವಡ್ಡರ ಮಾತನಾಡಿದರು. ಶ್ರೀಶೈಲ ಕೋಳಿಗುಡ್ಡ, ರಾಜೇಂದ್ರ ಮಿಜರ್ಿ, ಚನ್ನಪ್ಪ ಹುಣಶ್ಯಾಳ, ವಿರೇಶ ನ್ಯಾಮಗೌಡರ, ವಿವಿಧ ಸಂಘಟನೆಯ ಮುಖಂಡರು ಪಾಲ್ಗೊಂಡಿದ್ದರು.